ಜೈ ಶ್ರೀ ರಾಮ್‌ ಘೋಷಣೆ ಕೂಗುವಂತೆ ಅನ್ಯ ಕೋಮಿನ ವ್ಯಕ್ತಿ ಮೇಲೆ ಹಲ್ಲೆ!

Published : Aug 13, 2021, 09:09 AM IST
ಜೈ ಶ್ರೀ ರಾಮ್‌ ಘೋಷಣೆ ಕೂಗುವಂತೆ ಅನ್ಯ ಕೋಮಿನ ವ್ಯಕ್ತಿ ಮೇಲೆ ಹಲ್ಲೆ!

ಸಾರಾಂಶ

* ಅನ್ಯ ಕೋಮಿನ ವ್ಯಕ್ತಿಯನ್ನು ರಸ್ತೆಯಲ್ಲಿ ಬಜರಂಗದಳದ ಕಾರ್ಯಕರ್ತರು ಥಳಿಸಿದ ಘಟನೆ * ಜೈ ಶ್ರೀ ರಾಮ್‌ ಘೋಷಣೆ ಕೂಗುವಂತೆ ಅನ್ಯ ಕೋಮಿನ ವ್ಯಕ್ತಿ ಮೇಲೆ ಹಲ್ಲೆ * ಹಲ್ಲೆ ನಡೆಯುವ ವೇಳೆ ಆ ವ್ಯಕ್ತಿಯ ಚಿಕ್ಕ ಮಗು ರಕ್ಷಿಸುವಂತೆ ಅಳುತ್ತಿರುವ ವಿಡಿಯೋ ವೈರಲ್‌

ಲಖನೌ(ಆ.13): ‘ಜೈ ಶ್ರೀ ರಾಮ್‌’ ಘೋಷಣೆ ಹೇಳಲು ಒತ್ತಾಯಿಸಿ 45 ವರ್ಷದ ಅನ್ಯ ಕೋಮಿನ ವ್ಯಕ್ತಿಯನ್ನು ರಸ್ತೆಯಲ್ಲಿ ಬಜರಂಗದಳದ ಕಾರ್ಯಕರ್ತರು ಥಳಿಸಿದ ಘಟನೆ ಉತ್ತರ ಪ್ರದೇಶದ ಕಾನ್ಪುರ ನಗರದಲ್ಲಿ ನಡೆದಿದೆ. ಈ ಹಲ್ಲೆ ನಡೆಯುವ ವೇಳೆ ಆ ವ್ಯಕ್ತಿಯ ಚಿಕ್ಕ ಮಗು ರಕ್ಷಿಸುವಂತೆ ಅಳುತ್ತಿರುವ ವಿಡಿಯೋ ವೈರಲ್‌ ಆಗಿದೆ.

‘ಮುಸಲ್ಮಾನರು ಹಿಂದು ಹುಡುಗಿಯನ್ನು ಮದುವೆ ಮಾಡುವ ಮೂಲಕ ಮತಾಂತರ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಬೇಕು’ ಎಂದು ಬಜರಂಗದಳ ಕಾರ್ಯಕ್ರಮವನ್ನು ನಡೆಸುತ್ತಿತ್ತು. ಈ ಕಾರ್ಯಕ್ರಮ ಮುಗಿದ ನಂತರ ಆ ಮುಸ್ಲಿಂ ಕುಟುಂಬದ ಸಂಬಂಧಿಕನಾಗಿದ್ದ ಈತನನ್ನು ಮುಗಿದ ಕೆಲವರು ಥಳಿಸಿದ ಘಟನೆ ನಡೆದಿದೆ. ‘ನನ್ನ ಪಾಡಿಗೆ ಆಟೋ ಓಡಿಸುತ್ತಿದ್ದೆ ಕೆಲವರು ಅಡ್ಡಗಟ್ಟಿಜೈ ಶ್ರೀ ರಾಮ್‌ ಎಂದು ಹೇಳುವಂತೆ ಒತ್ತಾಯಿಸಿ ಹಲ್ಲೆ ನಡೆಸಿದರು. ಪೊಲೀಸರು ನನ್ನನ್ನು ರಕ್ಷಿಸಿದರು’ ಎಂದು ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು 10 ಜನರನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!