ಕಲ್ಯಾಣದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ತನ್ನ ಹೆಂಡತಿಯ ಮೇಲೆ ತವರು ಮನೆಯಿಂದ ಹಣ ತರಲು ಮತ್ತು ತನ್ನ ಬಾಸ್‌ನೊಂದಿಗೆ ದೈಹಿಕ ಸಂಬಂಧ ಹೊಂದಲು ಒತ್ತಡ ಹೇರಿದ್ದಾನೆ. ಹೆಂಡತಿ ನಿರಾಕರಿಸಿದಾಗ, ಅವಳನ್ನು ಥಳಿಸಿ ತ್ರಿವಳಿ ತಲಾಖ್ ನೀಡಿ ಮನೆಯಿಂದ ಹೊರಹಾಕಿದ್ದಾನೆ.
ಮುಂಬೈ (ಡಿ.24): ಮಹಾರಾಷ್ಟ್ರದ ಕಲ್ಯಾಣದಲ್ಲಿ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ತನ್ನ ಹೆಂಡತಿಯ ಮೇಲೆ ತವರು ಮನೆಯಿಂದ 15 ಲಕ್ಷ ರೂಪಾಯಿ ತರಲು ಮತ್ತು ತನ್ನ ಬಾಸ್‌ನೊಂದಿಗೆ ದೈಹಿಕ ಸಂಬಂಧ ಹೊಂದಲು ಒತ್ತಡ ಹೇರಿದ್ದಾನೆ. ಹೆಂಡತಿ ನಿರಾಕರಿಸಿದಾಗ, ಅವಳನ್ನು ಥಳಿಸಿ, ಕೋಪದಿಂದ ತ್ರಿವಳಿ ತಲಾಖ್ ನೀಡಿ ಮನೆಯಿಂದ ಹೊರಹಾಕಿದ್ದಾನೆ.
ಸಂತ್ರಸ್ತ ಮಹಿಳೆ ಛತ್ರಪತಿ ಸಂಭಾಜಿ ನಗರದ ನಿವಾಸಿ. ಈ ವರ್ಷದ ಜನವರಿಯಲ್ಲಿ ಕಲ್ಯಾಣದ ಒಂದು ಹೈ-ಪ್ರೊಫೈಲ್ ಪ್ರದೇಶದಲ್ಲಿ ವಾಸಿಸುವ ಸಾಫ್ಟ್‌ವೇರ್ ಇಂಜಿನಿಯರ್ ಜೊತೆ ಮದುವೆಯಾಗಿತ್ತು. ಮೊದಲ ಕೆಲವು ತಿಂಗಳುಗಳು ಸಾಮಾನ್ಯವಾಗಿದ್ದವು. ಆದರೆ, ಕೆಲವೇ ದಿನಗಳಲ್ಲಿ ಗಂಡನ ವರಸೆ ಬದಲಾಗಿದ್ದು, ವರದಕ್ಷಿಣೆ ಹಣವಾಗಿ 15 ಲಕ್ಷ ರೂ. ಹಣವನ್ನು ತರುವಂತೆ ಕಿರುಕುಳ ನೀಡಿ ತವರು ಮನೆಗೆ ಕಳುಹಿಸಲು ಮುಂದಾಗಿದ್ದಾನೆ. ನಿಮಗೆ ಇಷ್ಟೊಂದು ಹಣ ಏಕೆ ಎಂದು ಕೇಳಿದಾಗ ನನ್ನ ಮೊದಲ ಹೆಂಡತಿಗೆ ವಿಚ್ಛೇದನ ಪರಿಹಾರ ನೀಡಲು ಹಣ ಬೇಕು ಎಂದು ಹೇಳಿದ್ದನು. ಇದಾದ ನಂತರ ಹಣ ಕೊಡಿದ್ದಾಗ ಮತ್ತೆ ಕಿರುಕುಳ ಆರಂಭಿಸಿದ್ದಾನೆ.
undefined
ಒಮ್ಮೆ ಅವರ ಕಚೇರಿಯಲ್ಲಿ ಪಾರ್ಟಿ ಮಾಡುತ್ತಿರುವಾಗ ತನ್ನ ಹೆಂಡತಿಯನ್ನೂ ಪಾರ್ಟಿಗೆ ಕರೆದೊಯ್ದ ಇಂಜಿನಿಯರ್ ಗಂಡ, ತನ್ನ ಹೆಂಡತಿಯನ್ನು ಬಾಸ್‌ನೊಂದಿಗೆ ಮಲಗಿಸಲು ಮುಂದಾಗಿದ್ದಾನೆ. ನನ್ನ ಬಾಸ್ ನಿನ್ನನ್ನು ನೋಡಿ ಇಷ್ಟಪಟ್ಟಿದ್ದು ಅವರೊಂದಿಗೆ ಮಲಗಿ ದೈಹಿಕ ಸುಖ ನೀಡುವಂತೆ ಹಜೇಳಿದ್ದಾನೆ. ಇದಕ್ಕೆ ವಿರೋಧಿಸಿದಾಗ ಅಲ್ಲಿಯೇ ಮನಸೋ ಇಚ್ಛೆ ಥಳಿಸಿ ಮೂರು ಬಾರಿ ತಲಾಖ್ ಹೇಳಿದ್ದಾನೆ. ಅಲ್ಲಿಂದ ಮನೆಗೆ ಹೆಂಡತಿ ಕರೆದುಕೊಂಡು ಬಂದು ನನ್ನ ನಿನ್ನ ವಿವಾಹ ಸಂಬಂಧ ಮುರಿದುಬಿತ್ತು ಎಂದು ಹೇಳಿ ಮನೆಯಿಂದ ಹೊರಗೆ ಹಾಕಿದ್ದಾನೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾಳೆ.
ಇದನ್ನೂ ಓದಿ: ಡಿ.ಕೆ. ಸುರೇಶ್ ತಂಗಿ ಎಂದೇಳಿ 14 ಕೆಜಿ ಬಂಗಾರಕ್ಕೆ ಪಂಗನಾಮ ಹಾಕಿದ ಐಶ್ವರ್ಯಾ ಗೌಡ; ನಟ ಧರ್ಮೇಂದ್ರನೂ ಸಾಥ್!
ಇದಾದ ನಂತರ ಮಹಿಳೆ ಡಿ.19 ರಂದು ಸಂಭಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನು ಮರುದಿನ ಕಲ್ಯಾಣದ ಬಜಾರ್‌ಪೇಟ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ಆರೋಪಿ ಗಂಡನ ವಿರುದ್ಧ ಮುಸ್ಲಿಂ ಮಹಿಳಾ ವಿವಾಹ ಸಂರಕ್ಷಣಾ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕೇಸನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಜನರಿಂದ ಸೂಕ್ತ ನ್ಯಾಯಕ್ಕಾಗಿ ಆಗ್ರಹ ಉಂಟಾದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ತನಿಖೆ ಮಾಡಲಾಗುತ್ತಿದೆ ಎಂದು ಪ್ರಾದೇಶಿಕ ಪೊಲೀಸರು ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಸ್ಥಳೀಯರಿಂದಲೂ ಆಕ್ರೋಶ ವ್ಯಕ್ತವಾಗಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆಯ ನಂತರ ಸತ್ಯಾಂಶ ಹೊರಬೀಳಲಿದ್ದು, ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಏನೇ ಚಿನ್ನ ನಿನ್ನ ಗುನ್ನಾ: ಶ್ವೇತಾ ಗೌಡ ಕೊಟ್ಟ ಹಣ, ಚಿನ್ನಾಭರಣ ವಾಪಸ್ ಕೊಟ್ಟ ವರ್ತೂರು ಪ್ರಕಾಶ್!