
ಮುಂಬೈ(ಏ.12): ಕೊರೋನಾ ವೈರಸ್ ದೇಶದಲ್ಲಿ ಅಪಾಯದ ಮಟ್ಟಕ್ಕೆ ತಲುಪಿದೆ. ಪ್ರತಿ ದಿನ 1.50 ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದೆ. ಅದರಲ್ಲೂ ಮುಂಬೈ ಕೊರೋನಾ ಆರ್ಭಟಕ್ಕೆ ಸಂಪೂರ್ಣ ಮಹರಾಷ್ಟ್ರ ನಲುಗಿ ಹೋಗಿದೆ. ಸೋಂಕಿತರ ಸಂಖ್ಯೆ ಹೆಚ್ಚಳದಿಂದ ಆಸ್ಪತ್ರೆಗಳು ಭರ್ತಿಯಾಗಿದೆ. ಇದೀಗ ಸೂಕ್ತ ಚಿಕಿತ್ಸೆಗೆ ಸೋಂಕಿತರು ಬೆಡ್ ಸಿಗದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮುಂಬೈ ಮಹಾನಗರ ಪಾಲಿಗೆ ಇದೀಗ ಸ್ಟಾರ್ ಹೊಟೆಲ್‌ಗಳನ್ನು ಆಸ್ಪತ್ರೆ ಮಾಡಲು ಮುಂದಾಗಿದೆ.
ಕೊರೊನಾ ಸೋಂಕು ಹೆಚ್ಚಳ: ಮತ್ತೆ ಲಾಕ್‌ಡೌನ್ ಸುಳಿವು ಕೊಟ್ಟ ಸಿಎಂ
ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ಮುಂಬೈನಲ್ಲಿನ ಕೋವಿಡ್ ಆಸ್ಪತ್ರೆಗಳು ಭರ್ತಿಯಾಗಿದೆ. ಜನರು ಬೆಡ್ ಸಿಗದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣಕ್ಕಾಗಿ ಮುಂಬೈನ ಕೆಲ 4 ಸ್ಟಾರ್ ಹಾಗೂ 5 ಸ್ಟಾರ್ ಹೊಟೆಲ್‌ಗಳನ್ನು ಕೋವಿಡ್ ಆಸ್ಪತ್ರೆಗಳಾಗಿ ಪರಿವರ್ತಿಸಲು ಮುಂಬೈ ಪಾಲಿಕೆ ಮುಂದಾಗಿದೆ.
ದಿಲ್ಲಿಯ 4ನೇ ಅಲೆ ಅತಿಹೆಚ್ಚು ಅಪಾಯಕಾರಿ!
ಈ ಕುರಿತು ಮುಂಬೈ ಮಹಾನಗರ ಪಾಲಿಕೆ ಕಮಿಷನರ್ ಇಕ್ಬಾಲ್ ಸಿಂಗ್ ಚಹಾಲ್ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಸೋಂಕಿತರ ಚಿಕಿತ್ಸೆಗೆಗಾಗಿ ಬೃಹತ್ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುತ್ತಿದೆ. ಆದರೆ ಅಲ್ಲೀವರೆಗೆ ಹೊಟೆಲ್‌ಗಳನ್ನು ಆಸ್ಪತ್ರೆಗಳನ್ನಾಗಿ ಪರಿವರ್ತಿಸಿ ಚಿಕಿತ್ಸೆ ನೀಡಲಾಗವುದು. ಜನರು ಕೋವಿಡ್ ಮಾರ್ಗಸೂಚಿ ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಇಕ್ಬಾಲ್ ಹೇಳಿದ್ದಾರೆ.
ಮುಂಬೈ ಪಾಲಿಕೆ ಆನ್‌ಲೈನ್ ಬೆಡ್ ಹಂಚಿಕೆಯಲ್ಲಿನ ಮಾಹಿತಿ ಪ್ರಕಾರ , ನಗರದ 141 ಆಸ್ಪತ್ರೆಗಳಲ್ಲಿ 19,151 ಹಾಸಿಗೆಗಳಿವೆ. 19,151 ಹಾಸಿಗೆಗಳಲ್ಲಿ 3,777 ಮೀಸಲಾದ COVID-19 ಆಸ್ಪತ್ರೆಗಳು ಪ್ರಸ್ತುತ ಖಾಲಿಯಾಗಿಲ್ಲ ಎಂದು ಇಕ್ಬಾಲ್ ಹೇಳಿದ್ದಾರೆ. ಮುಂದಿನ ವಾರದಲ್ಲಿ, ಪಾಲಿಕೆ 125 ಐಸಿಯು ಹಾಸಿಗೆಗಳು ಸೇರಿದಂತೆ 1,100 ಹೆಚ್ಚುವರಿ ಬೆಡ್‌ಗಳನ್ನು ಕಾರ್ಯಗತಗೊಳಿಸಲಿದೆ.
2,000 ಬೆಡ್ ಸೌಲಭ್ಯದ ಆಸ್ಪತ್ರೆ ಕಾರ್ಯ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಮುಂಬೈ ಪಾಲಿಕೆ ಹೇಳಿದೆ. ಇತ್ತ ಮುಂಬೈ ಮಹಾನಗರದಲ್ಲಿ ಕರೋನಾ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಸೋಮವಾರ ಒಂದೇ ದಿನ ಮುಂಬೈನಲ್ಲಿ 9,986 ಕೊರೋನಾ ಪ್ರಕರಣ ದಾಖಲಾಗಿದೆ. 79 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ