ಜಿಯೋ ದಾಖಲೆ ಐಪಿಒ ಸಂಭ್ರಮ; ನೀಲಿ ಬೆಳಕಲ್ಲಿ ಮಿಂದೆದ್ದ ಮುಖೇಶ್ ಅಂಬಾನಿಯ 'ಆಂಟಿಲಿಯಾ' ಬಂಗಲೆ!

Published : Oct 28, 2026, 10:16 PM IST
Mukesh ambani Antilia house on Jio Light

ಸಾರಾಂಶ

ಜಿಯೋ ಪ್ಲಾಟ್‌ಫಾರ್ಮ್ಸ್‌ನ ಐಪಿಒ ಷೇರು ಮಾರುಕಟ್ಟೆಯಲ್ಲಿ ಐತಿಹಾಸಿಕ ದಾಖಲೆ ಬರೆದಿದೆ. ಈ ಯಶಸ್ಸನ್ನು ಮುಖೇಶ್ ಅಂಬಾನಿ ತಮ್ಮ 'ಆಂಟಿಲಿಯಾ' ನಿವಾಸವನ್ನು ಜಿಯೋದ ನೀಲಿ ಬಣ್ಣದ ಲೈಟಿಂಗ್ಸ್‌ನಿಂದ ಅಲಂಕರಿಸಿ ಸಂಭ್ರಮಿಸಿದ್ದಾರೆ. ಅಲ್ಲದೆ, 'ಥ್ಯಾಂಕ್ ಯು ಇಂಡಿಯಾ' ಎಂಬ ಸಂದೇಶದ ಮೂಲಕ ದೇಶದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮುಂಬೈ (ಅ.28): ಭಾರತೀಯ ಷೇರು ಮಾರುಕಟ್ಟೆಯಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಬಹುನಿರೀಕ್ಷಿತ ಐಪಿಒ (Jio IPO) ಭರ್ಜರಿಯಾಗಿ ಲಿಸ್ಟಿಂಗ್ ಆಗುವ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ. ಈ ಐತಿಹಾಸಿಕ ಯಶಸ್ಸನ್ನು ಭಾರತದ ನಂ.1 ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ತಮ್ಮದೇ ಆದ ರಾಜವೈಭೋಗದ ಶೈಲಿಯಲ್ಲಿ ಸಂಭ್ರಮಿಸಿದ್ದಾರೆ. ಮುಂಬೈನಲ್ಲಿರುವ ಅವರ 27 ಮಹಡಿಗಳ ವಿಶ್ವವಿಖ್ಯಾತ ನಿವಾಸ ‘ಆಂಟಿಲಿಯಾ’ (Antilia) ಸಂಪೂರ್ಣ ನೀಲಿ ಬಣ್ಣದ ಚಿತ್ತಾರದೊಂದಿಗೆ ಕಂಗೊಳಿಸಿದೆ.

ಜಿಯೋ ಲೋಗೋದ ಅಧಿಕೃತ ನೀಲಿ ಬಣ್ಣದ ಬೆಳಕಿನಿಂದ ಇಡೀ ಆಂಟಿಲಿಯಾ ಕಟ್ಟಡವನ್ನು ಅತ್ಯಾಕರ್ಷಕವಾಗಿ ಅಲಂಕರಿಸಲಾಗಿತ್ತು. ದುಬೈನ ವಿಶ್ವವಿಖ್ಯಾತ ‘ಬುರ್ಜ್ ಖಲೀಫಾ’ ಗೋಪುರದ ಮೇಲೆ ಪ್ರದರ್ಶಿಸುವ ಎಲ್‌ಇಡಿ ಲೈಟಿಂಗ್ಸ್ ಮಾದರಿಯಲ್ಲೇ, ಆಂಟಿಲಿಯಾ ಮುಂಭಾಗದಲ್ಲಿ ಬೃಹತ್ ಅಕ್ಷರಗಳಲ್ಲಿ 'JIO' ಎಂದು ಲೈಟ್‌ಗಳ ಮೂಲಕ ಪ್ರದರ್ಶಿಸಲಾಯಿತು.

‘ಥ್ಯಾಂಕ್ ಯು ಇಂಡಿಯಾ’ ಎಂದು ಕೃತಜ್ಞತೆ:

ಕೇವಲ ಲೈಟಿಂಗ್ಸ್ ಅಷ್ಟೇ ಅಲ್ಲದೆ, ಜಿಯೋ ಯಶಸ್ಸಿಗೆ ಕಾರಣರಾದ ದೇಶದ ಕೋಟ್ಯಂತರ ಗ್ರಾಹಕರು ಮತ್ತು ಷೇರುದಾರರಿಗೆ ಅಂಬಾನಿ ಕುಟುಂಬ ವಿಶೇಷ ಧನ್ಯವಾದ ಅರ್ಪಿಸಿದೆ. ಕಟ್ಟಡದ ಮೇಲೆ 'ಥ್ಯಾಂಕ್ ಯು ಇಂಡಿಯಾ, ಜಿಯೋ ಆಪ್‌ನೇ ಬನಾಯಾ' (ಧನ್ಯವಾದ ಭಾರತ, ಜಿಯೋವನ್ನು ನೀವೇ ರೂಪಿಸಿದ್ದು) ಎಂಬ ಕೃತಜ್ಞತಾ ಸಂದೇಶವನ್ನು ಪ್ರದರ್ಶಿಸಿ ದೇಶವಾಸಿಗಳ ಮನಗೆದ್ದಿದ್ದಾರೆ.

ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿ ದೇಶದ 45 ಕೋಟಿಗೂ ಅಧಿಕ ಜನರನ್ನು ಡಿಜಿಟಲ್ ಜಾಲಕ್ಕೆ ಬೆಸೆದ ಜಿಯೋ, ಇದೀಗ ಷೇರು ಮಾರುಕಟ್ಟೆಯಲ್ಲೂ ಸಾರ್ವಕಾಲಿಕ ದಾಖಲೆ ಬರೆದು ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ. ಆಂಟಿಲಿಯಾ ಕಟ್ಟಡವು ನೀಲಿ ಬೆಳಕಿನ ಚಿತ್ತಾರದಲ್ಲಿ ಕಂಗೊಳಿಸುತ್ತಿರುವ ವಿಡಿಯೋವನ್ನು ಸುದ್ದಿ ಸಂಸ್ಥೆ ‘ಪಿಟಿಐ’ (PTI) ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಮುಂಬೈನ ಪ್ರಮುಖ ಆಕರ್ಷಣೆಯಾಗಿರುವ ಅಂಬಾನಿ ನಿವಾಸದ ಈ ಸಂಭ್ರಮವನ್ನು ನೋಡಲು ಸಾರ್ವಜನಿಕರು ಮುಗಿಬಿದ್ದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಂಗಾಳಕೊಲ್ಲಿಯಲ್ಲೇ ಅತಿ ಹೆಚ್ಚು ಚಂಡಮಾರುತಗಳು ಸೃಷ್ಟಿಯಾಗೋದು ಯಾಕೆ? ಈ 2 ತಿಂಗಳಲ್ಲಿ ಭಾರೀ ಆರ್ಭಟ!
ಭಾರತೀಯರ ನೆಚ್ಚಿನ ಬ್ರ್ಯಾಂಡ್ ಕಾರ್ಲ್ಸ್‌ಬರ್ಗ್ IPO, 8.64 ಕೋಟಿ ಷೇರು ಮಾರಾಟಕ್ಕೆ ತಯಾರಿ, ಆಫರ್ ಡೀಲ್