2018ರಲ್ಲಿ ಗಲ್ಲು ಶಿಕ್ಷೆ ಪ್ರಕಟ: ಮೂರನೇ ಸ್ಥಾನದಲ್ಲಿ ಕರ್ನಾಟಕ!

By Kannadaprabha NewsFirst Published Dec 17, 2019, 8:41 AM IST
Highlights

ಕಳೆದ ವರ್ಷ ದೇಶದಲ್ಲಿ ವಿವಿಧ ನ್ಯಾಯಾಲಯಗಳು 162 ಜನರಿಗೆ ಗಲ್ಲು ಶಿಕ್ಷೆ| ಮಧ್ಯಪ್ರದೇಶ ಮೊದಲ ಸ್ಥಾನ, ಮೂರನೇ ಸ್ಥಾನದಲ್ಲಿ ಕರ್ನಾಟಕ|

ನವದೆಹಲಿ[ಡಿ.17]: ನಿರ್ಭಯಾ ಪ್ರಕರಣದ ದೋಷಿಗಳಿಗೆ ತ್ವರಿತ ಗಲ್ಲು ಶಿಕ್ಷೆ ಜಾರಿಗೆ ತೀವ್ರ ಒತ್ತಾಯ ಕೇಳಿಬರುತ್ತಿರುವ ಬೆನ್ನಲ್ಲೇ, ದೇಶಾದ್ಯಂತ ಪ್ರಕಟವಾಗುತ್ತಿರುವ ಗಲ್ಲು ಶಿಕ್ಷೆ ಮತ್ತು ಶಿಕ್ಷೆ ಜಾರಿಯಾದ ಅಂಕಿ ಅಂಶಗಳು ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿವೆ.

ಇನ್ನು ಕಳೆದ ವರ್ಷ ದೇಶದಲ್ಲಿ ವಿವಿಧ ನ್ಯಾಯಾಲಯಗಳು 162 ಜನರಿಗೆ ಗಲ್ಲು ಶಿಕ್ಷೆ ವಿಧಿಸಿದ್ದು, ಹೀಗೆ ಹೆಚ್ಚು ಶಿಕ್ಷೆ ಪ್ರಕಟಿಸಿದ ರಾಜ್ಯಗಳ ಪೈಕಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 2018ರಲ್ಲಿ ಒಟ್ಟು 15 ಜನರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಮೊದಲ ಸ್ಥಾನದಲ್ಲಿರುವ ಮಧ್ಯಪ್ರದೇಶದಲ್ಲಿ 22 ಜನರಿಗೆ ಮತ್ತು 2ನೇ ಸ್ಥಾನದಲ್ಲಿರುವ ಮಹಾರಾಷ್ಟ್ರ ದ್ಲಲಿ 16 ಜನರಿಗೆ ಶಿಕ್ಷೆ ವಿಧಿಸಲಾಗಿದೆ.

2018ರಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ 162 ದೋಷಿಗಳ ಪೈಕಿ, 45 ಮಂದಿ ಕೊಲೆ ಹಾಗೂ 58 ಮಂದಿ ರೇಪ್‌ ಆ್ಯಂಡ್‌ ಮರ್ಡರ್‌ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ದೇಶದ ವಿವಿಧ ಉಚ್ಛ ನ್ಯಾಯಾಲಯಗಳು 23 ಮಂದಿಗೆ ಗಲ್ಲು ಶಿಕ್ಷೆ ಖಾಯಂ ಮಾಡಿದ್ದು, ಅಷ್ಟೇ ಮಂದಿಯನ್ನು ಖುಲಾಸೆಗೊಳಿಸಿದೆ.

1947ರ ಬಳಿಕ ಒಟ್ಟು 720 ದೋಷಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದ್ದು, ಇದರಲ್ಲಿ ಅರ್ಧಕ್ಕರ್ಧ ಮಂದಿ ಉತ್ತರ ಪ್ರದೇಶದವರೇ ಆಗಿದ್ದಾರೆ. ಹರ್ಯಾಣ ಹಾಗೂ ಮಧ್ಯಪ್ರದೇಶದಿಂದ ಕ್ರಮವಾಗಿ 90 ಹಾಗೂ 73 ಮಂದಿ ಗಲ್ಲಿಗೇರಿದ್ದಾರೆ.

click me!