MP Accident: 40 ಅಡಿ ಆಳದ ಬಾವಿಗೆ ಬಿದ್ದ ಕಾರು: ಬಜರಂಗ ದಳ, ವಿಎಚ್‌ಪಿ ನಾಯಕರು ಸಾವು!

By Suvarna News  |  First Published Nov 29, 2021, 1:04 PM IST

* ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ

* ನಲ್ವತ್ತು ಅಡಿ ಆಳದ ಬಾವಿಗೆ ಬಿದ್ದ ಕಾರು

* ಕಾರಿನಲ್ಲಿದ್ದ ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ


ಭೋಪಾಲ್(ನ.29) ಮಧ್ಯಪ್ರದೇಶದ ರಾಜ್‌ಗಢದಲ್ಲಿ (Rajgarh, Madhya Pradesh) ಭಾನುವಾರ ತಡರಾತ್ರಿ ಭಾರೀ ಅಪಘಾತ (Acccident) ಸಂಭವಿಸಿದೆ. ಇಲ್ಲಿನ ಖುಜ್ನೇರ್ ರಸ್ತೆಯ ಬರ್ಖೇಡಾ ಗ್ರಾಮದ ಬಳಿ ವೇಗವಾಗಿ ಬಂದ ಕಾರೊಂದು 40 ಅಡಿ ಆಳದ ಬಾವಿಗೆ ಬಿದ್ದಿದೆ. ಸುಮಾರು 4 ಗಂಟೆಗಳ ನಂತರ ಕ್ರೇನ್ ಸಹಾಯದಿಂದ ಯುವಕರು ಸೇರಿದಂತೆ ಕಾರನ್ನು ಹೊರತೆಗೆಯಲಾಗಿದೆ. ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಮೂರನೇ ವ್ಯಕ್ತಿ ಗಂಭೀರ ಗಾಯಗೊಂಡಿದ್ದು, ಆತನನ್ನು ಇಂದೋರ್‌ (Indore) ಕರೆದೊಯ್ಯಲಾಗಿದೆ. ಮೃತಪಟ್ಟವರಲ್ಲಿ ಒಬ್ಬರು ಭಜರಂಗದಳದ ಇಲಾಖಾ ಸಹ ಸಂಚಾಲಕರು ಮತ್ತು ಇನ್ನೊಬ್ಬರು ಹಿಂದೂ ಜಾಗರಣ ಮಂಚ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ. ರಾತ್ರಿ 12 ಗಂಟೆಯ ನಂತರ ಈ ಅಪಘಾತ ಸಂಭವಿಸಿದೆ.

ಮಾಹಿತಿ ಪ್ರಕಾರ ಐ-20 ಕಾರಿನಲ್ಲಿ ಮೂವರು ಯುವಕರು ಹೋಗುತ್ತಿದ್ದರು. ದಾರಿಯಲ್ಲಿ, ಗೋಡೆ ಇಲ್ಲದ ಬಾವಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದೆ. ಆದರೆ ಕಾರು ಬಹಳ ವೇಗವಾಗಿದ್ದರಿಂದ ನಿಯಂತ್ರಿಸಲು ಆಗದೇ ಬಾವಿಗೆ ಬಿದ್ದಿದೆ. ಈ ಬಾವಿ ತುಂಬಾ ನೀರಿದೆ. ಅಂತಹ ಪರಿಸ್ಥಿತಿಯಲ್ಲಿ, ಯಾರಿಗೂ ಹೊರಬರಲು ಸಾಧ್ಯವಾಗಿಲ್ಲ. ಅಷ್ಟರಲ್ಲಿ ಕಾರು ಬಾವಿಗೆ ಬಿದ್ದಿರುವುದನ್ನು ಕಂಡ ಜನರು ಸ್ಥಳಕ್ಕಾಗಮಿಸಿ ಹಗ್ಗದ ಸಹಾಯದಿಂದ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಸೋಮವಾರ ಮುಂಜಾನೆ 4 ಗಂಟೆಗೆ ಕ್ರೇನ್ ಸಹಾಯದಿಂದ ಮೂವರು ಯುವಕರು ಹಾಗೂ ಕಾರನ್ನು ಹೊರತೆಗೆಯಲಾಯಿತು. ಇದರಲ್ಲಿ ಬಜರಂಗದಳದ (Bajarang Dal) ಇಲಾಖೆಯ ಸಹ ಸಂಚಾಲಕ ಲೇಖ್‌ರಾಜ್ ಸಿಸೋಡಿಯಾ ಮತ್ತು ಹಿಂದೂ ಜಾಗರಣ ಮಂಚ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಖನ್ ನೇಜಾರ್ ಮೃತಪಟ್ಟಿದ್ದಾರೆ. ಮೂರನೇ ಸಹಚರ ರಾಹುಲ್ ಜೋಶಿ ಸ್ಥಿತಿ ಗಂಭೀರವಾಗಿದೆ. ಅವರನ್ನು ಜಿಲ್ಲಾ ಆಸ್ಪತ್ರೆಯಿಂದ ಇಂದೋರ್‌ಗೆ ಕಳುಹಿಸಲಾಗಿದೆ. ಮೃತದೇಹಗಳನ್ನು ಹೊರತೆಗೆದ ಬಳಿಕ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Latest Videos

undefined

ಶನಿವಾರ ಶಾಜಾಪುರದಲ್ಲಿ ಸಂಭವಿಸಿತ್ತು ದುರ್ಘಟನೆ

ಶನಿವಾರ ರಾತ್ರಿ ಮಧ್ಯಪ್ರದೇಶದ ಶಾಜಾಪುರದಲ್ಲಿ ಅಪಘಾತ ಸಂಭವಿಸಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಯುಪಿಯ ಕಾನ್ಪುರದಿಂದ ಇಂದೋರ್‌ಗೆ ಹಿಂದಿರುಗುತ್ತಿದ್ದ ಕಾರು ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ವರನ ಸೋದರ ಮಾವ ಸಾವನ್ನಪ್ಪಿದ್ದು, ವಧುವಿನ ಕುತ್ತಿಗೆ ಮುರಿದಿದೆ.

click me!