Punishment ಹೋಮ್‌ವರ್ಕ್ ಮಾಡದ ಬಾಲಕಿಯನ್ನು ಸುಡುವ ಟೆರೇಸ್ ಮೇಲೆ ಕಟ್ಟಿ ಹಾಕಿದ ತಾಯಿ!

Published : Jun 08, 2022, 09:35 PM ISTUpdated : Jun 08, 2022, 10:55 PM IST
Punishment ಹೋಮ್‌ವರ್ಕ್ ಮಾಡದ ಬಾಲಕಿಯನ್ನು ಸುಡುವ ಟೆರೇಸ್ ಮೇಲೆ ಕಟ್ಟಿ ಹಾಕಿದ ತಾಯಿ!

ಸಾರಾಂಶ

5 ವರ್ಷದ ಬಾಲಕಿಗೆ ಕ್ರೂರ ಶಿಕ್ಷೆ ನೀಡಿದ ತಾಯಿ ದೆಹಲಿಯ ಸುಡುವ ಬಿಸಿಲಿನಲ್ಲಿ ಕಟ್ಟಿ ಹಾಕಿ ಶಿಕ್ಷೆ ಬಿಸಿಲ ಬೇಗೆಯಿಂದ ಬಾಲಕಿಗೆ ಮೈಯೆಲ್ಲಾ ಬಾಸುಂಡೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್, ಪ್ರಕರಣ ದಾಖಲು

ನವದೆಹಲಿ(ಜೂ.08): ಇದೆಂಥಾ ಶಿಕ್ಷೆ, ಕರುಳ ಬಳ್ಳಿಯನ್ನೇ ಸುಡವ ಬಿಲಿಸಿನ ಬೇಗೆಯಲ್ಲಿ ಕೈ ಕಾಲು ಕಟ್ಟಿ ಹಾಕಿ ಶಿಕ್ಷೆ. ಇದಕ್ಕೆ ಮನಸ್ಸಾದರೂ ಹೇಗೆ ಬಂತು?. ಅಷ್ಟಕ್ಕೂ ಈ ಶಿಕ್ಷೆ ಯಾಕೆ ಅಂತೀರಾ? ಶಾಲೆಯಲ್ಲಿ ಹೇಳಿದ ಹೋಮ್ ವರ್ಕ್ ಮಾಡಿಲ್ಲ ಅನ್ನೋ ಕಾರಣಕ್ಕೆ ತಾಯಿ ನೀಡಿದ ಶಿಕ್ಷೆ ಇದು. ಈ ಬಾಲಕಿಯ ವಯಸ್ಸು ಕೇವಲ 5.

ಈ ಘಟನೆ ನಡೆದಿರುವುದು ದೆಹಲಿಯಲ್ಲಿ. ದೆಹಲಿಯ ಬಿಸಿಲಿನ ಬೇಗೆ ಪದೇ ಪದೇ ವರದಿಯಾಗುತ್ತಲೇ ಇದೆ. ಹೊರಗೆ ನಡೆದಾಡಿದರೆ ಸಾಕು ಸಾವರಿಕೊಳ್ಳಲು ಕೆಲ ಹೊತ್ತೇ ಬೇಕು. ಇಂತಹ ಬಿಸಿಲಿನ ಬೇಗೆಗೆ ಮಗುವಿನ ಕೈಕಾಲು ಕಟ್ಟಿ ಟೆರೇಸ್ ಮೇಲೆ ಮಲಗಿಸಿದರೆ ಕೇಳಬೇಕೆ? ಆ ಮಗು ನರಳಾಡುತ್ತಿರುವ ದೃಶ್ಯವಂತೂ ಎಂತವರ ಕರುಳು ಕಿತ್ತು ಬರುತ್ತದೆ. ಆದರೆ ತಾಯಿಗೆ ಮಾತ್ರ ಇಂದೊಂದು ಸಣ್ಣ ಶಿಕ್ಷೆ ಮಾತ್ರ ಆಗಿತ್ತು. 

ಮಕ್ಕಳ ಆನ್‌ಲೈನ್‌ ಗೇಮಿಂಗ್ ಅಡಿಕ್ಷನ್ ಕಡಿಮೆ ಮಾಡೋದು ಹೇಗೆ?

ಶಾಲೆಯಲ್ಲಿ ಹೇಳಿರುವ ಹೋಮ್ ವರ್ಕ್ ಮಾಡಿಲ್ಲ ಅನ್ನೋ ಕಾರಣಕ್ಕೆ ತಾಯಿ ಮನೆಯ ಟೆರೇಸ್ ಮೇಲೆ 5 ವರ್ಷದ ಪುಟ್ಟ ಬಾಲಕಿಯನ್ನು ಕಟ್ಟಿ ಹಾಕಿ ಘನಘೋರ ಶಿಕ್ಷೆ ನೀಡಲಾಗಿದೆ. ಈ ಮಗುವಿನ ಕೈ ಕಾಲು ಹಾಗೂ ಮೈ ಸುಟ್ಟು ಹೋಗಿದೆ. ಮೈಯೆಲ್ಲಾ ಗುಳ್ಳೆ ಬಂದಿದೆ. ಮಗು ಈಗಲೂ ನೋವಿನಿಂದ ನರಳಾಡುತ್ತಿದೆ. 

"
ಬಾಲಕಿ ನರಳಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ದೆಹಲಿ ಪೊಲೀಸರ ಕಣ್ಣಿಗೂ ಬಿದ್ದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಈ ವಿಡಿಯೋ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಬಳಿಕ ಮನೆ ಹಾಗೂ ಪೋಷಕರನ್ನು ಪತ್ತೆ ಹಚ್ಚಿದ್ದಾರೆ.

ತುಕ್ಮೀರ್‌ಪುರದ ಖಜುರಿ ಖಾಸ್ ಏರಿಯಾದಲ್ಲಿನ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ತಾಯಿಯನ್ನು ಪೊಲೀಸ್ ಠಾಣೆಗೆ ಕರೆಸಿದ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ವೇಳೆ ತಾನು ಕೇವಲ 5ರಿಂದ 7 ನಿಮಿಷ ಮಾತ್ರ ಮಗುವನ್ನು ಬಿಸಿಲಿನಲ್ಲಿ ನಿಲ್ಲಿಸಲಾಗಿದೆ ಎಂದಿದ್ದಾರೆ. ಆದರೆ ಅಷ್ಟರಲ್ಲೇ ಮಗುವಿನ ಚರ್ಮ ಸುಟ್ಟು ಹೋಗಿದೆ.

ಮಕ್ಕಳಿಗೆ ಶಿಕ್ಷೆ ನೀಡಿದರೆ ಕಂಬಿ ಎಣಿಸಬೇಕಾಗುತ್ತದೆ ಎಂದು ತಾಯಿಗೆ ಎಚ್ಚರಿಕೆ ನೀಡಿದ್ದಾರೆ. ಮಗುವಿನ ಮೇಲೆ ಮಾಡಿರುವ ಕ್ರೌರ್ಯಕ್ಕೆ ಶಿಕ್ಷೆ ಎದುರಿಸಬೇಕು ಎಂದು ತಾಯಿಗೆ ಖಡಕ್ ಸೂಚನೆ ನೀಡಿದ್ದಾರೆ. ಮಗುವಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಪೊಲೀಸರು ಸೂಚಿಸಿದ್ದಾರೆ.

ಫುಡ್‌ ವೇಸ್ಟ್ ಮಾಡೋ ಮಕ್ಕಳಿಗೆ ಇದನ್ನು ಹೇಳಿಕೊಡಿ, ಪ್ಲೇಟ್ ಖಾಲಿ ಮಾಡದೆ ಏಳೋದೆ ಇಲ್ಲ

ಇತ್ತೀಚೆಗೆ ಕರ್ನಾಟಕದ ಕಲಬುರಗಿಯಲ್ಲೇ ಮಗುವಿನ ಮೇಲೆ ಇದೇ ರೀತಿಯ ಕ್ರೌರ್ಯ ಮಾಡಿರುವುದು ಬೆಳಕಿಗೆ ಬಂದಿತ್ತು. ನಾಲ್ಕು ವರ್ಷದ ಮಗು ಊಟ ಕೇಳಿದ ಕಾರಣಕ್ಕೆ ಮುಗುವಿನ ಕೈಯನ್ನು ಮಲತಾಯಿ ಸುಟ್ಟ ಘಟನೆ ಭಾರಿ ಆಕ್ರೋಶಕ್ಕೆ ಕಾರಣಾಗಿತ್ತು.  

ಹಸಿವಾಗಿದೆ ಊಟ ಬೇಕೆಂದು ತಬ್ಬಲಿ ಮಗು ಕೇಳಿದ ಮರುಕ್ಷಣವೇ ಕೋಪಾವೇಶಗೊಂಡ ಮಲತಾಯಿ ಆ ಮಗುವಿನ ಕೈಗಳನ್ನ ಸುಟ್ಟು, ಮಂಚಕ್ಕೆ ಕಟ್ಟಿಚಿತ್ರಹಿಂಸೆ ನೀಡಿ ಕ್ರೌರ್ಯ ಮೆರೆದಿರುವ ಅಮಾನವೀಯವಾದಂತಹ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕು ವಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ನಾಲವಾರ ಸ್ಟೇಷನ್‌ ತಾಂಡದಲ್ಲಿ ನಡೆದಿತ್ತು.

ತಾಂಡಾ ನಿವಾಸಿ ತಿಪ್ಪಣ್ಣಾ ಎಂಬುವರ ಹೆಂಡತಿ ಮೃತಪಟ್ಟಿದ್ದು, ನಾಲ್ಕು ವರ್ಷದ ಮಗುವಿನ ಆರೈಕೆಗೆ ಎಂದು ಇತ್ತೀಚಿಗೆ ಮರೆಮ್ಮ ಎಂಬ ಮಹಿಳೆಯನ್ನ ಆತ ಮದುವೆಯಾಗಿದ್ದ. ಮನೆಯಲ್ಲಿ ತಿಪ್ಪಣ್ಣಾ ಇರೋವರೆಗೆ ಮಲತಾಯಿ ಮರೆಮ್ಮ ಮಗುವನ್ನ ಸರಿಯಾಗಿ ನೋಡಿಕೊಳ್ಳುತ್ತಿದ್ದಳು. ದುಡಿಯಲು ಅಂತ ತಿಪ್ಪಣ್ಣಾ ಮಹಾರಾಷ್ಟ್ರದ ಪುಣೆಗೆ ಹೋಗುತ್ತಿದ್ದಂತೆ. ಆಗ ಮರೆಮ್ಮ ಮಗುವಿನ ಮೇಲೆ ಈ ರೀತಿ ಕ್ರೌರ್ಯ ಮೆರೆದಿದ್ದಾಳೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ