ಕರ್ತವ್ಯದಲ್ಲಿ ಮಡಿದ ಸೈನಿಕ, ಐವಿಎಫ್‌ ಮೂಲಕ 49ನೇ ವರ್ಷದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಯೋಧನ ತಾಯಿ!

Published : Jan 29, 2025, 10:32 PM IST
ಕರ್ತವ್ಯದಲ್ಲಿ ಮಡಿದ ಸೈನಿಕ, ಐವಿಎಫ್‌ ಮೂಲಕ 49ನೇ ವರ್ಷದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಯೋಧನ ತಾಯಿ!

ಸಾರಾಂಶ

ದೇಶ ಸೇವೆಗಾಗಿ ಏಕೈಕ ಮಗನನ್ನು ಕಳೆದುಕೊಂಡಿದ್ದ ತಂದೆ-ತಾಯಿಗೆ ಆಘಾತವಾಗಿತ್ತು. ದುಃಖವನ್ನು ಮೆಟ್ಟಿನಿಂತು ಐವಿಎಫ್ ಮೂಲಕ ಮಕ್ಕಳನ್ನು ಪಡೆಯಲು ತಾಯಿ ನಿರ್ಧರಿಸಿದರು.

ನವದೆಹಲಿ (ಜ.29): ಏಕೈಕ ಮಗನ ಸಾವು ತಂದೆ-ತಾಯಿಗೆ ಅಸಹನೀಯ ದುಃಖ ತಂದಿತ್ತು. ಈ ದುಃಖವನ್ನು ಮೆಟ್ಟಿನಿಲ್ಲಲು ಮತ್ತೊಮ್ಮೆ ಮಕ್ಕಳನ್ನು ಹೊಂದಲು ತಾಯಿ ನಿರ್ಧರಿಸಿದರು. ಐವಿಎಫ್ ಚಿಕಿತ್ಸೆಯ ಮೂಲಕ ಗಣರಾಜ್ಯೋತ್ಸವದಂದು ಈ ಮಹಾತಾಯಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದರಲ್ಲಿ ಒಂದು ಮಗುವನ್ನು ದೇಶ ಸೇವೆಗಾಗಿ ಸೇನೆಗೆ ಕಳುಹಿಸುವುದಾಗಿ ತಾಯಿ ಹೇಳಿದ್ದಾರೆ.

ಗುಜರಾತಿನ ಗಿರ್ ಸೋಮನಾಥ್ ಜಿಲ್ಲೆಯ ದುಧಾಲ್ ಗ್ರಾಮದ ಪ್ರತಾಪ್‌ಭಾಯ್ ಚೌಹಾಣ್ ಮತ್ತು ಕಾಂಚನ್‌ಬೆನ್ ಪ್ರತಾಪ್‌ಭಾಯ್ ಚೌಹಾಣ್ ದಂಪತಿಗಳ ಏಕೈಕ ಪುತ್ರ ನಿರವ್ ಎಂಜಿನಿಯರಿಂಗ್ ವ್ಯಾಸಂಗದ ವೇಳೆ ವಾಯುಪಡೆಗೆ ಸೇರಿದ್ದರು. 2022 ರಲ್ಲಿ ಚೆನ್ನೈ ವಾಯುಪಡೆ ನೆಲೆಯಲ್ಲಿ ಕರ್ತವ್ಯದಲ್ಲಿದ್ದಾಗ ನಿರವ್ ಮೃತಪಟ್ಟಿದದರು. ಏಕೈಕ ಮಗನ ಸಾವು ತಂದೆ-ತಾಯಿಗೆ ಅಸಹನೀಯ ದುಃಖ ನೀಡಿತ್ತು. ಮಗನ ನೆನಪಿನಲ್ಲಿಯೇ ಬದುಕುತ್ತಿದ್ದ ಅವರು ಕೊನೆಗೆ ಕೊಡಿನಾರ್‌ನ ಆರ್ ಎನ್ ವಾಲಾ ಆಸ್ಪತ್ರೆಯಲ್ಲಿ ಐವಿಎಫ್ ಚಿಕಿತ್ಸೆಗೆ ಒಪ್ಪಿಗೆ ನೀಡಿದ್ದರು.

ನಿರವ್ ಅವರ 49 ವರ್ಷದ ತಾಯಿ ಕಾಂಚನ್‌ಬೆನ್ ಐವಿಎಫ್ ಚಿಕಿತ್ಸೆ ಪಡೆದುಕೊಂಡು ಗರ್ಭಿಣಿಯೂ ಆಗಿದ್ದರು. ದೇಶವು 76 ನೇ ಗಣರಾಜ್ಯೋತ್ಸವ ಆಚರಿಸುತ್ತಿದ್ದಾಗ, ಮಗನ ನೆನಪಿನಲ್ಲಿ ತಾಯಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆರ್ ಎನ್ ವಾಲಾ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

Republic Day: ಭಯೋತ್ಪಾದಕರ ಗುಂಡಿಗೆ ಎದೆಕೊಟ್ಟಿದ್ದ ಸೇನಾ ಶ್ವಾನ ಫ್ಯಾಂಟಮ್‌ಗೆ ಮರಣೋತ್ತರ MiD ಪುರಸ್ಕಾರ!

“ನಮ್ಮ ಮಗ ನಿರವ್ ಭಾವನಗರದಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾಗ ವಾಯುಪಡೆಗೆ ಆಯ್ಕೆಯಾದ. ಚೆನ್ನೈನಲ್ಲಿ ಮೊದಲ ನೇಮಕಾತಿ ದೊರೆಯಿತು. ದೇಶಸೇವೆ ಮಾಡಬೇಕೆಂಬ ಆಸೆ ಅವನಿಗಿತ್ತು. ಚಿಕ್ಕ ವಯಸ್ಸಿನಲ್ಲಿಯೇ ದೇಶಸೇವೆ ಮಾಡುತ್ತಾ ಹುತಾತ್ಮನಾದ. ಆದರೆ, ಐವಿಎಫ್ ಮೂಲಕ ಇಂದು ನಮ್ಮ ಕುಟುಂಬದಲ್ಲಿ ಇಬ್ಬರು ಗಂಡು ಮಕ್ಕಳು ಜನಿಸಿದ್ದಾರೆ. ದೇಶರಕ್ಷಣೆಗಾಗಿ ಒಬ್ಬ ಮಗನನ್ನು ಮತ್ತೆ ಸೇನೆಗೆ ಕಳುಹಿಸುತ್ತೇನೆ” ಎಂದು ಕಾಂಚನ್‌ಬೆನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

 

Watch | ಜಮ್ಮು ಕಾಶ್ಮೀರದಲ್ಲಿ ಮತ್ತೊಂದು ಘೋರ ದುರಂತ; ಸೇನಾ ಟ್ರಕ್ ಉರುಳಿ ಇಬ್ಬರು ಯೋಧರು ದುರ್ಮರಣ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್