238 ಬಾರಿ ಸೋತು ದಾಖಲೆ ಬರೆದಿರುವ ಎಲೆಕ್ಷನ್ ಕಿಂಗ್ ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧೆ!

By Suvarna NewsFirst Published Mar 28, 2024, 3:38 PM IST
Highlights

ರಾಷ್ಟ್ರಪತಿ ಚುನಾವಣೆ, ಲೋಕಸಭಾ ಚುನಾವಣೆ, ಸ್ಥಳೀಯ ಚುನಾವಣೆ ಸೇರಿದಂತೆ ಬರೋಬ್ಬರಿ 238 ಬಾರಿ ಸ್ಪರ್ಧಿಸಿ ಸೋತಿರುವ ವಿಶೇಷ ನಾಯಕ ಇದೀಗ ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. 1988ರಿಂದ ಪ್ರತಿ ಚುನಾವಣೆಯಲ್ಲಿ ಸ್ಪರ್ಧಿಸಿ ಎಲ್ಲದರಲ್ಲೂ ಸೋತಿರುವ ಈ ನಾಯಕ ಸೋಲಿನಲ್ಲೂ ವಿಶೇಷ ಸಂದೇಶ ಸಾರುತ್ತಿದ್ದಾರೆ.
 

ಮೆಟ್ಟೂರು(ಮಾ.28) ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಮೊದಲ ಹಾಗೂ ಎರಡನೇ ಹಂತದ ಚುನಾವಣೆಗಳ ನಾಪತ್ರ ಸಲ್ಲಿಕೆಗಳು ಆರಂಭಗೊಂಡಿದೆ. ಬಿರುಸಿನ ಪ್ರಚಾರ, ಭಾಷಣ, ವಾಕ್ಸಮರಗಳು ನಡೆಯುತ್ತಿದೆ. ಇದರ ನಡುವೆ ಸದ್ದಿಲ್ಲದೆ 68 ವರ್ಷದ ಕೆ ಪದ್ಮರಾಜನ್ ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಕೆ ಪದ್ಮರಾಜನ್ ಸಾಮಾನ್ಯರ ನಾಯಕ ಎಂದೇ ಗುರುತಿಸಿಕೊಂಡಿದ್ದಾರೆ. ಕಾರಣ ಬರೋಬ್ಬರಿ 238 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಇದೀಗ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ. ರಾಷ್ಟ್ರಪತಿ ಚುನಾವಣೆ, ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಬಹುತೇಕ ಎಲ್ಲಾ ಚುನಾವಣೆಯಲ್ಲೂ ಕೆ ಪದ್ಮರಾಜನ್ ಸ್ಪರ್ಧಿಸಿದ್ದಾರೆ. ಆದರೆ ಪ್ರತಿ ಬಾರಿ ಸೋಲು ಕಂಡಿದ್ದಾರೆ.

ತಮಿಳುನಾಡಿನ ಮೆಟ್ಟೂರು ಮೂಲಕ ಕೆ ಪದ್ಮರಾಜನ್ ಟೈಯರ್ ರಿಪೇರಿ ಶಾಪ್ ನಡೆಸುತ್ತಿದ್ದಾರೆ. ಸಣ್ಣ ಆದಾಯದ ಮೂಲಕ ಕುಟುಂಬ ನಿರ್ವಹಿಸುತ್ತಿದ್ದಾರೆ. ಇದೀಗ 239ನೇ ಬಾರಿ ಚುನಾವಣಾ ಅಖಾಡದಲ್ಲಿ ಅದೃಷ್ಠ ಪರೀಕ್ಷೆ ನಡೆಸುತ್ತಿದ್ದಾರೆ. ಕೆ ಪದ್ಮರಾಜನ್ 1988ರಲ್ಲಿ ಮೊದಲ ಬಾರಿಗೆ ಮೆಟ್ಟೂರಿನಿಂದ ಸ್ಪರ್ಧಿಸಿ ಸೋತಿದ್ದರು.  ಕೆ ಪದ್ಮರಾಜನ್ ಎಲೆಕ್ಷನ್ ಕಿಂಗ್ ಎಂದೇ ಗುರುತಿಸಿಕೊಂಡಿದ್ದಾರೆ. 

 

ಶಿವಮೊಗ್ಗಕ್ಕೆ ಬ್ರಹ್ಮ ಬಂದ್ರೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ, ಏ.12ಕ್ಕೆ ನಾಮಪತ್ರ ಸಲ್ಲಿಸ್ತೇನೆ:ಕೆ.ಎಸ್. ಈಶ್ವರಪ್ಪ

ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿಗಳಾದ ಮನ್‌ಮೋಹನ್ ಸಿಂಗ್, ಅಟಲ್ ಬಿಹಾರಿ ವಾಜಪೇಯಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವೂ ಕೆ ಪದ್ಮರಾಜನ್ ಸ್ಪರ್ಧಿಸಿದ್ದಾರೆ. ಆದರೆ ಕೆ ಪದ್ಮರಾಜನ್ ಸ್ಪರ್ಧೆ ಹಾಗೂ ಸೋಲಿನ ಮೂಲಕ ಜನಸಾಮಾನ್ಯರಿಗೆ ಮಹತ್ವದ ಸಂದೇಶ ರವಾನಿಸಿದ್ದಾರೆ. ಪ್ರತಿ ಬಾರಿ ಚುನಾವಣೆಗೆ ಸ್ಪರ್ಧಿಸುವಾಗ ಹಲವರು ನಕ್ಕಿದ್ದಾರೆ. ವ್ಯಂಗ್ಯವಾಡಿದ್ದಾರೆ. ಆದರೆ ಇದ್ಯಾವುದನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ. ಭಾರತದ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರೀಕನಿಗೆ ಇರುವ ಹಕ್ಕಿನ ಕುರಿತು ನಾನು ಬೆಳಕು ಚೆಲ್ಲುತ್ತಿದ್ದೇನೆ ಎಂದು ಕೆ ಪದ್ಮರಾಜನ್ ತಮ್ಮ ಸ್ಪರ್ಧೆ ಹಾಗೂ ಸೋಲಿನ ಕುರಿತು ಹೇಳಿದ್ದಾರೆ. 

ನನಗೆ ಸೋಲು ನಿರಾಸೆ ತಂದಿಲ್ಲ. ಆದರೆ ಪ್ರತಿ ಸಾಮಾನ್ಯನಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿದೆ. ರಾಜಕೀಯ ಪಕ್ಷದ ಆಚೆಗೂ ಉತ್ತಮ ಕೆಲಸ ಮಾಡಿ, ಜನರ ನಾಯಕನಾಗಿ ಹೊರಹೊಮ್ಮಲು ಸಾಧ್ಯವಿದೆ. ನಾನು ಚುನಾವಣೆಯಲ್ಲಿ ಸೋತಿರಬಹುದು, ಆದರೆ ಸಾಮಾನ್ಯ ವ್ಯಕ್ತಿ ಕೂಡ ಯಾರ  ವಿರುದ್ದ ಬೇಕಾದರೂ ಸ್ಪರ್ಧಿಸಹುದು ಎಂಬುದನ್ನು ತೋರರಿಸಿದ್ದೇನೆ ಎಂದು ಕೆ ಪದ್ಮರಾಜನ್ ಹೇಳಿದ್ದಾರೆ.

ಬಿಜೆಪಿ ಟಿಕೆಟ್ ಮಿಸ್ ಆದ ಬೆನ್ನಲ್ಲೇ ವರುಣ್ ಗಾಂಧಿಗೆ ಕಾಂಗ್ರೆಸ್‌ ಭರ್ಜರಿ ಆಫರ್!

ಗೆಲುವು ಮುಖ್ಯವಲ್ಲ, ಯಾರು ಪ್ರತಿಸ್ಪರ್ಧಿ ಅನ್ನೋದು ಮುಖ್ಯವಲ್ಲ, ನನಗೆ ಚುನಾವಣೆಯಲ್ಲಿ ಪಾಲ್ಗೊಳ್ಳುವುದು, ಸ್ಪರ್ಧಿಸುವುದೇ ಮುಖ್ಯ. ಇದೇ ನನ್ನ ಗೆಲುವು ಎಂದಿದ್ದಾರೆ. ಪ್ರತಿ ಬಾರಿ ನಾನು ಠೇವಣಿ ಕಳೆದುಕೊಂಡಿದ್ದೇನೆ. 238 ಬಾರಿ ಚುನಾವಣೆಗೆ ಲಕ್ಷ ಲಕ್ಷ ರೂಪಾಯಿ ಠೇವಣಿ ಕಟ್ಟಿದ್ದೇನೆ. ಲಿಮ್ಕಾ ಬುಕ್‌ನಲ್ಲಿ ಕೆ ಪದ್ಮರಾಜನ್ ಸಾಧನೆ ದಾಖಲಾಗಿದೆ. ಅತೀ ಹೆಚ್ಚು ಬಾರಿ ಸೋಲು ಕಂಡ ಸ್ಪರ್ಧಿ ಅನ್ನೋ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

ನನ್ನ ಕೊನೆಯ ಉಸಿರಿನವರೆಗೂ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಸೋಲಬೇಕು, ಗೆಲ್ಲಬೇಕು ಎಂದಲ್ಲ, ಸ್ಪರ್ಧಿಸುತ್ತೇನೆ, ನನಗೆ ಇದುವೇ ಮುಖ್ಯ ಎಂದು ಕೆ ಪದ್ಮರಾಜನ್ ಹೇಳಿದ್ದಾರೆ.

click me!