
ಪ್ರಪಂಚದಲ್ಲಿ ದುಬಾರಿ ವಸ್ತುಗಳ ಬಗ್ಗೆ ನಾವು ಆಗಾಗ ಕೇಳ್ತಾನೆ ಇರ್ತೀವಿ. ಅವುಗಳ ಬೆಲೆ ಲಕ್ಷಗಳಲ್ಲಿ ಇರುತ್ತದೆ. ಆದರೆ ಇಷ್ಟೊಂದು ದುಬಾರಿ ಪಾರಿವಾಳದ ಬಗ್ಗೆ ಎಂದಾದರೂ ಕೇಳಿದ್ದೀರಾ? ಇದರ ಬೆಲೆ ಒಂದು ಎರಡಲ್ಲ, ನೂರು BMW ಕಾರುಗಳಿಗೆ ಸಮಾನವಂತೆ. ಇದು ಪ್ರಪಂಚದಲ್ಲೇ ಅತ್ಯಂತ ದುಬಾರಿ ಪಕ್ಷಿ ಎಂದು ಪರಿಗಣಿಸಲಾಗಿದೆ. ಪಾರಿವಾಳಗಳು ಮಾತ್ರವಲ್ಲ ಕೆಲವು ಗಿಳಿಗಳು,, ಕೋಳಿಗಳು ಕೂಡ ತುಂಬಾ ದುಬಾರಿಯಾಗಿವೆ. ಅವುಗಳ ವಿಶೇಷತೆ ಏನೆಂದು ಒಮ್ಮೆ ನೋಡೋಣ.
ಪ್ರಪಂಚದಲ್ಲೇ ಅತ್ಯಂತ ದುಬಾರಿ ಪಕ್ಷಿ ರೇಸಿಂಗ್ ಪಾರಿವಾಳ. 2020 ರಲ್ಲಿ, ಅರ್ಮಾಂಡೋ ಎಂಬ ರೇಸಿಂಗ್ ಪಾರಿವಾಳ 1.4 ಮಿಲಿಯನ್ ಡಾಲರ್‌ಗಳಿಗೆ ಅಂದರೆ ಸುಮಾರು 115 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ. ಇದು ಚಾಂಪಿಯನ್ ರೇಸರ್. ಇದು ತುಂಬಾ ವೇಗವಾಗಿ ಹಾರುತ್ತದೆ. ಇವುಗಳಿಗೆ ಹೆಚ್ಚು ದೂರ ಹಾರಲು ತರಬೇತಿ ನೀಡಲಾಗುತ್ತದೆ. ಈ ಪಾರಿವಾಳಗಳು ಗಂಟೆಗೆ 60 ಮೈಲುಗಳ ವೇಗದಲ್ಲಿ ಹಾರುತ್ತವೆ. ಅರ್ಮಾಂಡೋ ಅತ್ಯಂತ ದುಬಾರಿ ಪಕ್ಷಿ ಎಂಬ ವಿಶ್ವ ದಾಖಲೆ ನಿರ್ಮಿಸಿದೆ. ಪ್ರಸ್ತುತ BMW X4 ಬೆಲೆ 96.20 ಲಕ್ಷ ರೂಪಾಯಿಗಳು ಅಂದರೆ ಸುಮಾರು ಒಂದು ಕೋಟಿ ರೂಪಾಯಿಗಳು. ಈ ಲೆಕ್ಕದಲ್ಲಿ ಅರ್ಮಾಂಡೋ ಪಾರಿವಾಳದ ಬೆಲೆ 100 ಕ್ಕೂ ಹೆಚ್ಚು ಕಾರುಗಳಿಗೆ ಸಮಾನ.
ಇದನ್ನೂ ಓದಿ: ಜಗತ್ತಿನ ಅತಿ ದುಬಾರಿ ತಿನಿಸುಗಳಿವು! ಬೆಲೆ ಕೇಳಿದ್ರೆ ತಲೆತಿರುಗಿ ಬಿಳೋದು ಗ್ಯಾರಂಟಿ!
ನ್ಯೂ ಗಿನಿಯಾದಲ್ಲಿ ಬ್ಲ್ಯಾಕ್ ಪಾಮ್ ಕಾಕಟೂ ಎಂಬ ದೊಡ್ಡ ಗಿಳಿ ಕಾಣಸಿಗುತ್ತದೆ. ಈ ಗಿಳಿಯ ಗರಿಗಳು ಕಪ್ಪಾಗಿ, ಕೊಕ್ಕು ತುಂಬಾ ದೊಡ್ಡದಾಗಿರುತ್ತದೆ. ಬ್ಲ್ಯಾಕ್ ಪಾಮ್ ಕಾಕಟೂ ಬೆಲೆ 15 ಸಾವಿರ ಡಾಲರ್‌ಗಳು ಅಂದರೆ 12 ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ಪ್ರಪಂಚದಲ್ಲೇ ಅತಿ ದೊಡ್ಡ ಗಿಳಿ ಹೈಸಿಂತ್ ಮಕಾವ್, ಇದು ದಕ್ಷಿಣ ಅಮೆರಿಕಾದಲ್ಲಿ ಕಾಣಸಿಗುತ್ತದೆ. ಇದು ಮೂರು ಅಡಿ ಉದ್ದದವರೆಗೆ ಬೆಳೆಯುತ್ತದೆ. ಇದರ ಬೆಲೆ 10,000 ಡಾಲರ್‌ಗಳು ಅಂದರೆ ಸುಮಾರು 8 ಲಕ್ಷ ರೂಪಾಯಿಗಳವರೆಗೆ ಇರುತ್ತದೆ.
ಆಯಂ ಸೆಮಾನಿ ಚಿಕನ್ ಒಂದು ಅಪರೂಪದ ಜಾತಿ. ಇದು ಇಂಡೋನೇಷ್ಯಾದಲ್ಲಿ ಕಾಣಸಿಗುತ್ತದೆ. ಇದು ತನ್ನ ಕಪ್ಪು ಗರಿಗಳು, ಕಪ್ಪು ಚರ್ಮ, ಕಪ್ಪು ಮಾಂಸದಿಂದಾಗಿ ಪ್ರಸಿದ್ಧವಾಗಿದೆ. ಈ ಕೋಳಿಗಳು ತುಂಬಾ ದುಬಾರಿ. ಇವುಗಳ ಬೆಲೆ 2,500 ಡಾಲರ್‌ಗಳು ಅಂದರೆ 2 ಲಕ್ಷ ರೂಪಾಯಿಗಳವರೆಗೆ ಇರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ