ದೆಹಲಿ ಚುನಾವಣೆ Exit Polls ಫಲಿತಾಂಶ, ಬಿಜೆಪಿಗೆ ಅಧಿಕಾರ, ಆಪ್‌‌ಗೆ ಬೇಸರ, ಕಾಂಗ್ರೆಸ್ ತಿರಸ್ಕಾರ

Published : Feb 05, 2025, 06:55 PM ISTUpdated : Feb 05, 2025, 07:10 PM IST
ದೆಹಲಿ ಚುನಾವಣೆ Exit Polls ಫಲಿತಾಂಶ, ಬಿಜೆಪಿಗೆ ಅಧಿಕಾರ, ಆಪ್‌‌ಗೆ ಬೇಸರ, ಕಾಂಗ್ರೆಸ್ ತಿರಸ್ಕಾರ

ಸಾರಾಂಶ

ದೆಹಲಿ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ. ಬಹುತೇಕ ಸಮೀಕ್ಷೆಗಳಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಅಧಿಕಾರಕ್ಕೇರಲಿದೆ ಎಂದಿದೆ. ಆಪ್ ಭಾರಿ ಪೈಪೋಟಿ ನಡೆಸುತ್ತಿದೆ. ಆದರೆ ಕಾಂಗ್ರೆಸ್‌ಗೆ ಮಾತ್ರ 1 ರಿಂದ 2 ಸ್ಥಾನ ಎಂದಿದೆ.  

ನವದೆಹಲಿ(ಜ.05) ದೆಹಲಿ ವಿಧಾನಸಭೆ ಚುನಾವಣೆ ಮತದಾನ ಅಂತ್ಯಗೊಂಡಿದೆ. ಇದರ ಬೆನ್ನಲ್ಲೇ ಫಲಿತಾಂಶ ಕುತೂಹಲವೂ ಹೆಚ್ಚಾಗಿದೆ. ಆದರೆ ಮತದಾನ ಅಂತ್ಯಗೊಂಡ ಅರ್ಧ ಗಂಟೆಯಲ್ಲಿ ಎಕ್ಸಿಟ್ ಪೋಲ್ ಅಬ್ಬರ ಶುರುವಾಗಿದೆ. ಹಲವು ಎಜೆನ್ಸಿಗಳು ಫಲಿತಾಂಶದ ಮತಗಟ್ಟೆ ಸಮೀಕ್ಷೆ ಪ್ರಕಟಿಸಿದೆ. ಬಹುತೇಕ ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೇರಲಿದೆ ಎಂದಿದೆ. ಇತ್ತ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷ ಹಿನ್ನಡೆಯಾಗಲಿದೆ ಎಂದಿದೆ. ಆದರೆ ಬಿಜೆಪಿ ಜೊತೆ ಜಿದ್ದಾಜಿದ್ದಿನ ಪೈಪೋಟಿ ನೀಡುತ್ತಿದೆ. ಇದರ ನಡುವೆ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದರೂ ಸಮೀಕ್ಷೆಯಲ್ಲಿ 1 ರಿಂದ 2 ಸ್ಥಾನ ಮಾತ್ರ ಗೆಲ್ಲಲಿದೆ ಎಂದಿದೆ. 

ಮ್ಯಾಟ್ರಿಜ್, ಜಿವಿಸಿ ಪೋಲ್ ಸೇರಿದಂತೆ ಪ್ರಮುಖ ಸಮೀಕ್ಷೆಗಳು ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಅಧಿಕಾರ ಹಿಡಿಯಲಿದೆ ಎನ್ನುತ್ತಿದೆ. ಆದರೆ ದೈನಿಕ್ ಭಾಸ್ಕರ್ ಆಪ್ ಏಕಾಂಗಿಯಾಗಿ ಅದಿಕಾರಕ್ಕೇರಲಿದೆ ಎಂದಿದೆ. ಬಿಜೆಪಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ ಎಂದಿದೆ. ಆಪ್ ಸತತ 3ನೇ ಬಾರಿ ಅಧಿಕಾರಕ್ಕೇರುವುದರಲ್ಲಿ ಅನುಮಾನವಿಲ್ಲ ಎಂದು ದೈನಿಕ್ ಭಾಸ್ಕರ್ ಸಮೀಕ್ಷೆ ನುಡಿದಿದೆ.

ಚುನಾವಣೆ ಆಯೋಗದ 2ನೇ ನೋಟಿಸ್‌ಗೆ ಉತ್ತರ ನೀಡಿದ ಅರವಿಂದ್ ಕೇಜ್ರಿವಾಲ್

ಮ್ಯಾಟ್ರಿಜ್ ದೆಹಲಿ ವಿಧಾನಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆ
ಬಿಜೆಪಿ: 35-40
ಆಪ್:32-37
ಕಾಂಗ್ರೆಸ್:01

ಜಿವಿಸಿ ಪೋಲ್ ದೆಹಲಿ ವಿಧಾನಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆ
ಬಿಜೆಪಿ: 39-45
ಆಪ್: 22-31
ಕಾಂಗ್ರೆಸ್: 0-2
ಇತರ: 0-01

ಪಿ ಮಾರ್ಕ್ ದೆಹಲಿ ವಿಧಾನಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆ
ಬಿಜೆಪಿ: 39-49
ಆಪ್:21-31
ಕಾಂಗ್ರೆಸ್:0-1
 
ಪೀಪಲ್ಸ್ ಇನ್‌ಸೈಟ್ ದೆಹಲಿ ವಿಧಾನಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆ
ಬಿಜೆಪಿ: 40-44
ಆಪ್: 25-29
ಕಾಂಗ್ರೆಸ್:0-2

ಪೀಪಲ್ಸ್ ಪಲ್ಸ್ ದೆಹಲಿ ವಿಧಾನಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆ
ಬಿಜೆಪಿ: 51-60
ಆಪ್: 10-19
ಕಾಂಗ್ರೆಸ್: 00

ದೆಹಲಿ ವಿಧಾನಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆ
ಬಿಜೆಪಿ: 42-50
ಆಪ್:18-25
ಕಾಂಗ್ರೆಸ್:0-2

ಚಾಣಾಕ್ಯ ಸ್ಟಾರ್ಟರ್ಜಿ ದೆಹಲಿ ವಿಧಾನಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆ
ಬಿಜೆಪಿ:  39-44
ಆಪ್: 25-28
ಕಾಂಗ್ರೆಸ್: 2-3

ಸದ್ಯ ಹೊರಬಿದ್ದಿರುವ ಎಲ್ಲಾ ಸಮೀಕ್ಷೆಗಳ ಪೋಲ್ ಆಫ್ ಪೋಲ್ ನೋಡಿದರೆ, ಅಂಕಿ ಅಂಶಗಳ ಪ್ರಕಾರ ಬಿಜೆಪಿ 44 ಸ್ಥಾನ ಗೆದ್ದರೆ, ಆಪ್ 22 ಸ್ಥಾನಕ್ಕೆ ಕುಸಿಯಲಿದೆ ಎಂದಿದೆ. ಇನ್ನು ಕಾಂಗ್ರೆಸ್ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ ಎಂದಿದೆ. 

ಪೋಲ್ ಡೈರಿ ದೆಹಲಿ ವಿಧಾನಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆ
ಬಿಜೆಪಿ: 44
ಆಪ್:22
ಕಾಂಗ್ರೆಸ್:1

ಕಳೆದ ಕೆಲ ವರ್ಷಗಳಿಂದ ಮತಗಟ್ಟೆ ಚುನಾವಣೆ ಸಮೀಕ್ಷೆಗಳು ನಂಬಿಕೆ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ. ಕರ್ನಾಟಕದ ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆ, ಹರ್ಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆಗಳು ಸಂಪೂರ್ಣ ಉಲ್ಟಾ ಆಗಿತ್ತು. ಹೀಗಾಗಿ ದೆಹಲಿ ಚುನಾವಣೆ ಇದೇ ಹಾದಿಯಲ್ಲಿ  ಸಾಗುತ್ತಾ ಅನ್ನೋ ಚರ್ಚೆಗಳು ಶುರುವಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು