ರಾಮಮಂದಿರ ಉದ್ಘಾಟನೆ ದಿನವೇ ನಿಜ ಸ್ವಾತಂತ್ರ್ಯ: ಭಾಗವತ್‌

By Kannadaprabha News  |  First Published Jan 14, 2025, 8:25 AM IST

ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯನ್ನು 'ಪ್ರತಿಷ್ಠಾ ದ್ವಾದಶಿ' ಎಂದು ಆಚರಿಸಿ ಭಾರತದ ನಿಜ ಸ್ವಾತಂತ್ರ್ಯವೆಂದು ಘೋಷಿಸಬೇಕೆಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. 


ಇಂದೋರ್‌: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ದಿನವನ್ನು ‘ಪ್ರತಿಷ್ಠಾ ದ್ವಾದಶಿ’ ಎಂದು ಆಚರಿಸಿ ಭಾರತದ ನೈಜ ಸ್ವಾತಂತ್ರ್ಯವೆಂದು ಘೋಷಿಸಬೇಕೆಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ ಹೇಳಿದ್ದಾರೆ.

ಇಂದೋರ್‌ನಲ್ಲಿ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರೈ ಅವರಿಗೆ ‘ ರಾಷ್ಟ್ರೀಯ ದೇವಿ ಅಹಲ್ಯಾ ಪ್ರಶಸ್ತಿ’ ಪ್ರದಾನದ ಬಳಿಕ ಮಾತನಾಡಿದ ಅವರು‘ಹಲವಾರು ಶತಮಾನಗಳವರೆಗೆ ಶತ್ರುದಾಳಿ ಎದುರಿಸಿದ ಭಾರತಕ್ಕೆ ಮಂದಿರ ಉದ್ಘಾಟನೆ ನಂತರ ನಿಜವಾದ ಸ್ವಾತಂತ್ರ್ಯ ದೊರೆಯಿತು. ರಾಮ ಮಂದಿರ ಆಂದೋಲನವನ್ನು ಭಾರತವನ್ನು ಜಾಗೃತಗೊಳಿಸಲು ಪ್ರಾರಂಭಿಸಲಾಯಿತು. ಇದರಿಂದ ದೇಶ ತನ್ನ ಸ್ವಸಾಮರ್ಥ್ಯದ ಮೇಲೆ ನಿಂತು ಜಗತ್ತಿಗೆ ದಾರಿ ತೋರಿಸಬಹುದು’ ಎಂದರು.

Tap to resize

Latest Videos

ಈ ದಿನವನ್ನು ಪ್ರತಿಷ್ಠಾ ದ್ವಾದಶಿ ಎಂದು ಆಚರಿಸಬೇಕು, ಇದು ಶತಮಾನಗಳ ಪರಚಕ್ರ (ಬಾಹ್ಯ ಆಕ್ರಮಣ) ನಂತರ ಭಾರತದ ಸಾರ್ವಭೌಮತ್ವದ ಸ್ಥಾಪನೆಯನ್ನು ಸೂಚಿಸುತ್ತದೆ. ರಾಮಮಂದಿರ ಆಂದೋಲನವು ಯಾರನ್ನೂ ವಿರೋಧಿಸಲು ಅಲ್ಲ, ಆದರೆ ಭಾರತವನ್ನು ಜಾಗೃತಗೊಳಿಸುವ ಪ್ರಯತ್ನವಾಗಿದೆ, ಇದರಿಂದಾಗಿ ಭಾರತ ಸ್ವತಂತ್ರವಾಗಿ ನಿಂತು ಜಗತ್ತಿಗೆ ಮಾರ್ಗದರ್ಶನ ನೀಡಬಹುದು ಎಂದು ಹೇಳಿದರು.

click me!