ರಾಹುಲ್ ಕೈಹಿಡಿಯದ ಸಂವಿಧಾನ, ಬಿಜೆಪಿಗೆ ವರವಾದ ಮೋದಿ ಆಡಳಿತ, ಸ್ಫೋಟಕ ಸಮೀಕ್ಷಾ ವರದಿ ಪ್ರಕಟ!

By Chethan Kumar  |  First Published Dec 20, 2024, 7:19 PM IST

ಹರ್ಯಾಣ ಹಾಗೂ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಭಾರಿ ಬಹುಮತದ ಗೆಲುವು ಸಾಧಿಸಿದೆ. ಇದಕ್ಕೆ ಕಾರಣವೇನು? ಕಾಂಗ್ರೆಸ್ ಎಡವಿದ್ದು ಎಲ್ಲಿ? ಈ ಕುರಿತು ಸಮೀಕ್ಷಾ ವರದಿಯೊಂದು ಹಲವು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದೆ. 
 


ನವದೆಹಲಿ(ಡಿ.20) ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಆಡಳಿ ನಡೆಸುತ್ತಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಜನ ಎನ್‌ಡಿಎ ಮತ ನೀಡಿದ್ದಾರೆ. ಭಾರಿ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಮಕಾಡೆ ಮಲಗಿದೆ. ಲೆಕ್ಕಾಚಾರ ಉಲ್ಟಾ ಆಗಿದೆ. ತಾಳ ತಪ್ಪಿ ಹೋಗಿದೆ. ಹರ್ಯಾಣದಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವುದು ಕಷ್ಟ ಎನ್ನಲಾಗಿತ್ತು, ಮಹಾರಾಷ್ಟ್ರದಲ್ಲಿ ಅತಂತ್ರ ಎಂದೇ ಹೇಳಲಾಗಿತ್ತು. ಆದರೆ ಮತದಾರರು ಬಿಜೆಪಿ ಹಾಗೂ ಎನ್‌ಡಿಎ ಕೂಟಕ್ಕೆ ಭಾರಿ ಬಹುಮತ ನೀಡಿದ್ದಾರೆ. ಇದಕ್ಕೆ ಕಾರಣವೇನು? ಜನರು ಕಾಂಗ್ರೆಸೆ್ ತಿರಸ್ಕರಿಸಿ ಬಿಜೆಪಿಗೆ ಮತ ಹಾಕಿದ್ದೇಕೆ? ಈ ಕುರಿತು ಸಮೀಕ್ಷಾ ವರದಿಯೊಂದು ಬಿಡುಗಡೆಯಾಗಿದೆ. ಈ ಎರಡು ರಾಜ್ಯಗಳಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿತ್ತು. ಆದರೂ ಬಿಜೆಪಿಗೆ ಜನ ಒಲವು ತೋರಿದ ಹಿಂದಿನ ಕಾರಣವನ್ನು ಈ ಸಮೀಕ್ಷೆ ಬಹಿರಂಗಪಡಿಸಿದೆ.

ಈ ಚುನಾವಣೆ, ಬಿಜೆಪಿ ಗೆಲುವು, ಕಾಂಗ್ರೆಸ್ ಸೋಲಿನ ಕಾರಣಗಳನ್ನು ಪಟ್ಟಿ ಮಾಡಿರುವ ಮ್ಯಾಟ್ರಿಝ್ ಸರ್ವೆ ಒಂದೇ ಮಾತಿನಲ್ಲಿ ರಾಹುಲ್ ಗಾಂಧಿ ಹಾಗೂ ಕಾಂಗ್ರಸ್‌ಗೆ ಸಂವಿಧಾನ ಕೈಹಿಡಿಯಲಿಲ್ಲ, ಇತ್ತ ಬಿಜೆಪಿಗೆ ಪ್ರಧಾನಿ ಮೋದಿ ಆಡಳಿತ ಹಾಗೂ ಜನಪ್ರಿಯತೆಯೇ ವರವಾಗಿದೆ ಎಂದಿದೆ. ಮ್ಯಾಟ್ರಿಝ್ ಸಂಸ್ಥೆ ನವೆಂಬರ್ 25 ರಿಂದ ಡಿಸೆಂಬರ್ 14ರ ವರೆಗೆ ಮಹಾರಾಷ್ಟ್ರದಲ್ಲಿ 76,830 ಮಂದಿ ಹಾಗೂ ಹರ್ಯಾಣದಲ್ಲಿ 53657 ಮಂದಿಯನ್ನು ಸಂದರ್ಶಿಸಿ ಈ ವರದಿ ತಯಾರಿಸಿದೆ. ಈ ವರದಿಯ ಪ್ರಮುಖ ಅಂಶಗಳು ಇಲ್ಲಿವೆ.

Tap to resize

Latest Videos

undefined

ಭಾರತದ ಸುಭದ್ರ ಭವಿಷ್ಯಕ್ಕಾಗಿ 11 ಮಹತ್ವಾಕಾಂಕ್ಷೆ ನಿರ್ಣಯ ಪ್ರಸ್ತಾಪಿಸಿದ ಪ್ರಧಾನಿ ಮೋದಿ!

ಮೋದಿ ಜನಪ್ರಿಯತೆ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಕ್ಕೆ ಕುಸಿದಿತ್ತು. ಆದರೆ ಮೋದಿ ಜನಪ್ರಿಯತೆ ಕಡಿಮೆಯಾಗರಲಿಲ್ಲ ಅನ್ನೋದು ಸಮೀಕ್ಷೆ ಬಹಿರಂಗಪಡಿಸಿದೆ. ಹರ್ಯಾಣ ಹಾಗೂ ಮಹಾರಾಷ್ಟ್ರ ಚುನಾವಣೆಯಲ್ಲಿ ಎರಡೂ ರಾಜ್ಯದ ಜನ ಪ್ರಧಾನಿ ನರೇಂದ್ರ ಮೋದಿ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿದ್ದಾರೆ ಅನ್ನೋದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಇಷ್ಟೇ ಹರ್ಯಾಣ ಹಾಗೂ ಮಹಾರಾಷ್ಟ್ರ ಎರಡೂ ರಾಜ್ಯದಲ್ಲಿ ಶೇಕಡಾ 53 ರಿಂದ 55ರಷ್ಟು ಜನ ಮೋದಿ ಜನಪ್ರಿಯತೆ, ಮೋದಿ ಚರಿಷ್ಮಾ ಹೆಚ್ಚಾಗಿದೆ ಎಂದಿದ್ದಾರೆ. ಎರಡೂ ರಾಜ್ಯದ ಜನ ಪ್ರಧಾನಿ ಮೋದಿ ಆಡಳಿತ ಮೆಚ್ಚಿಕೊಂಡಿದ್ದಾರೆ. ಸ್ವಚ್ಚ ಆಡಳಿತ, ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಸಿಕ್ಕಿರುವ ಸ್ಥಾನ ಸೇರಿದಂತೆ ಹಲವು ವಿಚಾರಗಳ ಕುರಿತು ಹೆಮ್ಮೆ ಪಟ್ಟಿದ್ದಾರೆ ಅನ್ನೋದು ಸಮೀಕ್ಷಾ ವರದಿಯಲ್ಲಿ ಬಹಿರಂಗವಾಗಿದೆ.

ಸಂವಿಧಾನ ಬದಲಾವಣೆ ಆಂದೋಲನ ಮುಳುವಾಯ್ತಾ?
ಕಾಂಗ್ರೆಸ್ ಈ ಎರಡು ರಾಜ್ಯಗಳಲ್ಲಿ ಅಧಿಕಾರ ಹಿಡಿಯುವ ಭರವಸೆಯಲ್ಲಿತ್ತು. ಆದರೆ ಎಲ್ಲವೂ ಉಲ್ಟಾ ಆಗಿದೆ. ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪ್ರಮುಖವಾಗಿ ಬಿಜೆಪಿ ವಿರುದ್ದ ಸಂವಿಧಾನ ಅಸ್ತ್ರ ಬಳಸಿತ್ತು. ಮೋದಿ ಸರ್ಕಾರ ಸಂವಿಧಾನ ಬದಲಿಸಲಿದೆ ಎಂದು ಅಭಿಯಾನ ಆರಂಭಿಸಿತ್ತು. ಲೋಕಸಭೆಯಲ್ಲಿ ಕಾಂಗ್ರೆಸ್ ತಕ್ಕಮಟ್ಟಿಗೆ ಯಶಸ್ಸು ಕಂಡಿತ್ತು. ಆದರೆ ಇದೇ ಕಾರಣವೇ ಅನ್ನೋದು ಸ್ಪಷ್ಟವಿಲ್ಲ. ಆದರೆ ಹರ್ಯಾಣ ಹಾಗೂ ಮಹಾರಾಷ್ಟ್ರ ಚುನಾವಣೆಯಲ್ಲೂ ಸಂವಿಧಾನ ಅಸ್ತ್ರ ಝಳಪಿಸಿತ್ತು. ಆದರೆ ಇದು ಕಾಂಗ್ರೆಸ್‌ಗೆ ತೀವ್ರ ಹೊಡೆತ ನೀಡಿದೆ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ. ಸಂವಿಧಾನ ಬದಲಾವಣೆ, ರೈತರ ಪ್ರತಿಭಟನೆ, ಕುಸ್ತಿ ಪಟುಗಳ ಪ್ರತಿಭಟನೆ ಸೇರಿದಂತೆ ಕೆಲ ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮಾಡಿದ ತಂತ್ರಗಳು ಜನರ ಮುಂದೆ ಫಲಿಸಲಿಲ್ಲ. ಇದಕ್ಕೆ ಜನರು ಸೊಪ್ಪ ಹಾಕಲಿಲ್ಲ. ಈ ಆಂದೋಲನಗಳು ಜನರಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಮ್ಯಾಟ್ರಿಜ್ ಸಮೀಕ್ಷೆ ಹೇಳಿದೆ.

ಮೋದಿ ನಾಯಕತ್ವ ಮುಂದೆ ಮಂಕಾದ ರಾಹುಲ್ ಗಾಂಧಿ
ಮೋದಿ ನಾಯಕತ್ವ, ಜನಪ್ರಿಯತೆ, ಆಡಳಿತ, ಜನರಿಗೆ ನೀಡಿದ ಗೌರವ, ವಿಷಗಳ ಕುರಿತ ವಿಚಾರ ಎಲ್ಲವೂ ಪ್ರಮುಖವಾಗಿತ್ತು. ಆದರೆ ಮೋದಿ ಮುಂದೆ ರಾಹುಲ್ ಗಾಂಧಿ ನಾಯಕತ್ವ ಕ್ಷೀಣಿಸಿತ್ತು ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ಸ್ಥಳೀಯ ಹಾಗೂ ತಳಮಟ್ಟದ ಸಮಸ್ಯೆಗಳು, ಅಲ್ಲಿನ ಕಾರ್ಯಕರ್ತರ ಬೇಡಿಕೆಗಳನ್ನು ಆಲಿಸುವಲ್ಲಿ ರಾಹುಲ್ ಗಾಂಧಿ ವಿಫಲರಾಗಿದ್ದಾರೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. 

ಏಕ್ ಹೇ ತೋ ಸೇಫ್ ಹೇ
ನಾವೆಲ್ಲಾ ಒಗ್ಗಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೇವೆ ಅನ್ನೋ ಬಿಜೆಪಿ ಘೋಷಣೆ ಕೂಡ ಪರಿಣಾಮ ಬೀರಿದೆ. ಇದಕ್ಕೆ ಕೌಂಟರ್ ನೀಡುವ ಘೋಷಣಾ ವಾಕ್ಯ ಕಾಂಗ್ರೆಸ್ ಬಳಿ ಇರಲಿಲ್ಲ. ಬಿಜೆಪಿ ಇಷ್ಟಕ್ಕೆ ಘೋಷಣಾ ವಾಕ್ಯ ನಿಲ್ಲಿಸಲಿಲ್ಲ. ಇದರ ಜೊತೆಗೆ ಯೋಗಿ ಆದಿತ್ಯನಾಥ್ ಬಡೇಂಗೆ ತೋ ಕಟೇಂಗೆ ಅನ್ನೋ ಘೋಷಣಾ ವಾಕ್ಯ ಮತಾದರರಲ್ಲಿ ಪರಿಣಾಮ ಬೀರಿತ್ತು ಎಂದಿದೆ. ಪ್ರಮುಖವಾಗಿ ರಾಷ್ಟ್ರೀಯ ಭದ್ರತೆ, ಗಡಿ ಸಮಸ್ಯೆ, ಆಂತರಿಕ ಗಲಭೆ, ಭಯೋತ್ಪಾದನೆ, ಆರ್ಥಿಕ ಬೆಳವಣಿಗೆ ಸೇರಿದಂತೆ ಹಲವು ವಿಚಾರಗಳಲ್ಲಿ ಜನ ಬಿಜೆಪಿ ಬಯಸಿದ್ದರು ಎಂದು ಸಮೀಕ್ಷ ಹೇಳುತ್ತಿದೆ.

ಸಿನಿಮಾ ಹಾಡು ಕೇಳ್ತಾರಾ ಮೋದಿ ? ಅಲಿಯಾ ಭಟ್ ಪ್ರಶ್ನೆಗೆ ಪ್ರಧಾನಿ ಉತ್ತರವೇನು?

ಹರ್ಯಾಣದಲ್ಲಿ ಬಿಜೆಪಿ ನಾಯಕತ್ವದಲ್ಲಿ ಮಾಡಿದ ಬದಲಾವಣೆ ಶೇಕಡಾ 44ರಷ್ಟು ಮಂದಿಯಲ್ಲಿ ಪರಿಣಾಮ ಬೀರಿದೆ ಎಂದು ಸಮೀಕ್ಷೆ ಹೇಳಿದೆ.  ಲೋಕಸಭೆ ಚುನಾವಣಾ ಫಲಿತಾಂಶ ಸೊರಗಿದ್ದ ಕಾಂಗ್ರೆಸ್‌ಗೆ ಹೊಸ ಚೈತನ್ಯ ನೀಡಿದ್ದು ಸುಳ್ಳಲ್ಲ. ಆದರೆ ಹರ್ಯಾಣ ಹಾಗೂ ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಜೊತೆಗೆ ಇದೀಗ ಬಂದಿರುವ ಸಮೀಕ್ಷೆ ಕಾಂಗ್ರೆಸ್ ಆತ್ಮಾವಲೋಕನ ಮಾಡುವಂತೆ ಮಾಡಿದೆ.
 

click me!