ಪ್ರಶಾಂತ್‌ ಕಿಶೋರ್ ಆಡಿಯೋ ವೈರಲ್‌: ಮೋದಿ ಮೋಡಿ, ಬಿಜೆಪಿ ಎದುರು ಮಂಡಿಯೂರಿತಾ ಟಿಎಂಸಿ?

Published : Apr 10, 2021, 11:02 AM ISTUpdated : Apr 10, 2021, 11:09 AM IST
ಪ್ರಶಾಂತ್‌ ಕಿಶೋರ್ ಆಡಿಯೋ ವೈರಲ್‌: ಮೋದಿ ಮೋಡಿ, ಬಿಜೆಪಿ ಎದುರು ಮಂಡಿಯೂರಿತಾ ಟಿಎಂಸಿ?

ಸಾರಾಂಶ

ಪಶ್ಚಿಮ ಬಂಗಾಳದಲ್ಲಿ ಮೋದಿ ಮೋಡಿ| ವೈರಲ್ ಆಯ್ತು ಟಿಎಂಸಿ ಚುನಾವಣಾ ತಂತ್ರಗಾರನ ಆಡಿಯೋ| ಇಡೀ ಆಡಿಯೋ ಬಹಿರಂಗಪಡಿಸಿ ಎಂದು ಚಾಲೆಂಜ್ ಹಾಕಿದ ಪ್ರಶಾಂತ್ ಕಿಶೋರ್

ಕೋಲ್ಕತ್ತಾ(ಏ.10): ಹತ್ತು ವರ್ಷಗಳ ಹಿಂದೆ 34 ವರ್ಷ ಹಳೆಯ ಎಡಪಂಥೀಯರ ಭದ್ರಕೋಟೆ ಕೆಡವಿದ್ದ ಮಮತಾ ಬ್ಯಾನರ್ಜಿ ಸೋಲುತ್ತಾರಾ? ಸದ್ಯ ಈ ಪ್ರಶ್ನೆ ಪಶ್ಚಿಮ ಬಂಗಾಳ ಮಾತ್ರವಲ್ಲ ಇಡೀ ದೇಶಾದ್ಯಂತ ಭಾರೀ ಚರ್ಚೆ ಹುಟ್ಟಿಸಿದೆ. ಪಶ್ಚಿಮ ಬಂಗಾಳ ಚುನಾವಣೆ ಸಂಬಂಧ ಟಿಎಂಸಿಯ ಚುನಾವಣಾ ತಂತ್ರಗಾರ ನಡೆಸಿದ್ದಾರೆನ್ನಲಾದ ಚಾಟ್‌ ಬಹಿರಂಗಗೊಂಡಿದ್ದು, ಈ ಮಾತುಗಳಿಗೆ ಮತ್ತಷ್ಟು ಬಲ ತುಂಬಿದೆ. ಈ ಚಾಟಿಂಗ್ ಮಮತಾ ಬ್ಯಾನರ್ಜಿಗೆ ಆತಂಕ ಸೃಷ್ಟಿಸಿದೆ. 

ಕಳೆದ ಕೆಲ ದಿನಗಳ ಹಿಂದೆ ಟಿಎಂಸಿ ಒಂದು ಆಂತರಿಕ ಸಮೀಕ್ಷೆ ನಡೆಸಿತ್ತು. ಇದರಲ್ಲಿ ಬಿಜೆಪಿ ಗೆಲುವಿನ ನಗೆ ಬೀರುವ ಸುಳಿವು ಲಭಿಸಿತ್ತು. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಈ ಬ್ಗಗೆ ಟ್ವೀಟ್ ಕೂಡಾ ಮಾಡಿದ್ದು, ಪ್ರಶಾಂತ್ ಕಿಶೋರ್ ಕ್ಲಬ್‌ ಹೌಸ್‌ನಲ್ಲಿ ಮಾತುಕತೆ ನಡೆಸುತ್ತಿದ್ದರು, ಆದರೆ ಅವರಿಗೆ ತಮ್ಮ ಈ ಚಾಟ್‌ ವೈರಲ್ ಆಗುತ್ತದೆ ಎಂಬ ವೈರಲ್ ಆಗುತ್ತದೆ ಎಂಬ ಊಹೆಯೂ ಇರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ

ಆದರೆ ಪ್ರಶಾಂತ್ ಕಿಶೋರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತನ್ನ ಈ ಮಾತುಕತೆಯ ಸಂಪೂರ್ಣ ಆಡಿಯೋ ಬಹಿರಂಗಪಡಿಸಿ. ಹೀಗೆ ಆಯ್ದ ಭಾಗವನ್ನು ಮಾತ್ರ ರಿಲೀಸ್ ಮಾಡಿದ್ರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ. 

ಏನಿದು ವಿಚಾರ?

ಈ ಬಗ್ಗೆ ಟ್ವೀಟ್ ಮಾಡಿರುವ ಅಮಿತ್ ಮಾಳವೀಯ ಕ್ಲಬ್‌ ಹೌಡ್‌ನ ಸಾರ್ವಜನಿಕ ಮಾತುಕತೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿಯ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್, ಟಿಎಂಸಿಯ ಆಂತರಿಕ ಸಮೀಕ್ಷೆಯಲ್ಲೂ ಬಿಜೆಪಿಯೇ ಗೆಲುವು ಸಾಧಿಸುತ್ತದೆ ಎಂಬುವುದನ್ನು ಒಪ್ಪಿಕೊಂಡಿದ್ದಾರೆ. ಟಿಎಂಸಿ ವಿರುದ್ಧ ಜನರಲ್ಲಿ Anti-incumbency ಹುಟ್ಟಿಕೊಂಡಿದೆ, ಜೊತೆಗೆ ದಲಿತರ ಮತ ಬಿಜೆಪಿ ಪರವಿರುವುದೇ ಇದಕ್ಕೆ ಕಾರಣ ಎಂದೂ ತಿಳಿಸಿದ್ದಾರೆ. ಬಹುಶಃ ಈ ಆಡಿಯೋ ಬಹಿರಂಗಗೊಳ್ಳಬಹುದೆಂದು ಪ್ರಶಾಂತ್‌ ಕಿಶೋರ್ ಅಂದಾಜಿಸಿರಲಿಲ್ಲ ಎಂದಿದ್ದಾರೆ.

ಇಷ್ಟೇ ಅಲ್ಲದೇ ಈ ಆಡಿಯೋದಲ್ಲಿ ಪ್ರಶಾಂತ್ ಕಿಶೋರ್ ಎಡಪಂಥೀಯರು, ಕಾಂಗ್ರೆಸ್‌ ಹಾಗೂ ಟಿಎಂಸಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಕೇವಲ ಮುಸಲ್ಮಾನರ ಮನವಿಯನ್ನಷ್ಟೇ ಆಲಿಸಿದ್ದಾರೆ. ಈ ವಿಚಾರವಾಗಿ ಜನರಲ್ಲಿ ಈ ಪಕ್ಷಗಳ ವಿರುದ್ಧ ಕೋಪವಿದೆ ಎಂದೂ ಹೇಳಿರುವುದು ಕೇಳಬಹುದಾಗಿದೆ. ಜೊತೆಗೆ ಬಂಗಾಳದಲ್ಲಿ ಪಿಎಂ ಮೋದಿ ಜನಪ್ರಿಯತೆ ಹೆಚ್ಚಿದ್ದು, ಇಡೀ ದೇಶವೇ ಅವರನಬ್ನು ಇಷ್ಟಪಡುತ್ತದೆ ಎಂಬುವುದನ್ನೂ ಚುನಾವಣಾ ತಂತ್ರಗಾರ ಒಪ್ಪಿಕೊಂಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!
ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ