ಮಾತು ಕೇಳದ ಪ್ರಜ್ಞಾಗಿಲ್ಲ ಪ್ರಜ್ಞೆ: ಪ್ರಧಾನಿ ಮೋದಿ ಕೊಟ್ಟರು ಶಿಕ್ಷೆಯ ಆಜ್ಞೆ!

By Web DeskFirst Published Nov 28, 2019, 2:59 PM IST
Highlights

ಗೋಡ್ಸೆ ದೇಶಭಕ್ತ ಎಂದ ಸಾಧ್ವಿ ಪ್ರಜ್ಞಾಗೆ ಶಿಕ್ಷೆ ನೀಡಿದ ಬಿಜೆಪಿ| ಲೋಕಸಭೆಯಲ್ಲಿ ಗೋಡ್ಸೆ ಹೊಗಳಿ ವಿವಾದ ಸೃಷ್ಟಿಸಿದ್ದ ಸಾಧ್ವಿ| ರಕ್ಷಣಾ ಇಲಾಖೆಯ ಸಲಹಾ ಸಮಿತಿಯಿಂ ಸಾಧ್ವಿ ಔಟ್| ಅಧಿವೇಶನದ ವೇಳೆ ಸಂಸದೀಯ ಪಕ್ಷದ ಸಭೆಯಲ್ಲಿ ಭಾಗವಹಿಸದಿರುವಂತೆ ತಡೆ| ಸಾಧ್ವಿ ಹೇಳಿಕೆಯನ್ನು ಪಕ್ಷ ಬೆಂಬಲಿಸುವುದಿಲ್ಲ ಎಂದ ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ| ಪ್ರಧಾನಿ ಮೋದಿ ಕೂಡ ಗೋಡ್ಸೆ ಆಲೋಚನೆಯ ಪ್ರತಿಪಾದಕರು ಎಂದು ಹರಿಹಾಯ್ದ ಕಾಂಗ್ರೆಸ್|

ನವದೆಹಲಿ(ನ.28): ಪಕ್ಷದ ಎಚ್ಚರಿಕೆಯನ್ನು ಕಡೆಗಣಿಸಿ ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುತ್ತಿರುವ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಕೊನೆಗೂ ಮೋದಿ ಸರ್ಕಾರ ಛಾಟಿಯೇಟು ನೀಡಿದೆ.

ಸಾಧ್ವಿ ಪ್ರಜ್ಞಾ ಅವರನ್ನು ರಕ್ಷಣಾ ಇಲಾಖೆಯ ಸಲಹಾ ಸಮಿತಿಯಿಂದ ಕೈಬಿಡಲಾಗಿದ್ದು, ಅಧಿವೇಶನದ ವೇಳೆ ಸಂಸದೀಯ ಪಕ್ಷದ ಸಭೆಯಲ್ಲಿ ಭಾಗವಹಿಸದಿರುವಂತೆ ಬಿಜೆಪಿ ಕಟ್ಟುನಿಟ್ಟಿನ ಆಜ್ಞೆ ಹೊರಡಿಸಿದೆ.

BJP has barred Pragya Singh Thakur from attending all Parliamentary Party meetings for the rest of the winter session, a day after the controversial Lok Sabha MP made remarks referring to Nathuram Godse in Parliament

Read story | https://t.co/mIOyVbfZq3 pic.twitter.com/Xei3hfwSmK

— ANI Digital (@ani_digital)

ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ, ಲೋಕಸಭೆಯಲ್ಲಿ ಗೋಡ್ಸೆ ಅವರನ್ನು ದೇಶಭಕ್ತ ಎಂದು ಕರೆದ ಸಾಧ್ವಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಗೋಡ್ಸೆಯನ್ನು ಮತ್ತೆ ‘ದೇಶಭಕ್ತ’ ಎಂದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ!

ಸಾಧ್ವಿ ಹೇಳಿಕೆ ಖಂಡನೀಯ ಎಂದ ನಡ್ಡಾ, ಬಿಜೆಪಿ ಎಂದಿಗೂ ಅವರ ಹೇಳಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಚಳಿಗಾಲ ಅಧಿವೇಶನದ ವೇಳೆ ಬಿಜೆಪಿ ಸಂಸದೀಯ ಪಕ್ಷದ ಸಭೆಗಳಲ್ಲಿ ಪ್ರಜ್ಞಾ ಭಾಗವಹಿಸುವಂತಿಲ್ಲ ಎಂದು ಅವರು ಗುಡುಗಿದ್ದಾರೆ.

BJP Working President JP Nadda: Pragya Thakur's statement (referring to Nathuram Godse as 'deshbhakt') yesterday in the parliament is condemnable. She will be removed from the consultative committee of defence. pic.twitter.com/hHO9ocihdf

— ANI (@ANI)

ನಿನ್ನೆ ಲೋಕಸಭೆಯಲ್ಲಿ ಮಾತನಾಡಿದ್ದ ಪ್ರಜ್ಞಾ, ನಾಥೂರಾಮ್ ಗೋಡ್ಸೆ ದೇಶಭಕ್ತ ಎಂದು ಕರೆದು ವಿವಾದ ಸೃಷ್ಟಿಸಿದ್ದರು. ಪ್ರಜ್ಞಾ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದ್ದ ವಿಪಕ್ಷಗಳು, ಸಾಧ್ವಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದವು.

Congress MPs stage walkout from Lok Sabha amid uproar over BJP MP Pragya Thakur's comments in parliament yesterday, referring to Nathuram Godse as a 'deshbbhakt'. pic.twitter.com/Jj0NLd8Vmi

— ANI (@ANI)

ಪದೇ ಪದೇ ಗೋಡ್ಸೆಯನ್ನು ಹೊಗಳುತ್ತಿರುವ ಸಾಧ್ವಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳದ ಮೋದಿ ಕೂಡ ಗೋಡ್ಸೆ ಆಲೋಚನೆಯ ಪ್ರತಿಪಾದಕರು ಎಂದು ಕಾಂಗ್ರೆಸ್ ಹರಿಹಾಯ್ದಿತ್ತು.

click me!