
ಜೋಧ್‌ಪುರ[ಡಿ.28]: ಭಾರತೀಯ ವಾಯು ಪಡೆಯಿಂದ ಬಹದ್ದೂರ್ ಎಂದು ಕರೆಸಿಕೊಂಡಿದ್ದ ಮಿಗ್-27 ವಿಮಾನಗಳು ಜೋಧಪುರದ ವಾಯು ನೆಲೆಯಲ್ಲಿ ಶುಕ್ರವಾರ ಕೊನೆಯ ಹಾರಾಟ ನಡೆಸುವ ಮೂಲಕ ಸೇವೆಯಿಂದ ನಿವೃತ್ತಿ ಹೊಂದಿತು.
ಮಿಗ್ 27 ಶ್ರೇಣಿಯ ಕೊನೆಯ ಸ್ಕ್ವಾರ್ಡನ್‌ನ 7 ವಿಮಾನಗಳು ಜೋಧಪುರ ವಾಯು ನೆಲೆಯ ಮೂಲಕ ಕಾರ್ಯಚರಣೆ ನಡೆಸುತ್ತಿದ್ದವು. ಪೈಲಟ್ ಅನುಪಮ್ ಬ್ಯಾನರ್ಜಿ ಅವರು ಮಿಗ್- 27 ವಿಮಾನವನ್ನು ಕೊನೆಯ ಬಾರಿ ಹಾರಾಟ ನಡೆಸಿದರು. ಹಾರಾಟದ ಬಳಿಕ ಮಿಗ್- 27 ವಿಮಾನವನ್ನು ಸುಖೋಯ್ - 30 ವಿಮಾನಗಳ ಬೆಂಗಾವಲಿನಲ್ಲಿ ಇಳಿಸಲಾಯಿತು. ಬಳಿಕ ಸಾಂಪ್ರದಾಯಿಕ ಜಲಫಿರಂಗಿ ಹಾರಿಸಿ ಸೆಲ್ಯೂಟ್ ಸಲ್ಲಿಸಲಾಯಿತು. ಈ ಮೂಲಕ ಮಿಗ್ ವಿಮಾನ ಇತಿಹಾಸ ಪುಟ ಸೇರಿತು. ಮಿಗ್-27 ವಿಮಾನದ ಬೀಳ್ಕೊಡುಗೆ ಸಮಾರಂಭದ ವೇಳೆ ಏರ್ ಮಾರ್ಷಲ್ ಎಸ್.ಕೆ. ಘೋತಿಯಾ ಅವರು ಉಪಸ್ಥಿತರಿದ್ದರು.
ಮಿಗ್ ಸರಣಿಯ ಮಿಗ್- 23 ಬಿಎನ್ ಮತ್ತು ಮಿಗ್ 23 ಎಂಎಫ್ ಮತ್ತು ಮೂಲ ಮಿಗ್-27 ವಿಮಾನಗಳು ಈಗಾಗಲೇ ವಾಯು ಪಡೆಯಿಂದ ನಿವೃತ್ತಿ ಆಗಿವೆ.
1980ರ ದಶಕದಲ್ಲಿ ಸೋವಿಯತ್ ಒಕ್ಕೂಟದಿಂದ ಖರೀದಿಸಿದ್ದ ಮಿಗ್ 27 ವಿಮಾನಗಳು ಈಗ ತೀರಾ ಹಳೆದಾಗಿದ್ದು, ಪದೇ ಪದೆ ಅಪಘಾತಕ್ಕೀಡಾಗುತ್ತಿರುವುದರಿಂದ ಈ ವಿಮಾನಗಳ ಸೇವೆಯನ್ನು ಅಂತ್ಯಗೊಳಿಸಲಾಗಿದೆ. ಪಾಕಿಸ್ತಾನದ ವಿರುದ್ಧದ 1999ರ ಕಾರ್ಗಿಲ್ ಯುದ್ಧದ ವೇಳೆ ಮಿಗ್-27 ವಿಮಾನ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತ್ತು. 1985ರಿಂದ ಆರಂಭಿಸಿ ಭಾರತೀಯ ವಾಯು ಸೇನೆ ಇದುವರೆಗೆ 165 ಮಿಗ್-27 ಯುದ್ಧ ವಿಮಾನಗಳನ್ನು ಕಾರ್ಯಾಚರಣೆಗೆ ಬಳಕೆ ಮಾಡಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ