ರಾಜಸ್ಥಾನದಲ್ಲಿ ಅಶ್ಲೀಲ ವಿಡಿಯೋದ ಪ್ರತಿಧ್ವನಿ ಕೇಳಿ ಬರುತ್ತಿದೆ. ಬಾರ್ಮರ್ ಮಾಜಿ ಶಾಸಕ ಮೇವರಾಂ ಜೈನ್ ಅವರ ಎರಡು ವೀಡಿಯೊಗಳು ಸುದ್ದಿಯಲ್ಲಿವೆ.
ಪಶ್ಚಿಮ ರಾಜಸ್ಥಾನದಲ್ಲಿ ಹೈ ಪ್ರೊಫೈಲ್ ಸಿಡಿ ಬಿಡುಗಡೆ ಹಾಟ್ ಟಾಪಿಕ್ ಆಗಿದೆ. ಅಪ್ರಾಪ್ತ ಯುವತಿ ಮತ್ತು ಇತರ ಮಹಿಳೆಯರ ಮೇಲೆ ಅತ್ಯಾಚಾರದ ಆರೋಪಕ್ಕೊಳಗಾಗಿರುವ ಬಾರ್ಮರ್ ಮಾಜಿ ಶಾಸಕ ಮೇವಾರಾಂ ಜೈನ್ ಅವರ ಎರಡು ಅಶ್ಲೀಲ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಮೂರು ಬಾರಿ ಶಾಸಕರಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಮೇವಾರಾಂ ವಿರುದ್ಧ ಕ್ರಮಕ್ಕೆ ಭಾರೀ ಕೂಗು ಎದ್ದಿದೆ.
ಏನು ವಿಷಯ?
ಕೆಲ ದಿನಗಳ ಹಿಂದೆ ಬಾರ್ಮರ್ ಮಾಜಿ ಶಾಸಕ ಮೇವಾರಂ ಜೈನ್ ವಿರುದ್ಧ ವಿವಾಹಿತ ಮಹಿಳೆಯೊಬ್ಬರು ಜೋಧ್‌ಪುರದ ರಾಜೀವ್ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಜೈನ್ ಮತ್ತು ಆತನ ಸಹಚರ ರಾಮಸ್ವರೂಪ್ ಆಚಾರ್ಯ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಮತ್ತು ತನ್ನ 15 ವರ್ಷದ ಅಪ್ರಾಪ್ತ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಮೇವಾರಂ ಜೈನ್ ಮತ್ತು ಆರ್‌ಪಿಎಸ್ ಆನಂದ್ ಸಿಂಗ್ ರಾಜಪುರೋಹಿತ್ ಸೇರಿದಂತೆ 9 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆ ಸಮಯದಲ್ಲಿ ಮಹಿಳೆ ಎರಡು ಅಶ್ಲೀಲ ವೀಡಿಯೊಗಳನ್ನು ಸಹ ಉಲ್ಲೇಖಿಸಿದ್ದಳು. ಇದೀಗ ಈ ವಿಡಿಯೋ ಹೊರಬಿದ್ದ ಬೆನ್ನಲ್ಲೇ ಮತ್ತೊಮ್ಮೆ ಗದ್ದಲ ಎದ್ದಿದೆ.
ವಿಷಯ ನ್ಯಾಯಾಲಯದ ಮೆಟ್ಟಿಲೇರಿತ್ತು..
ಈ ಹಿಂದೆ ದೂರಿನನ್ವಯ ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಹೇಳಿಕೆಗಳನ್ನೂ ದಾಖಲಿಸಿಕೊಳ್ಳಲಾಗಿದೆ. ಇದೇ ವೇಳೆ ಮೇವಾರಂ ಜೈನ್ ಈ ವಿಚಾರದಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಇದಾದ ಬಳಿಕ ಹೈಕೋರ್ಟ್ ರಿಲೀಫ್ ನೀಡಿ ಜನವರಿ 25ರವರೆಗೆ ಬಂಧನಕ್ಕೆ ನಿಷೇಧ ಹೇರಿದ್ದು, ತನಿಖೆಗೆ ಸಹಕರಿಸುವಂತೆ ಸೂಚನೆಯನ್ನೂ ನೀಡಿತ್ತು. ವಿಧಾನಸಭೆ ಚುನಾವಣೆಯಲ್ಲೂ ಈ ವಿಚಾರ ಜೋರಾಗಿ ಪ್ರಸ್ತಾಪವಾಗಿತ್ತು. ಆದರೆ, ಈಗ ವಿಡಿಯೋ ಹೊರ ಬಿದ್ದ ಬಳಿಕ ವಿಷಯ ಮತ್ತೆ ಮುನ್ನಲೆಗೆ ಬಂದಿದೆ.
ವೀಡಿಯೊದಲ್ಲಿ ಏನಿದೆ?
ವೈರಲ್ ವಿಡಿಯೋದಲ್ಲಿ, ಮೇವಾರಂ ಜೈನ್ ಕೋಣೆಗೆ ಪ್ರವೇಶಿಸಿದ ತಕ್ಷಣ, ಮಹಿಳೆಯೊಬ್ಬರು ವಾರ್ಡ್‌ರೋಬ್ ರ್ಯಾಕ್‌ನಲ್ಲಿ ತನ್ನ ಮೊಬೈಲ್ ಕ್ಯಾಮೆರಾವನ್ನು ಸ್ವಿಚ್ ಆನ್ ಮಾಡಿರುವುದನ್ನು ಕಾಣಬಹುದು. ಇದಾದ ನಂತರ ಮಾಜಿ ಶಾಸಕರು ಕೊಠಡಿಗೆ ಬಂದು ಸ್ವಲ್ಪ ಹೊತ್ತು ಮಾತನಾಡಿ ನೀರು ಕುಡಿದು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾರೆ.
ಈ ಸಂಬಂಧ ಇನ್ಸ್ಟಾಗ್ರಾಂನಲ್ಲಿ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸರಣಿ ಫೋಟೋ, ವಿಡಿಯೋಗಳನ್ನು ಹಾಕಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ಈ 70ರ ಮಾಜಿ ಶಾಸಕ, ತನ್ನ ರಾಕ್ಷಸ ಕೃತ್ಯಗಳಿಗಾಗಿ 12-14 ವರ್ಷ ವಯಸ್ಸಿನ ಹುಡುಗಿಯರನ್ನು ಬಯಸುತ್ತಾನೆ. ಅವರ ಖಾಸಗಿ ಭಾಗಗಳಿಗೆ ರಾಡ್‌ಗಳನ್ನು ಹಾಕಿ ಚಿತ್ರಹಿಂಸೆ ನೀಡಿ ವಿಕೃತ ಆನಂದ ಪಡೆಯುತ್ತಾನೆ. ಗಾಂಧಿ ಕುಟುಂಬಕ್ಕೆ ಹತ್ತಿರ ಎನಿಸಿರುವ ಅವರು ಟಿಕೆಟ್ ಪಡೆವಲ್ಲಿ ಈ ಕುಟುಂಬದ ಆಶೀರ್ವಾದವೂ ಇತ್ತು ಎಂದು ಆರೋಪಿಸಿದ್ದಾರೆ.
ರಾಹುಲ್‌ಗೆ ಕ್ಲೋಸ್?
ಪ್ರಕರಣ ಸದ್ದು ಮಾಡುತ್ತಿದ್ದಂತೆಯೇ ಮೇವಾರಂ ಜೈನ್ ಅವರು ರಾಹುಲ್ ಗಾಂಧಿಯವರೊಂದಿಗಿರುವ ಫೋಟೋ ವೈರಲ್ ಆಗುತ್ತಿದೆ. 'ರಾಹುಲ್ ಗಾಂಧಿಗೆ ಅವರ ಕಾರ್ಯಗಳ ಬಗ್ಗೆ ತಿಳಿದಿದ್ದರೂ ಅವರ ಟಿಕೆಟ್ ಖಾತ್ರಿಪಡಿಸಿದರು ಮತ್ತು ಮೇವಾರಂಗೆ ತಮ್ಮ ಬೆಂಬಲವನ್ನು ತೋರಿಸಲು ಅವರೊಂದಿಗೆ ಚಿತ್ರವನ್ನೂ ತೆಗೆದುಕೊಂಡರು' ಎಂದು ಪೂನಾವಾಲಾ ಆರೋಪಿಸಿದ್ದಾರೆ. ಜೊತೆಗೆ, ಕಾಂಗ್ರೆಸ್ ಪಕ್ಷದ ಉನ್ನತ ನಾಯಕರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಮೇವಾರಂ ಹಗರಣದ ಸಂತ್ರಸ್ತರನ್ನು ಭೇಟಿ ಮಾಡುತ್ತೀರಾ ಎಂದು ಪ್ರಿಯಾಂಕಾ ಗಾಂಧಿಗೆ ಕೇಳಿರುವ ಪೂನಾವಾಲಾ, ಎಲ್‌ಕೆಎಫ್‌ಸಿ ಈಗ ಫ್ಯಾಕ್ಟ್ ಚೆಕ್ ಮಾಡುತ್ತದೆಯೇ? ಸುಪ್ರಿಯಾ ಶ್ರೀನಾಥೆ ಈ ಬಗ್ಗೆ ಬಾಯಿ ತೆರೆಯುತ್ತಾಳೆಯೇ ಎಂದು ಪ್ರಶ್ನಿಸಿದ್ದಾರೆ.
'ಭನ್ವಾರಿ ದೇವಿಯಿಂದ ಮೇವಾರಂವರೆಗೆ, ಅವರ ಐವೈಸಿ ಮುಖ್ಯಸ್ಥರಿಂದ ತಂದೂರ್ ಕಾಂಡ್‌ವರೆಗೆ, ಶಾಂತಿ ಧರಿವಾಲ್‌ರಿಂದ ನಿತೀಶ್ ಕುಮಾರ್ ಹೇಳಿಕೆಗಳವರೆಗೆ ಕಾಂಗ್ರೆಸ್ ಲೈಂಗಿಕ ರಣಹದ್ದುಗಳ ಪಕ್ಷವಾಗಿದೆ' ಎಂದಿದ್ದಾರೆ.