
ನವದೆಹಲಿ(ಜೂ.09): ಪಿಎನ್ಬಿ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ವಜ್ರೋದ್ಯಮಿ ಮೆಹುಲ್ ಚೋಕ್ಸಿ ತನ್ನ ಪ್ರಿಯತಮೆಗೂ ನಕಲಿ ವಜ್ರದ ಉಂಗುರಗಳು ಮತ್ತು ಬ್ರೇಸ್ಲೇಟ್ಗಳನ್ನು ನೀಡಿ ವಂಚಿಸಿದ್ದ ಎಂಬ ವಿಚಾರ ತಿಳಿದುಬಂದಿದೆ. ಈ ಕುರಿತು ಚೋಕ್ಸಿ ಅವರ ಪ್ರೇಯಸಿ ಎನ್ನಲಾದ ಬರ್ಬರಾ ಜರಾಬಿಕಾ ಅವರೇ ನೇರ ಆರೋಪ ಮಾಡಿದ್ದಾರೆ.
ಈ ಸಂಬಂಧ ಆಂಗ್ಲ ಮಾಧ್ಯಮವೊಂದಕ್ಕೆ ಮಂಗಳವಾರ ಸಂದರ್ಶನ ನೀಡಿದ ಜರಾಬಿಕಾ, ಕಳೆದ ವರ್ಷ ಆ್ಯಂಟಿಗುವಾಗೆ ತೆರಳಿದ್ದಾಗ ನನ್ನನ್ನು ಭೇಟಿ ಮಾಡಿದ್ದ ಚೋಕ್ಸಿ ತನ್ನನ್ನು ರಾಜ್ ಎಂದು ಪರಚಯಿಸಿಕೊಂಡಿದ್ದ. ಆ ಬಳಿಕ ನಾವು ಆತ್ಮೀಯ ಸ್ನೇಹಿತರಾಗಿದ್ದು, ನನಗೆ ಆತ ಹಲವು ವಜ್ರದ ಉಂಗುರಗಳು ಮತ್ತು ಬ್ರೇಸ್ಲೆಟ್ಗಳನ್ನು ಉಡುಗೊರೆಯಾಗಿ ನೀಡಿದ್ದ. ಆದರೆ ಅವೆಲ್ಲವೂ ನಕಲಿ ಎಂದು ತಡವಾಗಿ ತಿಳಿಯಿತು ಎಂದು ದೂರಿದ್ದಾರೆ. ಜೊತೆಗೆ ಆ್ಯಂಟಿಗುವಾದಿಂದ ಡೊಮಿನಿಕಾಗೆ ತನ್ನ ಅಪಹರಣ ಕೃತ್ಯದಲ್ಲಿ ತನ್ನ ಪ್ರೇಯಸಿಯೂ ಭಾಗಿಯಾಗಿದ್ದಳು ಎಂಬ ಚೋಕ್ಸಿ ಆರೋಪವನ್ನು ಜರಾಬಿಕಾ ನಿರಾಕರಿಸಿದರು.
ಚೋಕ್ಸಿ ಅಪಹರಣದಲ್ಲಿ ತನ್ನದು ಯಾವುದೇ ಪಾತ್ರ ಇಲ್ಲ. ಆದಾಗ್ಯೂ, ಚೋಕ್ಸಿಯ ವಕೀಲರು ಮತ್ತು ಕುಟುಂಬ ಸದಸ್ಯರು ನನ್ನ ಹೆಸರನ್ನು ಎಳೆದು ತಂದಿದ್ದಾರೆ. ನಾನು ಮತ್ತು ನನ್ನ ಕುಟುಂಬ ತುಂಬಾ ಒತ್ತಡದಲ್ಲಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ