
ಶ್ರೀನಗರ(ಜೂ.09): ಜಮ್ಮು-ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಸಣ್ಣ ಕುಗ್ರಾಮವೊಂದರಲ್ಲಿ ವಯಸ್ಕರಾದ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ 362 ಮಂದಿ ಇರುವ ವೆಯಾನ್ ಎಂಬ ಈ ಕುಗ್ರಾಮವು ಶೇ.100ರಷ್ಟು ಲಸಿಕೆ ಪಡೆದ ದೇಶದ ಮೊದಲ ಗ್ರಾಮ ಎಂಬ ಖ್ಯಾತಿಗೆ ಭಾಜನವಾಗಿದೆ.
ಬಂಡಿಪೊರಾ ಜಿಲ್ಲಾ ಕೇಂದ್ರದಿಂದ 28 ಕಿ.ಮೀ ದೂರದಲ್ಲಿರುವ ಈ ಗ್ರಾಮಸ್ಥರು ನಗರಕ್ಕೆ ತೆರಳಬೇಕಾದರೆ ವಾಹನಗಳ ಸೌಕರ್ಯವಿಲ್ಲದ ಕಾರಣ ಕನಿಷ್ಠ 18 ಕಿ.ಮೀ ನಡೆದೇ ಹೋಗಬೇಕು. ಜೊತೆಗೆ ಈ ಗ್ರಾಮದಲ್ಲಿ ನೆಲೆಸಿರುವವರೆಲ್ಲರೂ ಅಲೆಮಾರಿಗಳಾದ ಕಾರಣ ತಮಗೆ ಅಗತ್ಯವಿರುವ ವಸ್ತುಗಳನ್ನು ತರಲು ದೂರದ ಪ್ರದೇಶಗಳಿಗೆ ನಡೆದುಕೊಂಡೇ ಹೋಗಿರುತ್ತಿದ್ದರು. ಜೊತೆಗೆ ಗ್ರಾಮದಲ್ಲಿ ಇಂಟರ್ನೆಟ್ ಸೇವೆ ಇಲ್ಲದ ಕಾರಣ ಲಸಿಕೆಗೆ ಸ್ಲಾಟ್ ಬುಕ್ ಮಾಡುವುದು ಸಹ ದುಸ್ತರವಾಗಿತ್ತು.
ಈ ಹಿನ್ನೆಲೆಯಲ್ಲಿ ಈ ಗ್ರಾಮಸ್ಥರಿಗೆ ಲಸಿಕೆ ನೀಡುವುದು ಆರೋಗ್ಯ ಸಿಬ್ಬಂದಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಆದಾಗ್ಯೂ, ಆರೋಗ್ಯ ಸಿಬ್ಬಂದಿಯ ಪರಿಶ್ರಮದಿಂದಾಗಿ ಈ ಗ್ರಾಮ ಇದೀಗ ಶೇ.100 ಲಸಿಕೆ ಪಡೆದ ಗ್ರಾಮವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ