ಹೈದರಾಬಾದ್‌ನಲ್ಲಿ ತಲೆ ಎತ್ತಿದ 50 ಮಹಡಿಗಳ ಅವಳಿ ಗಗನಚುಂಬಿ ಕಟ್ಟಡ

Published : May 28, 2024, 08:04 AM ISTUpdated : May 28, 2024, 08:08 AM IST
ಹೈದರಾಬಾದ್‌ನಲ್ಲಿ ತಲೆ ಎತ್ತಿದ 50 ಮಹಡಿಗಳ ಅವಳಿ ಗಗನಚುಂಬಿ ಕಟ್ಟಡ

ಸಾರಾಂಶ

ದಕ್ಷಿಣ ಭಾರತದ ಪ್ರಮುಖ ರಿಯಲ್‌ ಎಸ್ಟೇಟ್‌ ಡೆವಲಪರ್‌ ‘ನವನಾಮಿ’ ಪ್ರಾಜೆಕ್ಟ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು ಮುತ್ತಿನ ನಗರಿ ಹೈದರಾಬಾದ್‌ನಲ್ಲಿ 150 ಐಷಾರಾಮಿ ನಿವಾಸಗಳನ್ನು ಒಳಗೊಂಡ 50 ಮಹಡಿಗಳ ಎತ್ತರದ ‘ಮೆಗಾಲಿಯೋ’ ಅವಳಿ ವಸತಿ ಸಮುಚ್ಚಯಗಳನ್ನು ಅನಾವರಣಗೊಳಿಸಿದೆ.

ಹೈದರಾಬಾದ್‌: ದಕ್ಷಿಣ ಭಾರತದ ಪ್ರಮುಖ ರಿಯಲ್‌ ಎಸ್ಟೇಟ್‌ ಡೆವಲಪರ್‌ ‘ನವನಾಮಿ’ ಪ್ರಾಜೆಕ್ಟ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು ಮುತ್ತಿನ ನಗರಿ ಹೈದರಾಬಾದ್‌ನಲ್ಲಿ 150 ಐಷಾರಾಮಿ ನಿವಾಸಗಳನ್ನು ಒಳಗೊಂಡ 50 ಮಹಡಿಗಳ ಎತ್ತರದ ‘ಮೆಗಾಲಿಯೋ’ ಅವಳಿ ವಸತಿ ಸಮುಚ್ಚಯಗಳನ್ನು ಅನಾವರಣಗೊಳಿಸಿದೆ.

ಒಟ್ಟು 4.1 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಮೆಗಾಲಿಯೋದ ಸುತ್ತಲಿನ 1200 ಎಕರೆ ಹಸಿರಿನಿಂದ ಸುತ್ತುವರಿದ ನೈಸರ್ಗಿಕ ಪ್ರದೇಶವಾಗಿದೆ. ಜೊತೆಗೆ ಸಂರಕ್ಷಿತ ಜಲಮೂಲಗಳಾದ ಹಿಮಾಯತ್ ಸಾಗರ್ ಮತ್ತು ಓಸ್ಮಾನ್ ಸಾಗರ್‌ನ ಸಮೀಪದಲ್ಲೇ ಗಗನಚುಂಬಿಯಂತೆ ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗಿದೆ. ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಮೆಗಾಲಿಯೋ ಗ್ರ್ಯಾಂಡ್‌ ಲಾಂಚ್‌’ ಕಾರ್ಯಕ್ರಮದ ಮೂಲಕ ನವನಾಮಿಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ನವೀನ್‌ ಗಡ್ಡೆ ತಮ್ಮ ಕನಸಿನ ಯೋಜನೆಯನ್ನು ಅನಾವರಣಗೊಳಿಸಿದರು.

ಮಥುರಾದಲ್ಲಿ 668 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ 70 ಅಂತಸ್ತಿನ ಗಗನಚುಂಬಿ ಶ್ರೀಕೃಷ್ಣ ದೇಗುಲ

ಇದಕ್ಕು ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಗಾಲಿಯೋ ಸುಮಾರು 800 ರಿಂದ 900 ಕೋಟಿ ರು. ವೆಚ್ಚದ ಯೋಜನೆಯಾಗಿದೆ. ಒಟ್ಟು150 ವಸತಿಗಳನ್ನು ಶ್ರೀಮಂತಿಕೆ ಮತ್ತು ಅತ್ಯಾಧುನಿಕತೆಯ ಆಧಾರದಲ್ಲಿ ಮೂರು ಘಟಕಗಳಾಗಿ ವಿಂಗಡಿಸಲಾಗಿದೆ. ಸ್ಕೈಲೈನ್ ಟವರ್‌ನ ಫ್ಲಾಟ್‌ಗಳು 11,111 ಚದರ ಅಡಿ ಮತ್ತು ಯುನಿಟಿ ಟವರ್‌ನ ನಿವಾಸಗಳು 9999 ಚದರ ಅಡಿ ಮತ್ತು 8888 ಚದರ ಅಡಿ ವಿಸ್ತೀರ್ಣದಿಂದ ಕೂಡಿವೆ. ಈ ಪ್ರತಿ ಫ್ಲಾಟ್‌ನ ಬೆಲೆ 8 ಕೋಟಿ ರು. ನಿಂದ ಆರಂಭವಾಗುತ್ತದೆ ಎಂದು ನವೀನ್‌ ಗಡ್ಡೆ ತಿಳಿಸಿದರು.

ಡಿಸೈನ್‌ ಹೌಸ್‌ನ ಪ್ರಧಾನ ವಾಸ್ತುಶಿಲ್ಪಿ ರಾಜೀವ್‌ ಕುಮಾರ್‌ ಶರ್ಮಾ, ನವನಾಮಿ ನಿರ್ದೇಶಕ ಕೃಷ್ಣ ಕಾಂತ್‌ ಕೋಟಗಿರಿ ಉಪಸ್ಥಿತರಿದ್ದರು.

ಪ್ರಬಲ ಭೂಕಂಪನಕ್ಕೂ ಬಗ್ಗದೇ ಸಧೃಡವಾಗಿ ನಿಂತ ತೈವಾನ್‌ನ ಗಗನಚುಂಬಿ ಕಟ್ಟಡ: ಇದರ ಹಿಂದಿದೆ ಅದ್ಭುತ ತಂತ್ರಜ್ಞಾನ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ