ಮಾರ್ಕೆಟ್‌ನಲ್ಲಿ 30  ರೂ ಕೆಜಿ.. ರೈತರಿಂದ 10 ಪೈಸೆಗೆ ಖರೀದಿ!

Published : Jan 04, 2021, 07:56 PM ISTUpdated : Jan 04, 2021, 08:02 PM IST
ಮಾರ್ಕೆಟ್‌ನಲ್ಲಿ 30  ರೂ ಕೆಜಿ.. ರೈತರಿಂದ 10 ಪೈಸೆಗೆ ಖರೀದಿ!

ಸಾರಾಂಶ

ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೋ ದರ ಎಷ್ಟಿದೆ? ಆಂಧ್ರದ ರೈತರಿಗೆ ಸಿಗುತ್ತಿರುವುದು ಹತ್ತು ಪೈಸೆ/ ಟೊಮೆಟೊ ಬೆಳೆದ ರೈತ ಕಂಗಾಲು/ ಸಂಕಷ್ಟದಿಂದ ರೈತರನ್ನು ಹೊರಗೆ ತರುವವರು ಯಾರು?

ಹೈದರಾಬಾದ್(ಜ. 04) ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಟೊಮೆಟೊಗಳ ಸರಾಸರಿ ಮಾರಾಟ ಬೆಲೆ 20-30 ರೂ. ಇದೆ. ಆದರೆ ರೈತರಿಗೆ ಸಿಗುತ್ತಿರುವ ದರ!

ಒಂದೆಡೆ ಕೇಂದ್ರದ ಎಪಿಎಂಸಿ ಬಿಲ್ ತಿದ್ದುಪಡಿ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ರೈತರಿಗೆ ಸ್ಪರ್ಧಾತ್ಮಕ ದರ ದೊರೆಯಬೇಕು ಎಂದು ಭಾಷಣಗಳು ಬರುತ್ತಿವೆ. ಆಂಧ್ರಪ್ರದೇಶದ ಕರ್ನೂಲ್‌ನಲ್ಲಿರುವ ಟೊಮೆಟೊ ಬೆಳೆದ ರೈತರ ಪಾಡು ಮಾತ್ರ ಯಾರಿಗೂ ಬೇಡ.

ಐಐಟಿಯಿಂದ ಹೊಲದವರೆಗೆ .. ಕೃಷಿ ಕಾಯಿದೆ ಲಾಭ ಒಂದೊಂದಾಗಿ ತೆರೆದಿಟ್ಟ ಸೂರ್ಯ

ಪಾತಿಕೊಂಡ ಕೃಷಿ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾರುಕಟ್ಟೆಯಲ್ಲಿ ರೈತರಿಂದ  ಟೊಮೆಟೊವನ್ನು ಪ್ರತಿ ಕೆ.ಜಿ.ಗೆ 10 ಪೈಸೆ ದರದಲ್ಲಿ ಖರೀದಿ ಮಾಡಲಾಗಿದೆ!  ಟೊಮೆಟೊ ಬೆಳೆದ  ರೈತರಿಗೆ ಆದ ನಷ್ಟವನ್ನು ಸರಿದೂಗಿಸುವವರು ಯಾರು ಎಂದು ರೈತ ಮುಖಂಡರು ಪ್ರಶ್ನೆ ಮಾಡಿದ್ದಾರೆ.

ಟೊಮೆಟೊದ ಬೆಲೆ 30 ಪೈಸೆಗಿಂತ ಕಡಿಮೆಯಾದ ನಂತರ ರಾಯಲಸೀಮಾದ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ (APMC) ಮಾರುಕಟ್ಟೆಯ ಆಡಳಿತದ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದರು. ಈಗ ದರ ಮತ್ತಷ್ಟು ಕುಸಿದಿದ್ದು ಚರ್ಚೆ ಮಾಡಲೇಬೇಕಾದ ಸಂಗತಿಯಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ
ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!