ಎಲ್ಲಾ ರೀತಿ ಕ್ಯಾನ್ಸರ್‌ಗೆ ದಿವ್ಯೌಷಧ ರೆಡಿ !

Kannadaprabha News   | Kannada Prabha
Published : Aug 22, 2025, 04:30 AM IST
Cancer Vaccine

ಸಾರಾಂಶ

ಮಾರಣಾಂತಿಕ ಕಾಯಿಲೆಗಳಲ್ಲಿ ಒಂದಾಗಿರುವ ಕ್ಯಾನ್ಸರ್‌ ಅನ್ನು ಗುಣಪಡಿಸಲು ವೈದ್ಯಲೋಕ ಹರಸಾಹಸ ಪಡುತ್ತಿರುವ ನಡುವೆಯೇ, ಫ್ಲೋರಿಡಾ ವಿಶ್ವವಿದ್ಯಾಲಯವು ಮಹತ್ವದ ಸಂಶೋಧನೆಯನ್ನು ನಡೆಸಿದೆ. ಇದು ಭವಿಷ್ಯದಲ್ಲಿ ಎಲ್ಲಾ ರೀತಿಯ ಕ್ಯಾನ್ಸರ್‌ಗೂ ದಿವ್ಯೌಷಧ ಆಗಬಹುದು ಎಂಬ ಭಾರೀ ನಿರೀಕ್ಷೆಯೊಂದನ್ನು ಹುಟ್ಟುಹಾಕಿದೆ.

ನವದೆಹಲಿ : ಮಾರಣಾಂತಿಕ ಕಾಯಿಲೆಗಳಲ್ಲಿ ಒಂದಾಗಿರುವ ಕ್ಯಾನ್ಸರ್‌ ಅನ್ನು ಗುಣಪಡಿಸಲು ವೈದ್ಯಲೋಕ ಹರಸಾಹಸ ಪಡುತ್ತಿರುವ ನಡುವೆಯೇ, ಫ್ಲೋರಿಡಾ ವಿಶ್ವವಿದ್ಯಾಲಯವು ಮಹತ್ವದ ಸಂಶೋಧನೆಯನ್ನು ನಡೆಸಿದೆ. ಇದು ಭವಿಷ್ಯದಲ್ಲಿ ಎಲ್ಲಾ ರೀತಿಯ ಕ್ಯಾನ್ಸರ್‌ಗೂ ದಿವ್ಯೌಷಧ ಆಗಬಹುದು ಎಂಬ ಭಾರೀ ನಿರೀಕ್ಷೆಯೊಂದನ್ನು ಹುಟ್ಟುಹಾಕಿದೆ.

ಇದುವರೆಗೂ ಎಲ್ಲಾ ರೀತಿಯ ಸಂಶೋಧನೆಗಳು ಕ್ಯಾನ್ಸರ್‌ ಗಡ್ಡೆಯನ್ನು ನಾಶ ಮಾಡುವ ಉದ್ದೇಶದೊಂದಿಗೆ ನಡೆಸಲಾಗುತ್ತಿತ್ತು. ಆದರೆ ಫ್ಲೋರಿಡಾ ವಿವಿಯ ವಿಜ್ಞಾನಿಗಳ ತಂಡ ನೇರವಾಗಿ ಟ್ಯೂಮರ್‌ ನಿಯಂತ್ರಣದ ಬದಲಾಗಿ ಟ್ಯೂಮರ್‌ ವಿರುದ್ಧ ದೇಶದಲ್ಲಿ ಪ್ರತಿಕಾಯ ಶಕ್ತಿಯನ್ನು ಪ್ರಚೋದಿಸುವ ಮತ್ತು ಟ್ಯೂಮರ್‌ ಚಿಕಿತ್ಸೆಗೆ ಸ್ಪಂದಿಸುವ ರೀತಿಯಲ್ಲಿ ಉತ್ತೇಜಿಸುವ ಆಧಾರದಲ್ಲಿ ಸಂಶೋಧನೆ ನಡೆಸಿದೆ.

ಕೋವಿಡ್‌ ಲಸಿಕೆಯಲ್ಲಿ ಬಳಸಲಾದ ಎಂಆರ್‌ಎನ್‌ಎ ಪದ್ಧತಿ ಆಧರಿಸಿ ಲಸಿಕೆಯನ್ನು ಕ್ಯಾನ್ಸರ್‌ ಪೀಡಿತ ಇಲಿಗಳ ಮೇಲೆ ಪ್ರಯೋಗಿಸಲಾಗಿದ್ದು, ಈ ವೇಳೆ ಅದು ಕ್ಯಾನ್ಸರ್‌ ಟ್ಯೂಮರ್‌ ವಿರುದ್ಧ ದೇಹದ ಪ್ರತಿಕಾಯಗಳು ಹೋರಾಡಲು ಪ್ರಚೋದಿಸಿದ್ದು ಕಂಡುಬಂದಿದೆ. ಜೊತೆಗೆ ಲಸಿಕೆ ನೀಡಿದ ಬಳಿಕ ಟ್ಯೂಮರ್‌ ಪೂರ್ಣ ಗುಣವಾಗಿದ್ದು ಕಂಡುಬಂದಿದೆ. ಇದನ್ನು ಎಲ್ಲಾ ರೀತಿಯ ಕ್ಯಾನ್ಸರ್‌ಗಳಿಗೂ ಬಳಸಬಹುದಾಗಿದೆ ಎಂದು ಸಂಶೋಧಕರ ತಂಡ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗೋವಾ ದುರಂತದಿಂದ ಎಚ್ಚೆತ್ತ ಪೊಲೀಸ್, ಹೊಸವರ್ಷಕ್ಕೆ ಕ್ಲಬ್, ಬಾರ್, ಪಬ್‌ಗಳಲ್ಲಿ ಪಟಾಕಿ ಆಚರಣೆ ಬ್ಯಾನ್
ಪ್ರಾಣಿ ಪ್ರಿಯರಿಗೆ ಗುಡ್ ನ್ಯೂಸ್, ವಿಮಾನದಲ್ಲಿ ಮಾಲೀಕನ ಜೊತೆ 10ಕೆಜಿ ತೂಕದ ಪೆಟ್ಸ್ ಪ್ರಯಾಣಕ್ಕೆ ಅನುಮತಿ