
ನವದೆಹಲಿ (ಸೆ.09) ನೇಪಾಳದ ಪರಿಸ್ಥಿತಿ ಗಂಭೀರವಾಗಿದೆ. ಪ್ರತಿಭಟನಕಾರರ ಆಕ್ರೋಶ, ಹಿಂಸಾಚಾರಕ್ಕೆ ಪ್ರಧಾನಿ ಕೆಪಿ ಒಲಿ ಶರ್ಮಾ ನಿರ್ಧಾರ ವಾಪಾಸ್ ಪಡೆದಿದ್ದು ಮಾತ್ರವಲ್ಲ, ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತ ಗೃಹ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಕೆಪಿ ಒಲಿ ಶರ್ಮಾ ನೇಪಾಳದಿಂದ ಪಲಾಯನ ಮಾಡುವ ಸಾಧ್ಯತೆಗಳು ಕೇಳಿಬರುತ್ತಿದೆ. ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸಾವು ನೋವಿನ ಸಂಖ್ಯೆಯೂ ಹಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಭಾರತ ಅಲರ್ಟ್ ಆಗಿದೆ. ಇಷ್ಟೇ ಅಲ್ಲ ಭಾರತೀಯರಿಗೆ ದೇಶಾಂಗ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.
ನೇಪಾಳ ಪ್ರಯಾಣ, ಪ್ರವಾಸ ಮುಂದೂಡಲು ಕೇಂದ್ರ ವಿದೇಶಾಂಗ ಇಲಾಖೆ ಸೂಚಿಸಿದೆ. ನೇಪಾಳದಲ್ಲಿರುವ ಭಾರತೀಯ ರಾಯಭಾರ ಅಧಿಕಾರಿಗಳ ಸಲಹೆ ಪರಿಗಣಿಸಿ ಇದೀಗ ಭಾರತ ಮಹತ್ವದ ಮಾರ್ಗಸೂಚಿ ಪ್ರಕಟಿಸಿದೆ. ಇನ್ನು ನೇಪಾಳದಲ್ಲಿರುವ ಭಾರತೀಯರಿಗೂ ಮಹತ್ವದ ಸೂಚನೆ ನೀಡಲಾಗಿದೆ. ಯಾವುದೇ ಸಂದರ್ಭದಲ್ಲೂ ನೆರವಿನ ಅಗತ್ಯವಿದ್ದರೆ, ಸಹಾಯವಾಣಿಗೆ ಕರೆ ಮಾಡಲು ಸೂಚಿಸಲಾಗಿದೆ.
+977–980 860 2881
+977–981 032 6134
ನೇಪಾಳದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಪ್ರತಿಭಟನೆಯಲ್ಲಿ ಹಲವು ಸಾವು ನೋವುಗಳಾಗಿದೆ. ಘಟನೆ ತೀವ್ರ ನೋವುಂಟು ಮಾಡಿದೆ. ಪ್ರತಿಭಟನೆ ಹಾಗೂ ಹಿಂಸಾಚಾರದಲ್ಲಿ ಮಡಿದ ಕಟುಂಬಕ್ಕೆ ಭಗವಂತ ನೋವು ಭರಿಸವು ಶಕ್ತಿ ನೀಡಲಿ. ಗಾಯಾಳುಗಳು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ವಿದೇಶಾಂಗ ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ. ಇದೇ ವೇಳೆ ಭಾರತೀಯರಿಗೆ ಮಾರ್ಗಸೂಚಿ ಪ್ರಕಟಿಸಿದೆ.
ನೇಪಾಳದಲ್ಲಿ ತುರ್ತು ಪರಿಸ್ಥಿತಿ, ಪ್ರಧಾನಿ ಮನೆಗೆ ಬೆಂಕಿ, ಬಾಂಗ್ಲಾ ಬಳಿಕ ಮತ್ತೊಂದು ನೆರೆ ರಾಷ್ಟ್ರದ ದುಸ್ಥಿತಿ
ನೇಪಾಳದಲ್ಲಿರುವ ಭಾರತೀಯರು, ನೇಪಾಳಕ್ಕೆ ಪ್ರಯಾಣಿಸುವ ಭಾರತೀಯರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದೆ. ಸದ್ಯಕ್ಕೆ ನೇಪಾಳ ಪ್ರವಾಸ ರದ್ದುಗೊಳಿಸುವಂತೆ ಸೂಚಿಸಿದೆ. ನೇಪಾಳದಲ್ಲಿ ಭಾರತೀಯರಿ ನೆರವಿನ ಅಗತ್ಯವಿದ್ದರೆ ಕಾಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಲು ಸೂಚಿಸಿದೆ. ಪರಿಸ್ಥಿತಿ ತಿಳಿಗೊಳ್ಳುವ ವರೆಗೆ ನೇಪಾಳ ಭೇಟಿ ಮುಂದೂಡುವಂತೆ ಸೂಚಿಸಲಾಗಿದೆ.
ನೇಪಾಳ ಪ್ರಧಾನಿ ಕೆಪಿ ಒಲಿ ಶರ್ಮಾ ರಾಜೀನಾಮೆ ನೀಡಿದ್ದಾರೆ. ನೇಪಾಳ ಸರ್ಕಾರ ಪತನದತ್ತ ಸಾಗುತ್ತಿದೆ. ಗೃಹ ಸಚಿವರು ರಾಜೀನಾಮೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾ ಬ್ಯಾನ್ ಆದೇಶವನ್ನೂ ಹಿಂಪಡೆಯಲಾಗಿದೆ. ಆದರೆ ಪ್ರತಿಭಟನೆ ಮಾತ್ರ ನಿಂತಿಲ್ಲ. ಕ್ಷಣಕ್ಷಣಕ್ಕೂ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ನೇಪಾಳದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ