ಇದೇ ರೀತಿಯ ದಾಳಿ ಯೋಜನೆ ತಿರಸ್ಕರಿಸಿದ್ದರು ಮನಮೋಹನ್‌ ಸಿಂಗ್‌!

Published : Feb 27, 2019, 08:04 AM IST
ಇದೇ ರೀತಿಯ ದಾಳಿ ಯೋಜನೆ ತಿರಸ್ಕರಿಸಿದ್ದರು ಮನಮೋಹನ್‌ ಸಿಂಗ್‌!

ಸಾರಾಂಶ

2008ರಲ್ಲಿ ಮುಂಬೈ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನದ ಮೇಲೆ ಯುದ್ಧ ವಿಮಾನಗಳನ್ನು ಬಳಸಿ ಬಾಂಬ್‌ ದಾಳಿ ನಡೆಸಲು ಭಾರತೀಯ ವಾಯುಪಡೆ ಯೋಜನೆ ರೂಪಿಸಿತ್ತು. ಆದರೆ ಅಂದಿನ ಯುಪಿಎ ಸರ್ಕಾರ ಮಾತ್ರ ಇದಕ್ಕೆ ಅವಕಾಶ ನಿರಾಕರಿಸಿತ್ತು. 

ನವದೆಹಲಿ: 26/11 ಎಂದೇ ಕರೆಯಲಾಗುವ, 2008ರಲ್ಲಿ ಮುಂಬೈ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನದ ಮೇಲೆ ಯುದ್ಧ ವಿಮಾನಗಳನ್ನು ಬಳಸಿ ಬಾಂಬ್‌ ದಾಳಿ ನಡೆಸಲು ಭಾರತೀಯ ವಾಯುಪಡೆ ವಿಸ್ತೃತ ಯೋಜನೆಯೊಂದನ್ನು ನೀಡಿತ್ತು. 

ಆದರೆ ಮನಮೋಹನ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಅದನ್ನು ತಳ್ಳಿ ಹಾಕಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ, ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರಗಾಮಿ ಶಿಬಿರಗಳ ಮೇಲೆ ನಡೆಸಲಾದ ದಾಳಿ ದೇಶವಾಸಿಗಳ ಮೆಚ್ಚುಗೆಗೆ ಕಾರಣವಾಗಿದೆ. 

ಪೆಟ್ಟು ತಿಂದರೂ ಬುದ್ಧಿ ಕಲಿಯದ ಹೇಡಿ ಪಾಕ್, ಭಾರತೀಯ ಸೇನಾ ನೆಲೆಗಳ ಮೇಲೆ ಗುಂಡಿನ ದಾಳಿ

ಆದರೆ 160ಕ್ಕೂ ಹೆಚ್ಚು ಯೋಧರನ್ನು ಬಲಿ ಪಡೆದ ಮುಂಬೈ ದಾಳಿ ಸಂದರ್ಭದಲ್ಲಿ ಇಂತಹ ದಾಳಿಗೆ ಯುಪಿಎ ಸರ್ಕಾರ ಮನಸ್ಸು ಮಾಡಿರಲಿಲ್ಲ ಎಂದು ರಕ್ಷಣಾ ತಜ್ಞ ನಿಖಿಲ್‌ ಗೋಖಲೆ ಅವರು ‘ಸುವರ್ಣ ನ್ಯೂಸ್‌.ಕಾಂ’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!