IAF ದಾಳಿ : ಭಾರತದ ಮುಂದಿನ ನಡೆ ಏನು?

Published : Feb 27, 2019, 07:39 AM IST
IAF ದಾಳಿ :  ಭಾರತದ ಮುಂದಿನ ನಡೆ ಏನು?

ಸಾರಾಂಶ

ಭಾರತದ ವಾಯುಪಡೆ ಉಗ್ರ ಶಿಬಿರಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದೆ. ಭಾರತ ಈ ದಾಳಿಯ ಬಳಿಕ ಮುಂದೇನು ಮಾಡಬಹುದು ಎನ್ನುವ ಕೆಲವು ವಿಚಾರಗಳು ಈ ಕೆಳಗಿನಂತೆ

1. ಮತ್ತಷ್ಟುಪ್ರತೀಕಾರ: ಈಗ ನಡೆದಿರುವುದು ಸ್ಯಾಂಪಲ್‌ ಮಾತ್ರ. ಜೈಷ್‌ ಮುಖ್ಯಸ್ಥ ಸೇರಿದಂತೆ ಉಗ್ರ ಸಂಘಟನೆ ಪಾಕ್‌ನಲ್ಲಿನ್ನೂ ಸಕ್ರಿಯವಾಗಿದೆ. ಭಾರತ ಮತ್ತಷ್ಟುದಾಳಿ ನಡೆಸಬಹುದು

2. ಪ್ರತಿದಾಳಿಗೆ ಸಿದ್ಧತೆ: ಭಾರತ ನಡೆಸಿದ ವಾಯು ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ನಡೆಸಬಹುದಾದ ಸಂಭಾವ್ಯ ಪ್ರತಿದಾಳಿಯನ್ನು ನಿಷ್ಫಲಗೊಳಿಸಲು ಸಕಲ ರೀತಿಯ ಸಿದ್ಧತೆ ಮುಂದುವರಿಸಬಹುದು

3. ಯುದ್ಧಕ್ಕೂ ರೆಡಿ: ಪಾಕಿಸ್ತಾನವೇನಾದರೂ ಭಾರತದೊಳಕ್ಕೆ ನುಸುಳಿ ಹೊಡೆಯುವ ದುಸ್ಸಾಹಸ ತೋರಿದ್ದೇ ಆದಲ್ಲಿ ಪೂರ್ಣಪ್ರಮಾಣದ ಯುದ್ಧ ಎದುರಿಸಲು ಅಗತ್ಯ ಕ್ರಮ ಕೈಗೊಳ್ಳಬಹುದು

4. ಉಗ್ರ ದಮನ: ಪಾಕಿಸ್ತಾನ ಉಗ್ರರ ಮೂಲಕ ಭಾರತದಲ್ಲಿ ಹಿಂಬಾಲಿನ ಪ್ರತೀಕಾರಕ್ಕೆ ಮುಂದಾಗಬಹುದು. ಅದಕ್ಕಾಗಿ ಎಲ್ಲೆಡೆ ಕಟ್ಟೆಚ್ಚರ. ಉಗ್ರರ ಪ್ರಯತ್ನವನ್ನು ವಿಫಲಗೊಳಿಸಲು ಅಗತ್ಯ ಕ್ರಮ

5. ರಾಜತಾಂತ್ರಿಕ: ತನ್ನ ಮೇಲೆ ಉಗ್ರ ದಾಳಿ ತಪ್ಪಿಸಲು ತಾನು ಉಗ್ರರ ಮೇಲೆ ದಾಳಿ ನಡೆಸಿದ್ದು, ಪಾಕ್‌ ಮೇಲಲ್ಲ ಎಂದು ರಾಜತಾಂತ್ರಿಕವಾಗಿ ಪ್ರತಿಪಾದಿಸಿ ವಿಶ್ವ ಸಮುದಾಯದ ಬೆಂಬಲ ಗಳಿಸಬಹುದು

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!