Manipur Elections: ಮಣಿಪುರದಲ್ಲಿ ಮತ್ತೆ ಮೋದಿ ಮೋದಿಯೋ? ಅಧಿಕಾರ ಹಸ್ತಾಂತರವೋ?

Published : Feb 22, 2022, 09:26 AM IST
Manipur Elections: ಮಣಿಪುರದಲ್ಲಿ ಮತ್ತೆ ಮೋದಿ ಮೋದಿಯೋ? ಅಧಿಕಾರ ಹಸ್ತಾಂತರವೋ?

ಸಾರಾಂಶ

* ಮಣಿಪುರ ವಿಧಾನಸಭಾ ಚುನಾವಣೆಗೆ ಅಖಾಡ ಸಿದ್ಧ * ಮತದಾರನ ಓಲೈಕೆಗೆ ಬಿಜೆಪಿ ಸಿದ್ಧತೆ, ಮೋದಿ ಭೇಟಿ * ಮಣಿಪುರದಲ್ಲಿ ಮತ್ತೆ ಮೋದಿ ಮೋದಿಯೋ? ಅಧಿಕಾರ ಹಸ್ತಾಂತರವೋ?  

ಇಂಫಾಲ(ಫೆ.22): ದೇಶದ '7 ಮಂದಿ ಸಹೋದರಿ'ಯರಲ್ಲಿ ಒಂದಾದ ಮಣಿಪುರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಭಾರೀ ಒತ್ತು ನೀಡಿವೆ. ಮೊದಲ ಹಂತದ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಬಿಜೆಪಿ-ಕಾಂಗ್ರೆಸ್ ತಮ್ಮ ಹಿರಿಯ ನಾಯಕರನ್ನು ಕಣಕ್ಕಿಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮಣಿಪುರಕ್ಕೆ ಚುನಾವಣಾ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿಯವರು ಹೀಂಗಾಂಗ್ ನಲ್ಲಿ ಬಿಜೆಪಿಯ ಚುನಾವಣಾ ಸಮಾವೇಶ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಈ ಸಾರ್ವಜನಿಕ ಸಭೆ ನಡೆಯಲಿದೆ.

ಬಿಜೆಪಿಗೆ ಎಷ್ಟು ವಿಶೇಷ ಈ ಚುನಾವಣೆ?

2017ರಲ್ಲಿ ರಾಜ್ಯದಲ್ಲಿ ಯಾವುದೇ ಪ್ರಭಾವ ಬೀರದೇ ಬಿಜೆಪಿ ಸರ್ಕಾರ ರಚನೆ ಮಾಡಿ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. 2012ರ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಾಗದ ಭಾರತೀಯ ಜನತಾ ಪಕ್ಷ ಈ ಬಾರಿಯ ಚುನಾವಣೆಯಲ್ಲಿ 21 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜಕೀಯ ದಾಳವನ್ನು ತಿರುಗಿಸಿತ್ತು. ಅದರ ನಂತರ ಬಿಜೆಪಿ ಇಲ್ಲಿ ಸರ್ಕಾರವನ್ನು ರಚಿಸಿದ್ದು ಮಾತ್ರವಲ್ಲದೆ ಪಕ್ಷದ ದೃಷ್ಟಿಕೋನ ಮತ್ತು ಅಭಿವೃದ್ಧಿಯನ್ನು ಇಲ್ಲಿ ಸ್ಥಾಪಿಸಲು ಶ್ರಮಿಸಿತು. ಇದಾದ ನಂತರ ಈ ಬಾರಿಯ ಚುನಾವಣೆ ಪಕ್ಷಕ್ಕೆ ವಿಶೇಷವಾಗಿದೆ. ಪ್ರಧಾನಿ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಿರಿಯ ನಾಯಕರು ಇಲ್ಲಿ ಪ್ರಚಾರದಲ್ಲಿ ನಿರತರಾಗಲು ಇದೇ ಕಾರಣ.

ಈ ಬಾರಿ ಚೆಂಡು ಬಿಜೆಪಿ ಅಂಗಳದಲ್ಲಿ

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದೆ. ಪಕ್ಷವು ಎಲ್ಲಾ 60 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸೇರಿದಂತೆ ಐದು ಸಣ್ಣ ಪಕ್ಷಗಳೊಂದಿಗೆ ರಾಜ್ಯದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಕಣದಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಮುಖವಿಲ್ಲ, ಹೀಗಾಗಿ ಈ ಬಾರಿ ಬಿಜೆಪಿ-ಕಾಂಗ್ರೆಸ್ ಮತ್ತು ಸ್ವತಂತ್ರ ಅಭ್ಯರ್ಥಿಗಳ ನಡುವೆ ಹಣಾಹಣಿ ಏರ್ಪಡಬಹುದು.

ಮಣಿಪುರದಲ್ಲಿ ಬಿಜೆಪಿಯ ದೃಷ್ಟಿಕೋನ

ಈ ಬಾರಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಎಲ್ಲಾ ವರ್ಗಗಳತ್ತ ಗಮನ ಹರಿಸಿದೆ. ಇದರಲ್ಲಿ ಮೂಲಸೌಕರ್ಯ, ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ರಾಜ್ಯದಲ್ಲಿ ಸರಕಾರ ರಚನೆಯಾದರೆ ಹಿರಿಯ ನಾಗರಿಕರ ಮಾಸಿಕ ಪಿಂಚಣಿಯನ್ನು 200 ರೂ.ನಿಂದ 1000 ರೂ.ಗೆ ಹೆಚ್ಚಿಸಲಾಗುವುದು ಎಂದು ಪಕ್ಷ ಭರವಸೆ ನೀಡಿದೆ. ಇದರೊಂದಿಗೆ ಬಡ ಮಹಿಳೆಯರಿಗೆ ಉಚಿತ ಸಿಲಿಂಡರ್, ವಿದ್ಯಾರ್ಥಿನಿಯರಿಗೆ ಸ್ಕೂಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಪ್ರಧಾನಿಯವರ ಸಾರ್ವಜನಿಕ ಸಭೆಯ ನಂತರ ಇಲ್ಲಿನ ರಾಜಕೀಯ ವಾತಾವರಣ ಬಿಜೆಪಿ ಪರ ಗಟ್ಟಿಯಾಗಲಿದೆ ಎನ್ನಲಾಗುತ್ತಿದೆ.

ಎರಡು ಹಂತದ ಚುನಾವಣೆ

ಮಣಿಪುರದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಇನ್ನು ಮೊದಲ ಹಂತದ ಮತದಾನ ಫೆಬ್ರವರಿ 28 ರಂದು ನಡೆಯಲಿದೆ. ಈ ಮೊದಲು ಇಲ್ಲಿ ಮೊದಲ ಹಂತದ ಮತದಾನ ಫೆಬ್ರವರಿ 27 ರಂದು ನಡೆಯಬೇಕಿತ್ತು. ಇದಲ್ಲದೆ, ಮಣಿಪುರದಲ್ಲಿ ಎರಡನೇ ಹಂತದ ಮತದಾನದ ದಿನಾಂಕವನ್ನು ಮಾರ್ಚ್ 3 ರಿಂದ ಮಾರ್ಚ್ 5 ಕ್ಕೆ ಬದಲಾಯಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !