ಕೊರೋನಾ ತತ್ತರ ನಡುವೆ ಮುಂಬೈಗೆ ಮತ್ತೊಂದು ಬ್ಯಾಡ್ ನ್ಯೂಸ್, ಅಲರ್ಟ್ ಜಾರಿ!

By Suvarna NewsFirst Published Aug 1, 2020, 11:11 PM IST
Highlights

ಕೊರೋನಾತಂಕ ನಡುವೆ ಮುಂಬೈಗೆ ಬ್ಯಾಡ್‌ ನ್ಯೂಸ್| ಏರುತ್ತಿರುವ ಸೋಂಕಿನ ನಡುವೆ ಆತಂಕ ಹುಟ್ಟು ಹಾಕಿದೆ ಹವಾಮಾನ ಇಲಾಖೆ ವರದಿ| ಇನ್ನು ನಾಲ್ಕು ದಿನ ಭಾರೀ ಮಳೆ

ಮುಂಬೈ(ಆ.01): ಭಾರತೀಯ ಹವಾಮಾನ ವಿಜ್ಞಾನ ವಿಭಾಗ ಮಹಾರಾಷ್ಟ್ರ ರಾಜಧಾನಿ ಮುಂಬೈ ಹಾಗೂ ರಾಜ್ಯದ ಇನ್ನಿತರ ಪ್ರದೇಶಗಳಲ್ಲಿ ಆಗಸ್ಟ್ 3 ರಿಂದ 5ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. 

ಈ ಸಮಯದಲ್ಲಿ ಮುಂಬೈ ಹೊರತುಪಡಿಸಿ ರಾಯ್ಘಡ, ರತ್ನಗಿರಿ, ಸಿಂಧುದುರ್ಗಾ, ಪುಣೆ, ಕೊಲ್ಹಾಪುರ, ಸಾಂಗ್ಲೀ, ಬೀಡ್, ಲಾತೂರ್ ಹಾಗೂ ಉಸ್ಮನಾಬಾದ್ ಜಿಲ್ಲೆಗಳಲ್ಲೂ ಭಾರೀ ಮಳೆಯಾಗುತ್ತದೆ ಎನ್ನಲಾಗಿದೆ.

ನಾಪತ್ತೆಯಾಗಿದ್ದ ರಿಯಾ ಪ್ರತ್ಯಕ್ಷ, ವಿಡಿಯೋ ಮೆಸೇಜ್‌ನಲ್ಲಿ ಶಾಕಿಂಗ್ ಮಾಹಿತಿ!

ಐಎಂಡಿ ಮುನ್ಸೂಚನೆಯನ್ವಯ ನಾಂದೆಡ್, ಹಿಂಗೋಲಿ, ಪರ್ಭಣೀ, ಜಲ್ನಾ, ಸಾಂಗ್ಲೀ ಹಾಗೂ ಔರಂಗಾಬಾದ್‌ನಲ್ಲಿ ಆಗಸ್ಟ್ 5ರವರೆಗೂ ಮಳೆಯಾಗಲಿದೆ.

पुढच्या 4,5 दिवसात मुंबई, ठाणे, नवी मुंबई, कोकणात मुसळधार ते अतीमुसळधार पावसाची शक्यता. सोमवार पासून जोरदार. घाट भागात पण अतीमुसळधारची शक्यता.
IMD
Possibility of Very hvy to Extremely hvy rains over Konkan including Mumbai, Thane, NM frm 2-5 Aug
Ghat areas too.
IMD pic.twitter.com/XuDN8JyINQ

— K S Hosalikar (@Hosalikar_KS)

ಐಎಂಡಿ ಮುನ್ಸೂಚನೆಯಂತೆ ಹೆಚ್ಚು ಹಗೂ ಅತಿ ಹೆಚ್ಚು ಮಳೆ ಎಂದರೆ 24 ಗಂಟೆ ಅವಧಿಯಲ್ಲಿ 64.5 ಮಿ. ಮೀಟರ್‌ನಿಂದ  204.4 ಮಿ. ಮೀಟರ್‌ವರೆಗೆ ಮಳೆಯಾಗಬಹುದು.

ಈಗಾಗಲೇ ಕೊರೋನಾದಿಂದ ನಲುಗಿರುವ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಿರುವಾಗ ಭಾರೀ ಮಳೆಯ ಮುನ್ಸೂಚನೆ ಮತ್ತೊಂದು ತಲೆನೋವಾಗಿ ಮಾರ್ಪಾಡಾಗುವುದರಲ್ಲಿ ಅನುಮಾನವಿಲ್ಲ.

click me!