
ನವದೆಹಲಿ (ನ.16) ಭಾರತದಲ್ಲಿ ವರ್ಕಿಂಗ್ ಕಲ್ಚರ್ ಕುರಿತು ಹಲವು ಟೀಕೆ, ವಿವಾದಗಳಿವೆ. ಉದ್ಯೋಗಿಗಳಿಗೆ ರಜೆ ನೀಡುವಲ್ಲಿ ಸತಾಯಿಸುತ್ತಾರೆ, ಟಾರ್ಗೆಟ್ ಕಾರಣ ನೀಡಿ ರಜೆ ನಿರಾಕರಿಸುವುದು ಸೇರಿದಂತೆ ಹಲವು ಘಟನೆಗಳು ಭಾರಿ ಚರ್ಚೆಗೆ ಗ್ರಾಸವಾಗಿದೆ. ಅತೀ ಹೆಚ್ಚು ಬಾರಿ ರಜೆ ಕೇಳಿ ನಿರಾಕರಿಸಿದ ಘಟನೆಗಳು ವರದಿಯಾಗುತ್ತದೆ.ಈ ಬಾರಿ ಉದ್ಯೋಗಿ ತುರ್ತು ಕಾರಣದಿಂದ ರಜೆ ಕೇಳಿದ್ದಾನೆ. ಇತ್ತ ಬಾಸ್ ರಜೆ ಕೂಡ ನೀಡಿದ್ದಾರೆ. ಆದರೆ ರಜೆ ಜೊತೆ ಹಾಕಿದ ಕಂಡೀಷನ್ ಇದೀಗ ಟೀಕೆಗೆ ಕಾರಣವಾಗಿದೆ. ಅಜ್ಜ ತೀರಿಕೊಂಡಿದ್ದಾರೆ. ಇಂದು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರಜೆ ಕೇಳಿದ್ದಾನೆ. ಇತ್ತ ಬಾಸ್ ಸುದ್ದಿ ತಿಳಿದು ದುಃಖವಾಯಿತು, ಇಂದು ರಜೆ ಪಡೆದುಕೊ ಎಂದಿದ್ದಾರೆ. ಆದರೆ ಇದೇ ಪ್ರತಿಕ್ರಿಯೆಲ್ಲಿ ಬಳಿಕ ಹೇಳಿದ ಕಂಡೀಷನ್ ಇದೀಗ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಉದ್ಯೋಗಿ ಬೆಳಗ್ಗೆ ಮ್ಯಾನೇಜರ್‌ಗೆ ವ್ಯಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ. ಗುಡ್ ಮಾರ್ನಿಂಗ್ ಸರ್ ಎಂದು ಬರೆದ ಉದ್ಯೋಗಿ, ನಿನ್ನೆ ರಾತ್ರಿ ನನ್ನ ಅಜ್ಜ ತೀರಿಕೊಂಡಿದ್ದಾರೆ. ಹೀಗಾಗಿ ಇಂದು ಕಚೇರಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಮಸೇಜ್ ಮಾಡಿದ್ದಾರೆ. ಬೆಳಗ್ಗೆ 7.15ಕ್ಕೆ ಉದ್ಯೋಗಿ ತನ್ನ ಮ್ಯಾನೇಜರ್‌ಗೆ ಈ ಸಂದೇಶ ಕಳುಹಿಸಿದ್ದಾರೆ. ಇತ್ತ ಮ್ಯಾನೇಜರ್ 10.29ಕ್ಕೆ ಈ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲ ಪ್ರತಿಕ್ರಿಯೆ, ಈ ಸುದ್ದಿ ತಿಳಿದು ದುಖವಾಯಿತು ಎಂದು ಸಂತಾಪಗಳನ್ನು ಸೂಚಿಸಿದ್ದಾರೆ. ಇನ್ನು ಎರಡನೇ ಸಂದೇಶದಲ್ಲಿ ಈ ದಿನ ರಜೆ ತೆಗೆದುಕೊಳ್ಳಿ ಎಂದು ಪ್ರತಿಕ್ರಿಯಿಸಿದ್ದಾರೆ. ಇಲ್ಲೀವರೆಗೆ ಎಲ್ಲವೂ ಸರಿ ಇದೆ. ಆದರೆ ಮುಂದಿನ ವಾಕ್ಯದಲ್ಲಿ ಒಂದೊಂದೆ ಕಂಡೀಷನ್ ಹಾಕಿದ್ದಾರೆ. ಆದರೆ ಇಂದು ಕೆಲ ಕ್ಲೈಂಟ್ ಜೊತೆ ಆನ್‌ಬೋರ್ಡ್ ಮೀಟಿಂಗ್ ಇದೆ. ಹೀಗಾಗಿ ನೀವು ಇಂದು ಈ ಪ್ರಮುಖ ಕಾಲ್‌ನಲ್ಲಿ ಇರುತ್ತೀರಿ ಎಂದು ಭಾವಿಸುವೆ. ವ್ಯಾಟ್ಸಾಪ್‌ನಲ್ಲಿ ಸಕ್ರಿವಾಗಿರಬೇಕು, ಕಾರಣ ಡಿಸೈನರ್ಸ್ ಸೂಚನೆ ನೀಡಬೇಕಾದ ಲಭ್ಯವಾಗುವಂತೆ ಇರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಎರಡು ಸಂದೇಶಗಳಿಗೆ ಉದ್ಯೋಗಿ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಬಾಸ್ ಮತ್ತೆ ಸಂದೇಶದಲ್ಲಿ ಸಕ್ರಿಯವಾಗಿದ್ದೀರಾ ಎಂದು ಸಂದೇಶ ಕಳುಹಿಸಿದ್ದಾರೆ.
ಮ್ಯಾನೇಜರ್ ಉತ್ತರದ ಸ್ಕ್ರೀನ್ ಶಾಟ್‌ನ್ನು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ ಉದ್ಯೋಗಿ, ಈ ಘಟನೆ ಕುರಿತು ವಿವರಿಸಿದ್ದಾರೆ. ಕಳೆದೆರಡು ವರ್ಷದಿಂದ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಹಲವು ಬಾರಿ ನನ್ನ ಜವಾಬ್ದಾರಿಗಳನ್ನು ಬದಲಾಯಿಸಿದ್ದಾರೆ. ಅತೀಯಾದ ಕೆಲಸವನ್ನು ನೀಡಿದ್ದಾರೆ. ಹಲವರನ್ನು ಕಂಪನಿ ಕೆಲಸದಿಂದ ತೆಗೆದು ಹಾಕಿದೆ. ಆರ್ಥಿಕ ಸಂಕಷ್ಟ ಕಾರಣಗಳನ್ನು ನೀಡಿದೆ. ಆದರೆ ನಾನು ಒತ್ತಡದ, ಹೆಚ್ಚುವರಿ ಕೆಲಸವನ್ನು ಆನಂದಿಂದ ಮಾಡಿದ್ದೇನೆ. ನಾನು ತುರ್ತು ಸಂದರ್ಭದಲ್ಲಿ ಒಂದು ರಜೆ ಕೇಳಿದ್ದೇನೆ. ಆದರೆ ನನ್ನ ಕೆಲಸ ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲವೇ. ನಾವು ಉದ್ಯೋಗಿಗಳು ಮಶೀನ್ ಅಲ್ಲ ಅನ್ನೋದನ್ನು ಮ್ಯಾನೇಜರ್ ಮರೆತಿದ್ದಾರೆ. ಹೀಗಾಗಿ ಮ್ಯಾನೇಜರ್‌ಗೆ ಪ್ರತಿಕ್ರಿಯೆ ನೀಡಲು ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಬಾಸ್ ಪ್ರತಿಕ್ರಿಯೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಇಂತಹ ಕಂಪನಿಯಲ್ಲಿ ಕೆಲಸ ಮಾಡುವುದಕ್ಕಿಂತ ರಾಜೀನಾಮೆ ಕೊಡುವುದು ಉತ್ತಮ. ಸ್ಯಾಲರಿ ಬರುವ ಮೊದಲು ಬೇರೆ ಕೆಲಸ ಹುಡುಕಿಕೊಳ್ಳಿ, ರಾಜಾನಾಮೆ ನೀಡಿ ಎಂದು ಹಲವರು ಸಲಹೆ ನೀಡಿದ್ದಾರೆ. ಮ್ಯಾನೇಜರ್ ಕೇವಲ ಟಾರ್ಗೆಟ್ ಮಾತ್ರ ನೋಡುತ್ತಾರೆ ಎಂದು ಹಲವರು ಪ್ರತಿಕ್ರಿಯೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ