* ಸಮಾಜಕ್ಕೇ ಮಾದರಿ ಈ ಮದುವೆ
* ಅಣ್ಣನ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ವಿಧವೆ ಅತ್ತಿಗೆಯನ್ನು ಮದುವೆಯಾದ ತಮ್ಮ
* ಅತ್ತಿಗೆ ಜೊತೆ ಮದುವೆ, ಮಕ್ಕಳಿಗಾಗಿ 'ಸಪ್ತಪದಿ' ತುಳಿದ ಜೋಡಿ
ಮುಂಬೈ(ಮೇ.14): ಸಮಾಜದಲ್ಲಿ, ವ್ಯಕ್ತಿಯೊಬ್ಬರ ಜೀವನದಲ್ಲಿ ಮದುವೆಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಮದುವೆಯ ಬಗ್ಗೆ ಪ್ರತಿಯೊಬ್ಬರಿಗೂ ವಿಭಿನ್ನ ಉತ್ಸಾಹವಿದೆ. ಅವರ ಮದುವೆಯನ್ನು ಸ್ಮರಣೀಯವಾಗಿಸಲು, ಕೆಲವರು ಹೆಲಿಕಾಪ್ಟರ್‌ನಲ್ಲಿ ಮತ್ತು ಕೆಲವರು ಎತ್ತಿನ ಬಂಡಿಯಲ್ಲಿ ಬರುತ್ತಾರೆ. ಆದರೀಗ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಮಾಜಕ್ಕೆ ಮಾದರಿಯಾದ ಮದುವೆಯೊಂದು ಭಾರೀ ಸದ್ದು ಮಾಡುತ್ತಿದೆ. ಅಸಲಿಗೆ, ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ಅಣ್ಣನ ವಿಧವೆ ಜೊತೆ ಮೈದುನ ಮದುವೆಯಾಗಿದ್ದು ಇಡೀ ಪ್ರದೇಶದಲ್ಲಿ ಚರ್ಚೆಯಾಗುತ್ತಿದೆ.
ವಾಸ್ತವವಾಗಿ, ಜಿಲ್ಲೆಯ ವಾಂಖೀಡ್ ಗ್ರಾಮದಲ್ಲಿ ವಾಸಿಸುತ್ತಿದ್ದ ವ್ಯಕ್ತಿಯ ಸಾವಿನಿಂದ, ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಕಂಗಾಲಾಗಿದ್ದರು. ಆ ಮನೆಯಲ್ಲಿ ದುಃಖ ಮಡುಗಟ್ಟಿತ್ತು. ಇದನ್ನು ಕಂಡ ಮೃತನ ಕಿರಿಯ ಸಹೋದರ ಹರಿದಾಸ್ ದಮದರ್‌ಗೆ, ವಿಧವೆ ಅತ್ತಿಗೆಯನ್ನು ಮದುವೆಯಾಗುವಂತೆ ಸಂಬಂಧಿಕರು ಮತ್ತು ಸಂಬಂಧಿಕರು ಹೇಳಿದ್ದಾರೆ. ಹರಿದಾಸರೂ ಸಮಾಜ, ಪ್ರಪಂಚದ ಬಗ್ಗೆ ತಲೆಕೆಡಿಸಿಕೊಳ್ಳದೆ ಎಲ್ಲರನ್ನೂ ಗೌರವಿಸಿ ಅತ್ತಿಗೆಯನ್ನು ಮದುವೆಯಾಗಲು ಒಪ್ಪಿದ್ದಾರೆ.
ಅದೇ ಸಮಯದಲ್ಲಿ ವಿಧವೆ ಅತ್ತಿಗೆಯಿಂದ ಒಪ್ಪಿಗೆ ಸಿಕ್ಕ ನಂತರ, ಈ ಮದುವೆಗೆ ಸಿದ್ಧತೆಗಳನ್ನು ಮಾಡಲಾಯಿತು. ನಂತರ ಮೈದುನ ಹಾಗೂ ಅತ್ತಿಗೆ ಪತಿ-ಪತ್ನಿಯರಾಗಿ ಸಪ್ತಪದಿ ತುಳಿದಿದ್ದಾರೆ. ಸಮಾಜಕ್ಕೆ ಮಾದರಿಯಾದ ಈ ವಿವಾಹದಲ್ಲಿ ಪಾಲ್ಗೊಂಡ ಹಲವರು ಹರಿದಾಸ್ ದಾಮಧರ್ ಅವರ ನಿರ್ಧಾರವನ್ನು ಶ್ಲಾಘಿಸಿದರು.
ಲೈಂಗಿಕ ಕ್ರಿಯೆ ಮಾಡದಿದ್ದರೆ ಹೀಗೆಲ್ಲಾ ಆಗುತ್ತೆ ಅನ್ನೋದು ನಿಮ್ಗೆ ಗೊತ್ತಿತ್ತಾ ?
ಮಕ್ಕಳಿಗೆ ಯಾವತ್ತೂ ತಂದೆಯ ಪ್ರೀತಿ ಕೊಡುತ್ತೇನೆ
ಅತ್ತಿಗೆಯನ್ನು ಮದುವೆಯಾಗುವ ಕುರಿತು ಹರಿದಾಸ್ ದಮ್‌ಧರ್, “ನನ್ನ ಸಹೋದರ ಒಂದೂವರೆ ವರ್ಷಗಳ ಹಿಂದೆ ನಿಧನರಾದರು. ಅವರಿಗೆ 2 ಮಕ್ಕಳಿದ್ದಾರೆ. ನನ್ನ ಹೆತ್ತವರು ಈ ಬಗ್ಗೆ ಯೋಚಿಸಿ, ನನ್ನ ಅತ್ತಿಗೆಯನ್ನು ಮದುವೆಯಾಗಲು ನನಗೆ ಹೇಳಿದರು. ಇದರಿಂದ ಅವರಿಗೆ ಮತ್ತು ಅವರ ಮಕ್ಕಳಿಗೆ ಬೆಂಬಲ ಸಿಗುತ್ತದೆ ಎಂದು ಅವರು ಅರ್ಥೈಸಿದರು. ಅಪ್ಪ-ಅಮ್ಮ, ಗೆಳೆಯರು ತೆಗೆದುಕೊಂಡ ನಿರ್ಧಾರ ಸರಿ ಅನ್ನಿಸಿ ಅತ್ತಿಗೆ ಹಾಗೂ ಮಕ್ಕಳಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಬಂತು. ಅದಕ್ಕೇ ಮದುವೆಗೆ ಓಕೆ ಅಂದೆ. ನನ್ನ ಈ ನಿರ್ಧಾರದಿಂದ ನನಗೆ ತುಂಬಾ ಸಂತೋಷವಾಗಿದೆ. ಎಂದಿದ್ದಾರೆ.
ಯಪ್ಪಾ..! ಈ ಕಾರಣಕ್ಕೆ ಮದುವೆ ನಿಲ್ಲಿಸಿದ ವಧು
ಈ ಘಟನೆ ದುಬೈನ ಮದುವೆ ಮಂಟಪದಲ್ಲಿ ನಡೆದಿದೆ. ವರದಿಗಳ ಪ್ರಕಾರ, ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಕಂಪನಿಯ ಮಾಲೀಕೆ ಮದುವೆಯಾಗ್ತಿದ್ದಳು. ಆಕೆ ವಧುವಿನ ಬಟ್ಟೆ ಧರಿಸಿದ್ದಳು. ಮಂಟಪ ಸಿಂಗಾರಗೊಂಡಿತ್ತು. ಮದುವೆ ಸಮಾರಂಭಕ್ಕೆ ನೂರಾರು ಮಂದಿ ಬಂದಿದ್ದರು. ಎಲ್ಲರೂ ಮದುವೆ ಕ್ಷಣವನ್ನು ಕಣ್ತುಂಬಿಕೊಳ್ಳುವ ಕಾತುರದಲ್ಲಿದ್ದರು. ಇನ್ನೇನು ಮದುವೆ ಪೂರ್ಣಗೊಳ್ಳಬೇಕು ಆದ್ರೆ ವಧು ಮದುವೆ ನಿಲ್ಲಿಸಿದ್ದಳು.
RELATIONSHIP TIPS : ನಿಮ್ಮ ಪ್ರೀತಿ ಈಗಷ್ಟೇ ಶುರುವಾಗಿದ್ರೆ, ಈ ತಪ್ಪುಗಳನ್ನು ಮಾಡಲೇಬೇಡಿ
ಮದುವೆ ನಿಲ್ಲಿಸಲು ಡ್ರೆಸ್ ಕಾರಣ : ಮದುವೆ ಮಂಟಪಕ್ಕೆ ಬರ್ತಿದ್ದಂತೆ ವಧುವಿನ ಗಮನ ಡ್ರೆಸ್ ಮೇಲೆ ಹೋಗಿದೆ. ತನ್ನ ಡ್ರೆಸ್ ಅಪೂರ್ಣವಾಗಿದೆ ಎಂಬುದು ಅದಕ್ಕೆ ಗೊತ್ತಾಗಿದೆ. ತಕ್ಷಣ ಗೆಳತಿಗೆ ವಿಷ್ಯ ತಿಳಿಸಿದ್ದಾಳೆ. ಸರಿಯಾದ ಡ್ರೆಸ್ ವ್ಯವಸ್ಥೆ ಮಾಡುವಂತೆ ಹೇಳಿದ್ದಾಳೆ. ಪಕ್ಕದಲ್ಲಿದ್ದ ಮೈಕ್ ತೆಗೆದುಕೊಂಡ ವಧು, ಮದುವೆ ನಿಲ್ಲಿಸುವ ನಿರ್ಧಾರ ತೆಗೆದುಕೊಂಡಿದ್ದಾಳೆ. ಅದನ್ನು ಮೈಕ್ ನಲ್ಲಿ ಹೇಳಿದ್ದಾಳೆ. ನಂತ್ರ ಪಕ್ಕಕ್ಕೆ ಹೋಗಿ ಡ್ರೆಸ್ ಧರಿಸಿದ್ದಾಳೆ.
ಮತ್ತೆ ಶುರುವಾಯ್ತು ಮದುವೆ : ಮದುವೆ ಡ್ರೆಸ್ ಧರಿಸಿದ ವಧು ಮತ್ತೆ ಮಂಟಪಕ್ಕೆ ಬಂದಿದ್ದಾಳೆ. ನಂತ್ರ ಮದುವೆ ಸಮಾರಂಭಕ್ಕೆ ಚಾಲನೆ ಸಿಕ್ಕಿದೆ. ಮದುವೆ ಸುಸೂತ್ರವಾಗಿ ನಡೆದಿದೆ.
ವಧು ಹೇಳೋದೇನು ? : ಈ ಘಟನೆಯನ್ನು ಉಲ್ಲೇಖಿಸಿದ ವಧು, ಆ ಸಮಯದಲ್ಲಿ ನಾನು ಮೈಕ್ ಹಿಡಿದು ನನ್ನ ಮದುವೆ ಸಮಾರಂಭವನ್ನು ನಿಲ್ಲಿಸಬೇಕಾಗಿತ್ತು. ಡ್ರೆಸ್ ಬದಲಾವಣೆಗೆ ಸಿದ್ಧನಾಗಬೇಕಾಗಿತ್ತು. ಇದು ನನಗೆ ದುಃಸ್ವಪ್ನದಂತಿತ್ತು. ನನ್ನ ಮದುವೆ ಹೀಗೆ ನಡೆಯುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಆದ್ರೆ ನನಗೆ ಎಲ್ಲರೂ ಬೆಂಬಲ ನೀಡಿದ್ದರು. ಮದುವೆ ಸಮಾರಂಭಕ್ಕೆ ಬಂದ ಜನರು ಯಾವುದೇ ರೀತಿಯಲ್ಲಿ ಇದನ್ನು ವಿರೋಧಿಸಲಿಲ್ಲ. ನನಗೆ ಸಂಪೂರ್ಣ ಬೆಂಬಲ ನೀಡಿದರು. ಇದ್ರಿಂದ ಮದುವೆ ಯಾವುದೇ ಸಮಸ್ಯೆಯಿಲ್ಲದೆ ನಡೆಯಿತು. ಆ ಕ್ಷಣ ಮೋಜಿನಿಂದ ಕೂಡಿತ್ತು ಎಂದು ವಧು ಹೇಳಿದ್ದಾಳೆ.