"ಸ್ವಲ್ಪ ನೋಡ್ಕೊಂಡು ಕೊಡಿ ಅಣ್ಣಾ" ರೈಲು ಮಾರಾಟಕ್ಕೆ ಮುಂದಾದ ವ್ಯಕ್ತಿ; ವಿಡಿಯೋ ವೈರಲ್ 

By Mahmad Rafik  |  First Published Oct 3, 2024, 1:32 PM IST

ವ್ಯಕ್ತಿಯೊಬ್ಬರು ರೈಲು ಮಾರಾಟ ಮಾಡುವವೀಡಿಯೊ ವೈರಲ್ ಆಗಿದೆ. ವೀಡಿಯೊದಲ್ಲಿ, ವ್ಯಕ್ತಿಯು ರೈಲಿನ ವೈಶಿಷ್ಟ್ಯಗಳನ್ನು ವಿವರಿಸುತ್ತಾರೆ ಮತ್ತು ಆಸಕ್ತ ಖರೀದಿದಾರರು ಅವರನ್ನು ಸಂಪರ್ಕಿಸಲು ಆಹ್ವಾನಿಸುತ್ತಾರೆ.


ಇಂದು ಜನರು ತಮ್ಮ ಕಾರ್, ಬೈಕ್, ಮನೆ ಮಾರಾಟದ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ಸೆಕೆಂಡ್ ಹ್ಯಾಂಡ್ ವಸ್ತುಗಳ ಮಾರಾಟಕ್ಕೆ ಅನೇಕ ಆನ್‌ಲೈನ್ ಆಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಸಿಗುತ್ತವೆ. ನಾವು ಮಾರಾಟ ಮಾಡುವ ವಸ್ತು ಯಾವುದೇ ಆಗಿರಲಿ, ಅದರ ಬಗ್ಗೆ ಮಾಹಿತಿಯನ್ನು  ನೀಡಲಾಗುತ್ತದೆ. ಉದಾಹರಣೆಗೆ ಕಾರ್ ಮಾರಾಟ ಮಾಡುತ್ತಿದ್ದರೆ ಮಾಡೆಲ್, ಕಲರ್, ಸೀಸ್ ಕ್ಯಾಪಾಸಿಟಿ, ಮೈಲೇಜ್ ಸೇರಿದಂತೆ ಹಲವು ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳಬೇಕಾಗುತ್ತದೆ. ಇಂತಹ  ವಿಡಿಯೋಗಳು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಇಂತಹವುದೇ ಒಂದು ವಿಡಿಯೋ ವೈರಲ್ ಆಗಿದ್ದು, ಇಲ್ಲಿ ವ್ಯಕ್ತಿ ಮಾರಾಟ ಮಾಡ್ತಿರೋದು ರೈಲು . 

ವ್ಯಕ್ತಿಯೊಬ್ಬ ತಾನು ಭಾರತೀಯ ರೈಲ್ವೆಯ ಮುಂದೆ ನಿಂತು ಈ ವಿಡಿಯೋ ಮಾಡಿದ್ದಾನೆ. ಈ ವಿಡಿಯೋದಲ್ಲಿ ರೈಲು ತೋರಿಸುತ್ತಾ,  ಅದರ ಬಗ್ಗೆ ಕೆಲ ಮಾಹಿತಿ ನೀಡಿದ್ದಾನೆ. ನಂತರ ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು ಆಸಕ್ತರು ನನ್ನನ್ನು ಸಂಪರ್ಕಿಸಬಹುದು ಎಂದು ಸಹ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.ಈ ವಿಡಿಯೋವನ್ನು ಕೇವಲ ತಮಾಷೆಗಾಗಿ ಮಾಡಲಾಗಿದೆ.

Tap to resize

Latest Videos

@shiv_shukla_5005 ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ತಮಾಷೆ ವಿಡಿಯೋವನ್ನು ಪೋಸ್ಟ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೋರ್ವ ಇಡೀ ರೈಲನ್ನು ಮಾರಾಟ ಮಾಡೋದಾಗಿ ಹೇಳಿಕೊಂಡಿದ್ದಾನೆ. ನಿಂತಿರುವ ರೈಲಿನ ಇಂಜಿನ್ ತೋರಿಸುತ್ತಾ, ಅದರ ವಿಶೇಷತೆಗಳನ್ನು ವಿವರಿಸುತ್ತಾನೆ. ಇಂದು 2007ರ ಮಾಡೆಲ್ ಆಗಿದ್ದು, 2027ರವರೆಗಿನ ಎಲ್ಲಾ ದಾಖಲೆಗಳು ಕ್ಲಿಯರ್ ಆಗಿವೆ. ಸದ್ಯ ರೈಲಿನಲ್ಲಿ ಪೇಂಟಿಂಗ್ ಕೆಲಸ ನಡೆಯುತ್ತಿದ್ದು, ಹೆಡ್‌ಲೈಟ್ ಫೋಕಸ್ ಸ್ವಲ್ಪ ಕಡಿಮೆಯಾಗಿದೆ. ಇಂಜಿನ್‌ನಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿವೆ ಎಂದು ಹೇಳಿದ್ದಾನೆ. 

ಭಾರತೀಯ ರೈಲ್ವೆ ಸೂಪರ್ ಆ್ಯಪ್, ಒಂದರಲ್ಲಿಯೇ ಪ್ರಯಾಣಿಕರಿಗೆ ಸಿಗುತ್ತೆ ಎಲ್ಲಾ ಸೇವೆ

ತನ್ನ ಮಾತು ಮುಂದುವರಿಸಿದ ವ್ಯಕ್ತಿ, ಈ ರೈಲು ಗಾಡಿ ಬಹುತೇಕ ಸರಿಯಾಗಿದ್ದು, ಇದರ ವಿಮಾ ಅವಧಿ ಅಂತ್ಯವಾಗಿದೆ. ಹಾಗಾಗಿ ಇದನ್ನು ಖರೀದಿಸುವವರೇ ವಿಮೆ ಮಾಡಿಸಿಕೊಳ್ಳಬೇಕು ಎಂದು ವ್ಯಕ್ತಿ ಹೇಳಿರೋದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.  ಈ ವಿಡಿಯೋ ನೋಡಿದ ನೆಟ್ಟಿಗರು, ಈ ವ್ಯಕ್ತಿ ತುಂಬಾ ತಮಾಷೆ ಮೂಡ್‌ನಲ್ಲಿದ್ದಂತೆ ಕಾಣಿಸ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋಗೆ 38 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದೆ.

ಈ ರೈಲು ಎಷ್ಟು ವೇಗದಲ್ಲಿ ಚಲಿಸುತ್ತೆ ಎಂಬುದರ ಮಾಹಿತಿ ನೀಡುವುದನ್ನು ಮರೆತಿದ್ದೀರಿ. ಅದನ್ನು ಸ್ವಲ್ಪ ತಿಳಿಸಿ. ನಿಮ್ಮ ಬಳಿ ಬೇರೆ ಮಾಡೆಲ್ ರೈಲುಗಳಿದ್ದರೆ ಅದರ ಬಗ್ಗೆಯೂ ಮಾಹಿತಿ ನೀಡಿದ್ರೆ ಒಳ್ಳೆಯದಾಗುತ್ತದೆ. ಯಾಕೋ ಇದು ಸ್ವಲ್ಪ ಹಳೆಯದಾದಂತೆ ಕಾಣಿಸುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಓರ್ವ ಬಳಕೆದಾರ, ಅಣ್ಣಾ, ಸರಿಯಾದ ಒಂದು ರೇಟ್ ಹೇಳಿ. ಮುಂದಿನ ಬಾರಿ ನಿಮ್ಮಿಂದಲೇ ಖರೀದಿಸುವೆ ಎಂದು ತಮಾಷೆ ಮಾಡಿದ್ದಾರೆ.

ರೈಲುಗಳು ಗಂಟೆಗಟ್ಟಲೇ ನಿಂತರೂ ಇಂಜಿನ್ ಯಾಕೆ ಆಫ್ ಮಾಡಲ್ಲ?

click me!