ಜನರು ದೂರದಿಂದಲೇ ನಿಂತು ಮೊಸಳೆಯ ವಿಡಿಯೋ ಸೆರೆ ಹಿಡಿಯುತ್ತಿದ್ದರು. ಗ್ರಾಮಕ್ಕೆ ಬಂದ ಮೊಸಳೆ ಗಲ್ಲಿಗಳಲ್ಲಿ ಭಯದಿಂದ ಓಡಾಡುತ್ತಿತ್ತು. ಜನರು ಮೊಸಳೆಯನ್ನು ಕಂಡು ಓಡುತ್ತಿದ್ದರು.
ಲಕ್ನೋ: ಕಳೆದ ಎರಡು ತಿಂಗಳಿನಿಂದ ದೇಶದ ಬಹುತೇಕ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನದಿಗಳು ಅಪಾಯಮಟ್ಟವನ್ನು ಮೀರಿ ಹರಿಯುತ್ತಿದ್ದು, ನೀರು ಜನವಸತಿ ಪ್ರದೇಶದತ್ತು ನುಗ್ಗಿದೆ. ನೀರಿನ ಜೊತೆಯಲ್ಲಿ ಜಲಚರ ಪ್ರಾಣಿಗಳು ಊರು ಪ್ರವೇಶಿಸುತ್ತಿವೆ. ಮೀನುಗಳ ಬಂದ್ರೆ ಹಿಡಿದು ಫ್ರೈ ಮಾಡ್ಕೊಂದು ತಿಂದು ಬಿಡ್ತಾರೆ. ಆದ್ರೆ ಮೊಸಳೆ ಬಂದ್ರೆ ಇಡೀ ಊರಿಗೆ ಊರು ಭಯಗೊಳ್ಳುತ್ತದೆ. ಮೊಸಳೆ ಬಂದ ವಿಷಯ ಕೇಳಿದ್ರೆ ಕೆಲವರಂತೂ ಮನೆಯಿಂದಲೇ ಹೊರಗಡೆಯೇ ಬರಲ್ಲ. ಮಳೆ ಹೆಚ್ಚಾದ ಪರಿಣಾಮ ಗ್ರಾಮಗಳನ್ನು ಪ್ರವೇಶಿಸುತ್ತಿರುವ ಮೊಸಳೆಗಳನ್ನು ಹಿಡಿದು ರಕ್ಷಣೆ ಮಾಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದ್ರೆ ಇಲ್ಲೊಂದು ವಿಡಿಯೋದಲ್ಲಿ ಮೊಸಳೆ ಅಂತ ಜನ ಓಡ್ತಿದ್ರೆ, ಹಿಂದಿನಿಂದ ಬಂದ ವ್ಯಕ್ತಿ ಒದ್ದಿದ್ದಾನೆ. ಈ ವಿಡಿಯೋ ನೋಡಿದ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಬುಧವಾರ ಬೆಳಗ್ಗೆ ಉತ್ತರ ಪ್ರದೇಶದ ಬಿಜ್ನೊರ್ ಜಿಲ್ಲೆಯ ನಂಗಲ್ ಸೋತಿ ಗ್ರಾಮಕ್ಕೆ ಮೊಸಳೆ ಎಂಟ್ರಿ ಕೊಟ್ಟಿದೆ. ಜನರು ದೂರದಿಂದಲೇ ನಿಂತು ಮೊಸಳೆಯ ವಿಡಿಯೋ ಸೆರೆ ಹಿಡಿಯುತ್ತಿದ್ದರು. ಗ್ರಾಮಕ್ಕೆ ಬಂದ ಮೊಸಳೆ ಗಲ್ಲಿಗಳಲ್ಲಿ ಭಯದಿಂದ ಓಡಾಡುತ್ತಿತ್ತು. ಜನರು ಮೊಸಳೆಯನ್ನು ಕಂಡು ಓಡುತ್ತಿದ್ದರು. ಈ ಸಂದರ್ಭದಲ್ಲಿ ಗ್ರಾಮದಲ್ಲಿ ವ್ಯಕ್ತಿಯೋರ್ವ ಯಾವುದೇ ಭಯವಿಲ್ಲದೇ ಮೊಸಳೆಗೆ ಹಿಂದಿನಿಂದ ಒದ್ದಿದ್ದಾನೆ. ಇದರಿಂದ ಭಯಗೊಂಡ ಮೊಸಳೆ ಮುಂದಕ್ಕೆ ವೇಗವಾಗಿ ಚಲಿಸಲು ಆರಂಭಿಸಿದೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಇವನ್ಯಾರೋ ಗಟ್ಟಿ ಪಿಂಡದವನು ಆಗಿರಬೇಕೆಂದು ನಗೆಚಟಾಕಿ ಹಾರಿಸಿದ್ದಾರೆ.
ಸುಮಾರು 3 ಗಂಟೆಗಳ ಕಾಲ ಮೊಸಳೆ ಗ್ರಾಮದಲ್ಲಿಯೇ ಸುತ್ತಾಡಿದೆ. ಮೊಸಳೆ ಕಾಣಿಸಿಕೊಳ್ಳುತ್ತಿದ್ದಂತೆ ಗ್ರಾಮಸ್ಥರು ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಗ್ರಾಮಕ್ಕೆ ಆಗಮಿಸೋದು ವಿಳಂಬವಾದ ಹಿನ್ನೆಲೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. 3 ಗಂಟೆಯ ನಂತರ ಬಂದ ಅಧಿಕಾರಿಗಳು ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಪ್ಪನ ಖಾಸಗಿ ಅಂಗ ಕತ್ತರಿಸಿ ಹತ್ಯೆ ಮಾಡಿದ್ದ ಅಮ್ಮ- ಮರ್ಡರ್ ಮಿಸ್ಟ್ರಿ ಬಿಚ್ಚಿಟ್ಟ ಮಗಳು
बिजनौर : जंगल से निकलकर गांव में घुसा मगरमच्छ
गांव की गलियों में घंटों तक टहलता रहा मगरमच्छ
वन विभाग की टीम ने मगरमच्छ का किया रेस्क्यू
बिजनौर के नांगल सोती गांव का मामला pic.twitter.com/rqmbAdUWAa