
ರಿಷಿಕೇಶ (ಏ.10): ದೆಹಲಿ ಮೂಲದ ಕಂಟೆಂಟ್ ಕ್ರಿಯೇಟರ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅದಕ್ಕೆ ಕಾರಣ ವಿದೇಶಿ ಮಹಿಳೆಯರು ರಿಷಿಕೇಶದಲ್ಲಿ ಸ್ನಾನ ಮಾಡುವ ವಿಡಿಯೋವನ್ನು ಅವರ ಒಪ್ಪಿಗೆಯಿಲ್ಲದೆ ಚಿತ್ರೀಕರಿಸಿದ್ದು ಮಾತ್ರವಲ್ಲದೆ ಅದನ್ನು ಸೋಶಿಉಲ್ ಮೀಡಿಯಾದಲ್ಲಿ ಅಪ್‌ಲೋಟ್‌ಮಾಡಿದ್ದಾರೆ. ಇನ್ಸ್‌ಟಾಗ್ರಾಮ್‌ನಲ್ಲಿ Junior Michael ಎನ್ನುವ ಹ್ಯಾಂಡಲ್ ಹೊಂದಿರುವ ವ್ಯಕ್ತಿಯ ವಿರುದ್ಧ ವ್ಯಾಪಕ ಆಕ್ರೋಶೊ ವ್ಯಕ್ತವಾಗಿದೆ.
ರಿಷಿಕೇಶದ ರಿವರ್‌ಬ್ಯಾಂಕ್ ಪ್ರದೇಶದಲ್ಲಿ ಯುರೋಪಿಯನ್ ಮಹಿಳೆಯರು ಬಿಕಿನಿಯಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಈತ ಶೂಟ್ ಮಾಡಿದ್ದಾರೆ. ಬಳಿಕ ಈ ಫೂಟೇಜ್‌ಗಳನ್ನು ಆತ ರೀಲ್ಸ್ ಮಾಡಲು ಬಳಸಿಕೊಂಡಿದ್ದಾನೆ.
ವೈರಲ್ ಆದ ವಿಡಿಯೋ: ಈ ವಿಡಿಯೋ ಕ್ವಿಕ್ ಆಗಿ ವೈರಲ್ ಆಗಿದೆ. ವಿದೇಶಿ ಪ್ರವಾಸಿಗರಿಗೆ ಈತ ವಿಡಿಯೋ ಶೂಟ್ ಮಾಡುತ್ತಿರುವುದು ಗೊತ್ತಿಲ್ಲದ ಕಾರಣ, ನದಿಯ ಬಳಿ ರಿಲಾಕ್ಸ್ ಮೂಡ್‌ನಲ್ಲಿ ಇದ್ದಾರೆ. ಈತ ಕಂಟೆಂಟ್ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಹಲವರು ಪ್ರವಾಸಿಗಳ ಖಾಸಗಿತನಕ್ಕೆ ಈತ ಧಕ್ಕೆ ತಂದಿದ್ದಾನೆ. ಅವರ ಫೋಟೋಗಳನ್ನು ವೀವ್ಸ್‌ಗಾಗಿ ಬಳಸಿಕೊಂಡಿದ್ದಾನೆ ಎಂದು ದೂರಿದ್ದಾರೆ. ಇನ್ನೂ ಕೆಲವರು ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಆತ ವಿಡಿಯೋವನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡುವಂತೆ ಕ್ರಮವಹಿಸಬೇಕು ಎಂದಿದ್ದಾರೆ.
ಇದೊಂದು ಭಯಾನಕ ಘಟನೆ: ಈ ವೀಡಿಯೊವನ್ನು ಮೂಲತಃ ಪೋಸ್ಟ್ ಮಾಡಿದ ಖಾತೆಯಿಂದ ಈಗ ಡಿಲೀಟ್ ಮಾಡಲಾಗಿದೆ. ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ಎಕ್ಸ್‌ನಲ್ಲಿ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಇದೊಂದು ಕಿರುಕುಳದ ಪ್ರಕರಣ ಎನ್ನುವುದು ಸರಳವಾಗಿ ಹೇಳಬಹುದು ಎಂದಿದ್ದಾರೆ. 'ಆ ಮಹಿಳೆಯರ ಅರಿವಿಗೆ ಬರದೇ, ಸಣ್ಣ ಉಡುಪಿನಲ್ಲಿ ಅವರನ್ನು ಚಿತ್ರೀಕರಿಸುವುದು ಸ್ವೀಕಾರಾರ್ಹವಲ್ಲ. ಇದು ಭಯಾನಕ ಘಟನೆ' ಎಂದು ಬರೆದಿದ್ದಾರೆ.
ಅನೇಕರು ಆ ವ್ಯಕ್ತಿಯ ಕೃತ್ಯವನ್ನು ಖಂಡಿಸಿ, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರೂ, ಈ ವಿವಾದವು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕವಾಗಿ ಸೂಕ್ಷ್ಮ ಸ್ಥಳಗಳಲ್ಲಿ ಡ್ರೆಸ್ ಕೋಡ್‌ಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿತು. ಧಾರ್ಮಿಕ ಮಹತ್ವಕ್ಕೆ ಹೆಸರುವಾಸಿಯಾದ ಋಷಿಕೇಶದಂತಹ ಸ್ಥಳಗಳಿಗೆ ಭೇಟಿ ನೀಡುವಾಗ ಪ್ರವಾಸಿಗರು "ಸೂಕ್ತವಾಗಿ" ಉಡುಗೆ ತೊಡಬೇಕು ಎಂದು ಇನ್ನೂ ಕೆಲವರು ಹೇಳಿದ್ದಾರೆ.
ಭೋಜ್‌ಪುರಿ ಡ್ಯಾನ್ಸ್ ನೋಡೋಕೆ ಜನ ಮುಗಿಬೀಳೋದೇಕೆ? ಈ ವಿಡಿಯೋ ನೋಡಿ
ಉತ್ತರಾಖಂಡದ ಖ್ಯಾತಿಗೆ ಧಕ್ಕೆ: ಇಂತಹ ಘಟನೆಗಳು ಉತ್ತರಾಖಂಡದ ಶಾಂತಿಯುತ ಮತ್ತು ಸ್ವಾಗತಾರ್ಹ ತಾಣ ಎಂಬ ಖ್ಯಾತಿಗೆ ಧಕ್ಕೆ ತರಬಹುದು ಎಂದು ಹಲವಾರು ಯೂಸರ್‌ಗಳು ಕಳವಳ ವ್ಯಕ್ತಪಡಿಸಿದ್ದಾರೆ. "ಇಂತಹ ಹೊರಗಿನವರಿಂದಾಗಿ, ಉತ್ತರಾಖಂಡದ ಚಿತ್ರಣ ಹಾಳಾಗುತ್ತದೆ ಮತ್ತು ವಿದೇಶಿಯರು ಶೀಘ್ರದಲ್ಲೇ ಪ್ರವಾಸೋದ್ಯಮಕ್ಕಾಗಿ ಇಲ್ಲಿಗೆ ಬರುವುದನ್ನು ನಿಲ್ಲಿಸುತ್ತಾರೆ" ಎಂದು ಮತ್ತೊಬ್ಬ ನೆಟಿಜನ್ ವೀಡಿಯೊಗೆ ಪ್ರತಿಕ್ರಿಯೆಯಾಗಿ ಬರೆದಿದ್ದಾರೆ.
ಇಬ್ಬರೂ ಆಂಟಿಯರಿಗೆ ಇಷ್ಟವಾಯ್ತು ಒಂದೇ ಡ್ರೆಸ್; ನಾ ಕೊಡೆ, ನೀ ಬಿಡೆ; ಮುಂದಾಗಿದ್ದು ಡಿಶುಂ ಡಿಶುಂ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ