ಇಬ್ಬರು ಹೆಣ್ಮಕ್ಕಳನ್ನು ಸಾವಿನ ದವಡೆಯಿಂದ ಕಾಪಾಡಲು ಬರಿಗೈಯಲ್ಲಿ ಚಿರತೆಯೊಂದಿಗೆ ಹೋರಾಡಿದ ಕಾರ್ಮಿಕ

By BK Ashwin  |  First Published May 22, 2023, 4:35 PM IST

ಬಾಗಿಲು ತೆರೆದು ಪ್ರಕೃತಿಯ ಕರೆಗೆ ಉತ್ತರಿಸಲು ತಂದೆ ಮನೆಯ ಬಾಗಿಲು ತೆರೆದು ಹೊರಹೋದರು. ಕೆಲವೇ ನಿಮಿಷಗಳಲ್ಲಿ ಆತ ಹಿಂತಿರುಗಿದಾಗ, ಚಿರತೆ ತನ್ನ ಮೂರು ವರ್ಷದ ಮಗಳು ವಂಶಾಳನ್ನು ತನ್ನ ಬಾಯಲ್ಲಿ ಹಿಡಿದಿರುವುದನ್ನು ನೋಡಿ ದಾಮೋರ್ ದಿಗ್ಭ್ರಮೆಗೊಂಡಿದ್ದರು. 


ವಡೋದರಾ (ಮೇ 22,2023):  ಗುಜರಾತ್‌ನ ಈ ಧೈರ್ಯಶಾಲಿ ಕಾರ್ಮಿಕನನ್ನು 'ವರ್ಷದ ತಂದೆ' ಎಂದು ಹೇಳಬಹುದು. ದಾಹೋದ್‌ನ ಈ ಕಾರ್ಮಿಕ ತನ್ನ ಇಬ್ಬರು ಹೆಣ್ಣುಮಕ್ಕಳ ಪ್ರಾಣವನ್ನು ಹಿಂಸಾತ್ಮಕ ಚಿರತೆಯಿಂದ ರಕ್ಷಿಸಿದ ರೀತಿಗೆ ಗ್ರಾಮಸ್ಥರು ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲದೆ, ಇದು ಅರಣ್ಯಾಧಿಕಾರಿಗಳನ್ನೂ ಸಹ ಆಶ್ಚರ್ಯಚಕಿತಗೊಳಿಸಿದೆ. 

ಅಂಕಿಲ್ ದಾಮೋರ್ ಅವರ ಅಪರೂಪದ ಕ್ರಿಯೆಯು ಕೇವಲ ಶೌರ್ಯದ ಕಾರ್ಯವಲ್ಲ, ಆದರೆ ಅವರ ಅಪ್ರಾಪ್ತ ಹೆಣ್ಣುಮಕ್ಕಳಿಗೆ ಇದು ಹೊಸ ಜೀವನವನ್ನು ನೀಡಿದೆ. ಭಾನುವಾರ ಬೆಳಗಿನ ಜಾವ ಗುಜರಾತ್‌ನ ಫುಲ್ಪುರ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಮುಂಜಾನೆ 3 ಗಂಟೆಗೆ ಚಿರತೆ ಅವರ ಮನೆಗೆ ಪ್ರವೇಶಿಸಿದೆ ಎಂದು ತಿಳಿದುಬಂದಿದೆ. ಈ ವೇಳೆ, ದಾಮೋರ್ ಹಾಗೂ ಆತನ ಪುತ್ರಿಯರು ಮನೆಯಲ್ಲಿ ಮಲಗಿದ್ದರು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ಇದನ್ನು ಓದಿ: The Kerala Story ಮೀರಿಸುವಂತಿದೆ ಪಂಜಾಬ್‌ ಸ್ಟೋರಿ: ಮಹಿಳೆಯರ ಮಾರಾಟ, ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಲು ಹಿಂಸೆ

"ಬಾಗಿಲು ತೆರೆದು ಪ್ರಕೃತಿಯ ಕರೆಗೆ ಉತ್ತರಿಸಲು ತಂದೆ ಮನೆಯ ಬಾಗಿಲು ತೆರೆದು ಹೊರಹೋದರು. ಕೆಲವೇ ನಿಮಿಷಗಳಲ್ಲಿ ಆತ ಹಿಂತಿರುಗಿದಾಗ, ಚಿರತೆ ತನ್ನ ಮೂರು ವರ್ಷದ ಮಗಳು ವಂಶಾಳನ್ನು ತನ್ನ ಬಾಯಲ್ಲಿ ಹಿಡಿದಿರುವುದನ್ನು ನೋಡಿ ದಾಮೋರ್ ದಿಗ್ಭ್ರಮೆಗೊಂಡನು" ಎಂದು ದೇವಗಢ್ ಬರಿಯಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ 
ಪ್ರಶಾಂತ್ ತೋಮರ್ ಹೇಳಿದರು. ಅದರೂ, ಧೈರ್ಯ ಮಾಡಿ ಬಾಗಿಲಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಚಿರತೆಯ ಕಡೆಗೆ ನುಗ್ಗಿದರು. ಅಲ್ಲದೆ, ಬಂಡೆಯಂತೆ ನಿಂತ ತಂದೆ ಚಿರತೆ ತಾನು ಹಿಡಿದುಕೊಂಡಿದ್ದ ಮಗುವನ್ನು ಬೀಳಿಸುವಂತೆ ಮಾಡಿದರು. ಆದರೆ ಅದು ಶೀಘ್ರದಲ್ಲೇ ಹತ್ತಿರದಲ್ಲಿ ಮಲಗಿದ್ದ ಐದು ವರ್ಷದ ಕಾವ್ಯ ಎಂಬ ಇನ್ನೊಬ್ಬ ಮಗಳನ್ನು ತನ್ನ ಬಾಯಲ್ಲಿ ಹಿಡಿದುಕೊಂಡಿತು ಎಂದೂ ತಿಳಿದುಬಂದಿದೆ.

ಈ ಬಾರಿ ಚಿರತೆ ತನ್ನ ಬಾಯಲ್ಲಿ ಬಾಲಕಿಯನ್ನು ಹಿಡಿದುಕೊಂಡು ಮನೆಯಿಂದ ಹೊರಗೆ ಹೋಗಿದ್ದು, ಆದರೆ ಪಟ್ಟು ಬಿಡದ ತಂದೆ ಅದನ್ನು ಹಿಂಬಾಲಿಸಿಕೊಂಡು ದಟ್ಟ ಕಾಡಿಗೂ ಹೋಗಿ ಚಿರತೆಯೊಂದಿಗೆ ಬರಿಗೈಯಲ್ಲೇ ಹೋರಾಡಿ ಮಗಳನ್ನು ಬಿಡಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಈ ಘಟನೆಯಲ್ಲಿ ಇಬ್ಬರು ಹುಡುಗಿಯರಿಗೆ ತಲೆ, ಮುಖದ ಮೇಲೆ ಗಾಯಗಳಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಹಣೆ ಮೇಲೆ ಗಂಡನ ಹೆಸರನ್ನು ಹಚ್ಚೆ ಹಾಕಿಸಿಕೊಂಡ ಬೆಂಗಳೂರು ಮಹಿಳೆ: ಇದ್ಯಾವ ಸೀಮೆ ಪ್ರೀತಿ ಎಂದ ನೆಟ್ಟಿಗರು!

ಈ ಸಂಬಂಧ ತಂದೆಯನ್ನು ಶ್ಲಾಘಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ತೋಮರ್, ದಾಮೋರ್ ಚಿರತೆಯೊಂದಿಗೆ ಹೋರಾಡಿದನು ಮತ್ತು ಕತ್ತಲೆಯಲ್ಲೇ ತನ್ನ ಮಗುವನ್ನು ರಕ್ಷಿಸಲು ಬರಿಗೈಯಲ್ಲಿ ಹೋರಾಡಿದನು. ಅದರ ಪ್ರದೇಶದಲ್ಲೇ ಚಿರತೆ ಹಿಡಿಯುವುದು ಅತ್ಯಂತ ಧೈರ್ಯಶಾಲಿ ಕಾರ್ಯವಾಗಿದೆ" ಎಂದು ಪ್ರಶಾಂತ್ ತೋಮರ್ ತಿಳಿಸಿದರು.

ಕೆಲವು ಸೆಕೆಂಡುಗಳ ಕಾಲ ಅದರೊಂದಿಗೆ ಕಾದಾಡಿದ ನಂತರ, ದಾಮೋರ್ ಚಿರತೆಯ ಮೇಲೆ ಬಟ್ಟೆಯ ತುಂಡನ್ನು ಎಸೆದರು, ಇದರಿಂದ ಚಿರತೆಗೆ ಭಯ ಆಯ್ತು. ಹತ್ತಿರದ ಪೊದೆಗಳಲ್ಲಿ ಕಣ್ಮರೆಯಾಗುವ ಮೊದಲು ಅದು ಹುಡುಗಿಯನ್ನು ತನ್ನ ಹಲ್ಲಿನಿಂದ ಬೀಳಿಸಿತು. ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರೂ ದಾಮೋರ್ ಮನೆಗೆ ಧಾವಿಸಿದ್ದಾರೆ. ಕಾದಾಡಿದ ತಂದೆ ಸಣ್ಣಪುಟ್ಟ ಗಾಯಗಳನ್ನು ಅನುಭವಿಸಿದರು. ಆದರೆ, ಇಬ್ಬರು ಮಕ್ಕಳನ್ನು ಕಾಪಾಡಿದ್ದು, ಅವರೂ ಸಹ ಬಚಾವಾಗಿದ್ದಾರೆ.

ಇದನ್ನೂ ಓದಿ: ಇದೆಂತ ಕಾಲ ಬಂತಪ್ಪಾ? ಜನ ಸಾಮಾನ್ಯರು ಬಳಸೋ ಹಗ್ಗದ ಮಂಚಕ್ಕೂ ಇಷ್ಟೊಂದು ಬೆಲೆ!

ಈ ಮಧ್ಯೆ, ಅರಣ್ಯ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ಹಿಡಿಯಲು ಪಂಜರವನ್ನು ಇರಿಸಿದ್ದು, ಇಬ್ಬರೂ ಬಾಲಕಿಯರ ಮುಖ ಮತ್ತು ತಲೆಯ ಮೇಲೆ ಗಾಯಗಳಾಗಿವೆ ಮತ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: 3ನೇ ಮಗುವಿಗೆ ಜನ್ಮ ನೀಡಿದ ಮಾರ್ಕ್‌ ಜುಕರ್‌ಬರ್ಗ್‌ ಪತ್ನಿ: ತುಂಬಾ ಕಷ್ಟಪಡ್ತಿದ್ದೀರಾ ಎಂದು ಕಾಲೆಳೆದ ನೆಟ್ಟಿಗರು

click me!