ಅರ್ಚಕನಿಂದ ಕೊರೋನಾ ದೇವಿಗೆ ಪೂಜೆ: ಥರ್ಮಕೋಲ್‌ ಮೂರ್ತಿಗೆ ದಿನನಿತ್ಯ ಪೂಜೆ!

By Suvarna NewsFirst Published Jun 15, 2020, 12:38 PM IST
Highlights

ಕೇರಳ ಅರ್ಚಕನಿಂದ ಕೊರೋನಾ ದೇವಿಗೆ ಪೂಜೆ!| ಥರ್ಮಕೋಲ್‌ನಿಂದ ಕೊರೋನಾ ಮೂರ್ತಿ ಮಾಡಿ ದಿನನಿತ್ಯ ಪೂಜೆ|  ಕೋವಿಡ್‌ ವಾರಿಯರ್ಸ್‌ಗಾಗಿ ಪ್ರಾರ್ಥನೆ

ಕೊಲ್ಲಂ(ಜೂ.15): ಕಣ್ಣಿಗೆ ಕಾಣದ ಮಹಾಮಾರಿ ಕೊರೋನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದರೆ, ಅದೇ ವೈರಾಣುವಿಗೆ ‘ಕೊರೋನಾ ದೇವಿ’ ಎಂದು ಹೆಸರಿಟ್ಟು ಕೇರಳ ಅರ್ಚಕರೊಬ್ಬರು ದಿನನಿತ್ಯ ಪ್ರಾರ್ಥನೆ ನಡೆಸುತ್ತಿದ್ದಾರೆ. ಕೊಲ್ಲಂ ಜಿಲ್ಲೆಯ ಕಡಕ್ಕಲ್‌ ನಿವಾಸಿ ಅನಿಲನ್‌ ಎಂಬವರೇ ಕೊರೋನಾ ದೇವಿಗೆ ಪೂಜೆ ಸಲ್ಲಿಸುತ್ತಿರುವ ವ್ಯಕ್ತಿ. ಥರ್ಮಕೋಲ್‌ನಿಂದ ವೈರಾಣುವಿನ ಚಿತ್ರ ರಚಿಸಿ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಅವರು, ದಿನನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.

ಕೋರೋನಾ ಮಹಾದೇವನ ಚಮತ್ಕಾರ, ಇಲ್ಲಿ ಒಬ್ಬರಿಗೂ ಸೋಂಕಿಲ್ಲ!

ಕೊರೋನಾ ದೇವಿಗೆ ನಾನು ದಿನನಿತ್ಯ ಪೂಜೆ ಸಲ್ಲಿಸುತ್ತಿದ್ದು, ಕೊರೋನಾ ವಿರುದ್ದ ಹೋರಾಟಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಸಿಬ್ಬಂದಿಗಳು, ಪೊಲೀಸ್‌ ಅಧಿಕಾರಿಗಳು, ಲಸಿಕೆ ಕಂಡು ಹಿಡಿಯಲು ಶ್ರಮಿಸುತ್ತಿರುವ ವಿಜ್ಞಾನಿಗಳು, ರಕ್ಷಣಾ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಪ್ರಾರ್ಥನೆ ಮಾಡುತ್ತಿರುವುದಾಗಿ ಅನಿಲನ್‌ ಹೇಳಿದ್ದಾರೆ.

ಕಾಯಿಲೆ ಗುಣಪಡಿಸಿ, ಇಷ್ಟಾರ್ಥ ಪೂರೈಸುವ ಎಟ್ಟಮನೂರ್ ಮಹಾದೇವ!

ಕೊರೋನಾಗೆ ದೇವರ ಸ್ಥಾನ ಕೊಟ್ಟು ಪೂಜೆ ಮಾಡುತ್ತಿರುವ ಅನಿಲನ್‌ ಅವರ ನಡೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಒಳಗಾಗಿದೆ. ಆದರೆ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನನ್ನದು. 33 ಕೋಟಿ ದೇವತೆಗಳಿದ್ದು, ಯಾವ ದೇವರನ್ನು ಪೂಜಿಸಲು ಸಂವಿಧಾನ ನನಗೆ ಹಕ್ಕು ಕೊಟ್ಟಿದೆ. ನಾನು ಕೊರೋನಾ ದೇವಿಯನ್ನು ಪೂಜಿಸುತ್ತೇನೆ ಎಂದು ಅನಿಲನ್‌ ಹೇಳುತ್ತಾರೆ. ಅಲ್ಲದೇ ಈ ಭೀತಿಯ ವೇಳೆಯಲ್ಲಿ ದೇವಸ್ಥಾನ ತೆರೆಯುವ ಸರ್ಕಾರದ ನಿರ್ಧಾರಕ್ಕೆ ತನ್ನ ವಿರೋಧವಿದೆ ಎಂದು ಹೇಳಿದ್ದಾರೆ.

click me!