ಸಾಯ್ತೀನೆಂದು ಸೇತುವೆ ಹತ್ತಿದ, ಬಿರಿಯಾನಿ ಕೊಡುಸ್ತೀವೆಂದ ಕೂಡ್ಲೇ ವಾಪಸ್ ಬಂದ ಭೂಪ!

Published : Jan 23, 2024, 01:11 PM IST
ಸಾಯ್ತೀನೆಂದು ಸೇತುವೆ ಹತ್ತಿದ, ಬಿರಿಯಾನಿ ಕೊಡುಸ್ತೀವೆಂದ ಕೂಡ್ಲೇ ವಾಪಸ್ ಬಂದ ಭೂಪ!

ಸಾರಾಂಶ

ಆತ್ಮಹತ್ಯೆ ಮಾಡಿಕೊಳ್ಳಲು ಜನನಿಬಿಡ ಪ್ರದೇಶದಲ್ಲಿ ಸೇತುವೆ ಹತ್ತಿ ನಿಂತಿದ್ದ 40 ವರ್ಷದ ವ್ಯಕ್ತಿಯೊಬ್ಬ, ಪೋಲೀಸರು ಬಿರಿಯಾನಿ ಕೊಡಿಸುತ್ತೇವೆ ಎನ್ನುತ್ತಿದ್ದಂತೆ ಇಳಿದು ಬಂದ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ!

ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಕೋಲ್ಕತ್ತಾದ ಪಾರ್ಕ್ ಸರ್ಕಸ್‌ನಲ್ಲಿ ಜನನಿಬಿಡ ಸೇತುವೆ ಸಂಖ್ಯೆ 4 ರ ಕಬ್ಬಿಣದ ರಚನೆಯ ಮೇಲೆ ಹತ್ತಿದ್ದ ವ್ಯಕ್ತಿಯೊಬ್ಬನನ್ನು ಪೋಲೀಸರು ಬಿರಿಯಾನಿ ಆಮಿಷ ತೋರಿಸಿ ಕೆಳಗಿಳಿಸಿದ ಘಟನೆ ನಡೆದಿದೆ. 
ಸೋಮವಾರ ಮಧ್ಯಾಹ್ನ 2.40 ರ ಸುಮಾರಿಗೆ 40 ವರ್ಷದ ವ್ಯಕ್ತಿಯೊಬ್ಬರು ಕೋಲ್ಕತ್ತಾದ ಸೇತುವೆಯೊಂದರ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಇದರಿಂದ ಈ ಪ್ರದೇಶದಲ್ಲಿ ಸುಮಾರು 20 ನಿಮಿಷಗಳ ಕಾಲ  ವಾಹನ ಸಂಚಾರ ವ್ಯತ್ಯಯಗೊಂಡಿತು. 

ನಂತರ ಅಲ್ಲಿಗೆ ಬಂದ ಕರಾಯ ಪೋಲಿಸ್ ಮತ್ತು ಈಸ್ಟ್ ಗಾರ್ಡ್‌ನ ಜಂಟಿ ತಂಡವು ಏನೇ ಹೇಳಿದರೂ ಈತ ಮಾತು ಕೇಳಲಿಲ್ಲ. ಕಡೆಗೆ ಒಳ್ಳೆಯ ರೆಸ್ಟೋರೆಂಟ್‌ನಿಂದ ಬಿರಿಯಾನಿ ತರಿಸಿ ಕೊಡುವುದಾಗಿ ಪೋಲೀಸರು ಹೇಳುತ್ತಿದ್ದಂತೆಯೇ ವ್ಯಕ್ತಿ ಸೇತುವೆ ಕಂಬಿಗಳನ್ನಿಳಿದು ಕೆಳಗ್ಗೆ ಬಂದಿದ್ದಾನೆ.

ಟೈಲ್ಸ್ ವ್ಯಾಪಾರವನ್ನು ನಡೆಸುತ್ತಿದ್ದ ಈತ ಇತ್ತೀಚೆಗೆ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಎನ್ನಲಾಗಿದೆ. 

ಸೋಮವಾರ ಮಗಳೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಆತ, ಸೇತುವೆ ಬಳಿ ವಾಹನ ನಿಲ್ಲಿಸಿ, ಮಗಳಿಗೆ ತನ್ನ ಫೋನ್ ಬಿದ್ದು ಹೋಗಿದೆ ಹುಡುಕಬೇಕು ಎಂದ. ನಂತರ ಇದ್ದಕ್ಕಿದ್ದಂತೆ ಸೇತುವೆ ಏರತೊಡಗಿದ. ಕಡೆಗೆ ಅದರ ತುದಿ ತಲುಪಿದ ಆತನೇನಾದರೂ ಬಿದ್ದಿದ್ದರೆ, ಕೆಳಗೆ ವಿದ್ಯುತ್ ಕಂಬಿಗಳಿಗೋ ಅಥವಾ ರೈಲಿನ ಟ್ರ್ಯಾಕ್‌ ಮೇಲೋ ಬಿದ್ದು ಸಾಯುತ್ತಿದ್ದ ಎಂದು ಪೋಲೀಸರು ತಿಳಿಸಿದ್ದಾರೆ. 

ವಿಷಯ ಹಾಸ್ಯಾಸ್ಪದವೋ, ಗಂಭೀರವೋ- ಬಿರಿಯಾನಿ ಮಹಿಮೆಯಂತೂ ಅಸಾಧಾರಣವೇ ಸರಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ