
ಶಿಮ್ಲಾ(ಜೂ.07): ಕೇರಳದ ಮಲಪ್ಪುರಂನಲ್ಲಿ ಗರ್ಭಿಣಿ ಆನೆಗೆ ಸ್ಫೋಟಕ ತುಂಬಿದ್ದ ಹಣ್ಣು ತಿನ್ನಿಸಿ ಅದು ಸಾವನ್ನಪ್ಪಿದ್ದ ಹೃದಯ ವಿದ್ರಾವಕ ಘಟನೆ ಬೆನ್ನಲ್ಲೇ ಹಿಮಾಚಲ ಪ್ರದೇಶದಲ್ಲಿ ಗರ್ಭಿಣಿ ಹಸುವೊಂದಕ್ಕೆ ಸ್ಪೋಟಕ ತಿನ್ನಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿತ್ತು. ಈ ಘಟನೆ ಬೆನ್ನಲ್ಲೇ ಕ್ರೌರ್ಯ ಮೆರೆದ ರಕ್ಕಸರನ್ನು ಬಂಧಿಸುವಂತೆ ಭಾರೀ ಕೂಗೆತದ್ದಿತ್ತು. ಇದರ ಬೆನ್ನಲ್ಲೇ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಓರ್ವ ಆರೋಪಿಯನ್ನು ಬಂಧಿಇಸಿದ್ದಾರರೆ.
ಹೌದು ಇಲ್ಲಿನ ಬಿಲಸಾಪಪುರ ಜಿಲ್ಲೆಯಲ್ಲಿ ಮುಗ್ಧ ಗರ್ಭಿಣಿ ಹಸುವೊಂದಕ್ಕೆ ಪಟಾಕಿ ತುಂಬಿದ್ದ ಹುಲ್ಲು ತಿನ್ನಲು ಕೊಡಲಾಗಿತ್ತು. ಇದನ್ನರಿಯ ಮುಗ್ದ ಹಸು ಅಗೆದಿದ್ದು, ಕೂಡಲೇ ಮುಖ ಸ್ಪೋಟಗೊಂಡು ಅದರ ಮುಖ ರಕ್ತ ಸಿಕ್ತಗೊಂಡಿದೆ. ಈ ಘಟನೆ ಮೇ 25ರಂದು ನಡೆದಿದೆ ಎನ್ನಲಾಗಿದ್ದು, ಯಾರೋ ಓರ್ವ ವ್ಯಕ್ತಿ ಜೂನ್ ಐದರಂfದು ಹಸುವಿನ ವಿಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದ. ಇದರ ಬೆನ್ನಲ್ಲೇ ಸ್ಪೋಟಕ ತಿನ್ನಿಸಿfದ ಕೀಚಕನನ್ನು ಬಂಧಿಸಬೇಕೆಂಬ ಕೂಗೆದ್ದಿತ್ತು.
ಆನೆ ಹತ್ಯೆ ಬೆನ್ನಲ್ಲೇ ಮತ್ತೊಂದು ಘಟನೆ; ಸ್ಫೋಟಕ ಜಗಿದು ನರಳಾಡುತ್ತಿದೆ ಗರ್ಭಿಣಿ ದನ!
ಕೂಡಲೇ ವೈರಲ್ ಆದ ವಿಡಿಯೋ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲಿಸರು ಹಸುವಿನ ಮಾಲೀಕನನ್ನು ಹುಡುಕಿದ್ದಾರೆ. ವಿಚಾರಣೆ ನಡೆಸಿದಾಗ ಮಾಲೀಕ ಗುರುಚರಣ್ ಸಿಂಗ್ ನೆರೆ ಮನೆಯಾತನ ಮೇಲೆ ಸಂಶಯವಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ನೆರೆ ಮನೆ ವ್ಯಕ್ತಿ ಕಾಡು ಪ್ರಾಣಿಗಳ ಉಪಟಳ ತಡೆಯಲಾರದೆ ಸ್ಫೋಟಕವಿಡುತ್ತಿದ್ದು, ಇದನ್ನರಿಯದ ಹಸು ತಿಂದಿರಬಹುದೆಂದು ತಿಳಿಸಿದ್ದಾರೆ. ಈ ಆಧಾರದ ಮೇಲೆ ಪೊಲೀಸರು ಗುರುಚರಣ್ ಸಿಂಗ್ ಸೂಚಿಸಿರುವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಗಾಯಗೊಂಡ ಹಸು, ಗುಂಡಿಗೆ ಗಟ್ಟಿ ಇರುವವರಷ್ಟೇ ಈ ವಿಡಿಯೋ ನೋಡಿ!
ಇನ್ನು ಗುರುಚರಣ್ ಸಿಂಗ್ ಮೂರು ಹಸುಗಳನ್ನು ಸಾಕಿದ್ದು, ಅವುಗಳನ್ನು ಮೇವಿಗಾಗಿ ಹತ್ತಿರದ ಹೊಲಗಳಿಗೆ ಬಿಡುತ್ತಿದ್ದ. ಮೇ. 25 ರಂದು ಕೇವಲ ಎರಡು ಹಸುಗಳಷ್ಟೇ ಮನೆಗೆ ಮರಳಿದ್ದವು. ಹೀಗಿರುವಾಗ ಗಾಬರಿಗೊಂಡ ಗುರುಚರಣ್ ಹಾಗೂ ಅವರ ಮನೆಯವರೆಲ್ಲಾ ಹಸುವನ್ನು ಹುಡುಕಾಡಲು ತೆರಳಿದ್ದರು. ಹೀಗಿರುವಾಗ ಒಂದೆಡೆ ಹಸು ಇರುವುದು ಕಂಡು ಬಂದಿದ್ದು, ಹತ್ತಿರ ಓಗಿ ನೋಡಿದಾಗ ವಿಚಾರ ಬಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ