ಮಹಾರಾಷ್ಟ್ರದಿಂದ ಭಾರತಕ್ಕೆ ಕೋವಿಡ್ 4ನೇ ಅಲೆ ಭೀತಿ, ಒಂದೇ ದಿನ 23 BA.4, BA.5 ವೈರಸ್ ಪತ್ತೆ!

By Suvarna NewsFirst Published Jun 25, 2022, 9:26 PM IST
Highlights
  • ಒಮಿಕ್ರಾನ್ ಉಪತಳಿ BA.4 ಹಾಗೂ BA.5 ಪ್ರಕರಣ ಪತ್ತೆ
  • ಮತ್ತೆ ಮಹಾರಾಷ್ಟ್ರದಿಂದಲೇ ಭಾರತಕ್ಕೆ ಕಾದಿದೆ ಆಪತ್ತು
  • ಇಂದು ದೇಶದಲ್ಲಿ 15,940 ಕೋವಿಡ್ ಪ್ರಕರಣ ಪತ್ತೆ

ನವದೆಹಲಿ(ಜೂ.25): ಭಾರತದಲ್ಲಿ ಕೊರೋನಾ ಪ್ರಕರಣ ಒಂದೇ ದಿನ ಹೆಚ್ಚಾಗಿ ಇದೀಗ ಇಳಿಕೆ ಕಂಡಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 15,940 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನ 23 ಓಮಿಕ್ರಾನ್ ಉಪತಳಿ BA.4, BA.5 ವೈರಸ್ ಪತ್ತೆಯಾಗಿದೆ.

ಮಹಾರಾಷ್ಟ್ರದಿಂದಲೇ ಮತ್ತೊಂದು ಅಲೆ ಸೃಷ್ಟಿಯಾಗುವ ಸಾಧ್ಯತೆಗಳು ಕಾಣಿಸುತ್ತಿದೆ. ಓಮಿಕ್ರಾನ್ ಉಪತಳಿ ಭಾರತದಲ್ಲಿ ಹೆಚ್ಚಾಗಿ ಸದ್ದು ಮಾಡಿರಲಿಲ್ಲ. ಆದರೆ ಕೊರೋನಾ ಪ್ರಕರಣ ಏರಿಕೆಯಾಗುತ್ತಿರವ ಬೆನ್ನಲ್ಲೇ ಓಮಿಕ್ರಾನ್ ಉಪತಳಿಗಳ ದಾಳಿ ಹೆಚ್ಚಾಗುತ್ತಿದೆ. ಇಂದು ಮಹಾರಾಷ್ಟ್ರದಲ್ಲಿ ಪತ್ತೆಯಾದ 23 ಉಪತಳಿ ಪ್ರಕರಣಗಳಲ್ಲಿ 12 ಮಹಿಳೆಯರಾಗಿದ್ದಾರೆ.

ಕರ್ನಾಟಕದಲ್ಲಿ ಓಮಿಕ್ರಾನ್ ಆತಂಕ, ಯುಕೆಯಲ್ಲಿ 2 ಲಕ್ಷ ಕೋವಿಡ್ ಕೇಸ್ ದಾಖಲು!

23 ಓಮಿಕ್ರಾನ್ ಉಪತಳಿ ಪ್ರಕರಣಗಳಲ್ಲಿ 18 ರಿಂದ 25 ವರ್ಷ ವಯಸ್ಸಿನ ಇಬ್ಬರಿದ್ದಾರೆ. ಇನ್ನು 9 ಮಂದಿ 26 ರಿಂದ 50 ವರ್ಷದೊಳಗಿನವರಾಗಿದ್ದಾರೆ. ಇನ್ನುಳಿದ 11 ಮಂದಿ 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಉಪತಳಿಗಳ ಪ್ರಕರಣ 49ಕ್ಕೆ ಏರಿಕೆಯಾಗಿದೆ.

ಓಮಿಕ್ರಾನ್ ಉಪತಳಿ  BA.4, BA.5 ವೈರಸ್ ಅತೀ ಬೇಗನೆ ಹರಡುವಿಕೆ ಸಾಮರ್ಥ್ಯ ಹೊಂದಿದೆ. ಆದರೆ ಈಗ ಪತ್ತೆಯಾಗಿರುವ ಬಹುತೇಕ ಪ್ರಕರಣಗಳು ಮೈಲ್ಡ್ ಆಗಿವೆ. ಹೀಗಾಗಿ ಆಸ್ಪತ್ರೆ ದಾಖಲಾಗುವ ಸಂಭವ ಕಡಿಮೆ. ಇದು ಸಮಾಧಾನಕರವಾಗಿದೆ.

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಶುಕ್ರವಾರಕ್ಕೆ ಹೋಲಿಸಿದರೆ ಕೊಂಚ ಇಳಿಕೆ ಕಂಡುಬಂದಿದ್ದು, ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 15,940 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಶುಕ್ರವಾರ 17,336 ಹೊಸ ಕೇಸುಗಳು ದಾಖಲಾಗಿದ್ದವು.

ಇದೇ ವೇಳೆಯಲ್ಲಿ 20 ಸೋಂಕಿತರು ಸಾವನ್ನಪ್ಪಿದ್ದಾರೆ. ಕೇರಳದಲ್ಲಿ 11, ಮಹಾರಾಷ್ಟ್ರದಲ್ಲಿ 3, ಪಶ್ಚಿಮ ಬಂಗಾಳದಲ್ಲಿ 2, ಬಿಹಾರ್‌, ದೆಹಲಿ, ಪಂಜಾಬ್‌, ರಾಜಸ್ಥಾನದಲ್ಲಿ ತಲಾ ಒಬ್ಬ ಸೋಂಕಿತ ಸಾವಿಗೀಡಾಗಿದ್ದಾನೆ. ಗುಣಮುಖರಾದವರ ಸಂಖ್ಯೆಯು ಕಡಿಮೆಯಿದ್ದ ಕಾರಣ, ಸಕ್ರಿಯ ಕೇಸು ಸಂಖ್ಯೆ 3,495ರಷ್ಟುಏರಿಕೆಯಾಗಿದ್ದು, ಇದರೊಂದಿಗೆ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 91,779ಕ್ಕೆ ಏರಿಕೆಯಾಗಿದೆ.

ಯೂರೋಪ್, ಅಮೆರಿಕ, ಕೆನಡಾ ಒಟ್ಟು ವ್ಯಾಕ್ಸಿನೇಷನ್ ಹಿಂದಿಕ್ಕುವತ್ತ ಭಾರತ, ಲಸಿಕೆ ಮೈಲಿಗಲ್ಲು!

ದೈನಂದಿನ ಪಾಸಿಟಿವಿಟಿ ದರವು ಶುಕ್ರವಾರದ ಶೇ.4.32ರಿಂದ ಶೇ. 4.39ಕ್ಕೆ ಏರಿದೆ. ವಾರದ ಪಾಸಿಟಿವಿಟಿ ದರವು ಶೇ. 3.30ರಷ್ಟಿದೆ. ಕೋವಿಡ್‌ ಚೇತರಿಕೆ ದರವು ಶೇ. 98.58ಕ್ಕೆ ಇಳಿಕೆಯಾಗಿದೆ. ದೇಶದಲ್ಲಿ ಈವರೆಗೆ 196.94 ಕೋಟಿ ಡೋಸು ಕೋವಿಡ್‌ ಲಸಿಕೆಯನ್ನು ವಿತರಿಸಲಾಗಿದೆ.

ಬೆಂಗಳೂರು ನಗರದಲ್ಲಿ ಶುಕ್ರವಾರ 776 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಪಾಸಿಟಿವಿಟಿ ದರ ಶೇ.4.34ಕ್ಕೆ ಏರಿದೆ. 665 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕಿನಿಂದ ಮೃತಪಟ್ಟವರದಿಯಾಗಿಲ್ಲ.

ನಗರದಲ್ಲಿ ಸದ್ಯ 4,929 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 69 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 11 ಮಂದಿ ಐಸಿಯು ಮತ್ತು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10,851 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 965 ಮಂದಿ ಮೊದಲ ಡೋಸ್‌, 5496 ಮಂದಿ ಎರಡನೇ ಡೋಸ್‌ ಮತ್ತು 4390 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ.
 

click me!