
ಮುಂಬೈ(ಜೂ.28): ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿರುವ ಕಾರಣ, ಕೋರ್ಟ್‌ನ ಮುಂದಿನ ವಿಚಾರಣೆ ನಿಗದಿ ಆಗಿರುವ ಜುಲೈ 11ರೊಳಗೆ ವಿಶ್ವಾಸಮತ ಸಾಬೀತಿಗೆ ರಾಜ್ಯಪಾಲರು, ಉದ್ಧವ್ ಠಾಕ್ರೆ ಸರ್ಕಾರಕ್ಕೆ ಸೂಚಿಸಬಹುದು ಎಂದು ಮೂಲಗಳು ಹೇಳಿವೆ.
‘ಬುಧವಾರ ಬಂಡಾಯ ಶಿವಸೇನೆ ನಾಯಕ ಏಕನಾಥ ಶಿಂಧೆ ಬಣ ಗುವಾಹಟಿಯಿಂದ ಮುಂಬೈಗೆ ಮರಳಬಹುದು. ಆಗ ಸುಪ್ರೀಂ ಕೋರ್ಚ್ ಆದೇಶವನ್ನೇ ಆಧಾರವಾಗಿ ಇರಿಸಿಕೊಂಡು ವಿಶ್ವಾಸಮತ ಯಾಚನೆಗೆ ಸದನ ಕರೆಯಿರಿ ಹಾಗೂ ವಿಧಾನಸಭಾಧ್ಯಕ್ಷರ ಹುದ್ದೆ ಖಾಲಿ ಇರುವ ಕಾರಣ ಹಂಗಾಮಿ ಸಭಾಧ್ಯಕ್ಷರನ್ನು ನೇಮಿಸಿ ಎಂದು ಕೋರಬಹುದು. ಶಿಂಧೆ ಬಣ ಅವಿಶ್ವಾಸ ನಿರ್ಣಯಕ್ಕೂ ಮುಂದಾಗಬಹುದು. ಇದು ಆಗದೇ ಹೋದರೆ ಬಿಜೆಪಿಯೇ ವಿಶ್ವಾಸಮತ ಯಾಚನೆಗೆ ಸೂಚಿಸುವಂತೆ ಕೋರಬಹುದು. ಈ ಕೋರಿಕೆ ಆಧರಿಸಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು, ಮೊದಲು ಹಂಗಾಮಿ ಸಭಾಧ್ಯಕ್ಷರನ್ನು ನೇಮಿಸಬಹುದು ಹಾಗೂ ನಂತರ ವಿಶ್ವಾಸಮತ ಯಾಚನೆಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಸೂಚಿಸಬಹುದು’ ಎಂದು ಮೂಲಗಳು ಹೇಳಿವೆ.
ಹಿಂದಿನ ಸಭಾಧ್ಯಕ್ಷ ನಾನಾ ಪಟೋಲೆ ರಾಜೀನಾಮೆ ನಂತರ ವಿಧಾನಸಭೆ ಅಧ್ಯಕ್ಷ ಹುದ್ದೆ ಖಾಲಿ ಇದೆ. ಹೀಗಾಗಿ ಉಪ ಸ್ಪೀಕರ್ ನರಹರಿ ಜೀರ್ವಾಲ್ ಅವರೇ ಸ್ಪೀಕರ್ ಪದವಿ ನಿರ್ವಹಿಸುತ್ತಿದ್ದಾರೆ. ಇನ್ನು ರಾಜ್ಯಪಾಲರಿಗೆ ಸಂವಿಧಾನದ 175(2) ಪರಿಚ್ಛೇದದ ಅಡಿ ಸದನ ಕರೆದು ವಿಶ್ವಾಸಮತ ಸಾಬೀತಿಗೆ ಸರ್ಕಾರಗಳಿಗೆ ಸೂಚಿಸಲು ಅಧಿಕಾರವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ