ಮಹಾರಾಷ್ಟ್ರದಲ್ಲಿ ಬಿಜೆಪಿ ಮುನ್ನಡೆ : ನಾಯಕರಿಗೆ ಟೆನ್ಶನ್ ಹುಟ್ಟಿಸಿದ ಹರ್ಯಾಣ

By Web DeskFirst Published Oct 24, 2019, 10:30 AM IST
Highlights

ಮಹಾರಾಷ್ಟ್ರ ಹಾಗೂ ಹರ್ಯಾಣ ಚುನಾವಣೆ ಫಲಿತಾಂಶಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಎರಡು ರಾಜ್ಯಗಳಲ್ಲಿಯೂ ಸದ್ಯ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದರೆ ಹರ್ಯಾಣ ಫಲಿತಾಂಶ ಕೊಂಚ ಬಿಜೆಪಿ ನಾಯಕರಿಗೆ ತಲೆ ಬಿಸಿ ಹುಟ್ಟಿಸಿದೆ. 

ಹೊಸದಿಲ್ಲಿ [ಅ.24]:  ಮಹಾರಾಷ್ಟ್ರ  ಹಾಗೂ ಹರ್ಯಾಣ ಚುನಾವಣಾ ಫಲಿತಾಂಶ ಭಾರಿ ಕುತೂಹಲ ಮೂಡಿಸಿದ್ದು, ಇನ್ನೇನು ಫಲಿತಾಂಶ ಪ್ರಕಟವಾಗುತ್ತಿದೆ. 

ಸದ್ಯದ ಮಾಹಿತಿಯ ಪ್ರಕಾರ ಮಹಾರಾಷ್ಟ್ರದಲ್ಲಿ ಸದ್ಯ ಅಧಿಕಾರದಲ್ಲಿ ಇರುವ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. 

ಬಿಜೆಪಿ-ಶಿವಸೇನೆ ಮೈತ್ರಿ ಸದ್ಯ 180 ಸ್ಥಾನ ಪಡೆದುಕೊಂಡಿದ್ದು ಕಾಂಗ್ರೆಸ್ 88 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು 19 ಸ್ಥಾನದಲ್ಲಿ ಇತರರು ಮುಂದಿದ್ದಾರೆ.

ಇನ್ನು ಹರ್ಯಾಣದಲ್ಲಿಯೂ ಕೂಡ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಸದ್ಯ 40 ಸ್ಥಾನದಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದರೆ ಕಾಂಗ್ರೆಸ್ 33 ಹಾಗೂ ಪಕ್ಷೇತರರು 17 ಸ್ಥಾನದಲ್ಲಿ ಮುಂದಿದ್ದಾರೆ. 

 ಇನ್ನು ಸ್ಪಷ್ಟ ಬಹುಮತ ಬರುವುದು ಡೌಟ್ ಆಗಿದ್ದು, ನಾಯಕರಲ್ಲಿ ಕೊಂಚ ಮಟ್ಟಿನ ಚಿಂತೆ ಕಾಡುವಂತಾಗಿದೆ. 

click me!