ಮಹಾರಾಷ್ಟ್ರ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ; ಭಾಷೆ ಬರದಿದ್ರೆ ಪರವಾನಗಿ ರದ್ದು

Published : Apr 15, 2026, 10:22 AM IST
Maharashtra Auto

ಸಾರಾಂಶ

ಮಹಾರಾಷ್ಟ್ರ ಸರ್ಕಾರವು ರಾಜ್ಯದ ಎಲ್ಲಾ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರುವುದನ್ನು ಕಡ್ಡಾಯಗೊಳಿಸಿದೆ. ಈ ನಿಯಮವನ್ನು ಪಾಲಿಸದ ಚಾಲಕರ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಸಾರಿಗೆ ಸಚಿವರು ಘೋಷಿಸಿದ್ದಾರೆ.

ಮರಾಠಿ ಜ್ಞಾನ ಇಲ್ಲದಿದ್ದರೆ ಪರವಾನಗಿ ರದ್ದು

ಥಾಣೆ: ಮಹಾರಾಷ್ಟ್ರದ ಎಲ್ಲಾ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಮರಾಠಿ ಭಾಷೆ, ಓದಲು, ಬರೆಯಲು, ಮಾತನಾಡಲು ಕಲಿತಿರುವುದು ಕಡ್ಡಾಯ. ಒಂದು ವೇಳೆ ಮಾತನಾಡಲು ಬರದೇ ಇದ್ದರೆ ಅವರ ಲೈಸೆನ್ಸ್‌ ಅನ್ನು ರದ್ದುಪಡಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ.ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಸಾರಿಗೆ ಖಾತೆ ಸಚಿವ ಪ್ರತಾಪ್‌ ಸರ್‌ನಾಯಕ್‌, ‘ರಾಜ್ಯದ ಟಾಕ್ಸಿ, ಆಟೋ ಚಾಲಕರಿಗೆ ಮರಾಠಿ ಕಡ್ಡಾಯ ಗೊತ್ತಿರಬೇಕು ಎಂಬ ನಿಯಮ ಈಗಾಗಲೇ ಇದೆ. ಆದರೆ ಅದನ್ನು ಯಾರೂ ಪಾಲಿಸುತ್ತಿಲ್ಲ. ಈ ಬಗ್ಗೆ ಅವರಲ್ಲಿ ಅರಿವು ಮೂಡಿಸಲು ರಾಜ್ಯವ್ಯಾಪಿ ದೊಡ್ಡ ಮಟ್ಟದಲ್ಲಿ ಅಭಿಯಾನ ನಡೆಸಲಾಗುವುದು. ಮೇ.1ರಿಂದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಯಾರಿಗೆ ಮರಾಠಿ ಗೊತ್ತಿಲ್ಲವೋ ಅವರಿಗೆ ನೀಡಿರುವ ಪರವಾನಗಿ ರದ್ದುಪಡಿಸಲಾಗುವುದು’ ಎಂದು ಹೇಳಿದ್ದಾರೆ.

ಸ್ಥಳೀಯ ಭಾಷೆ ಜ್ಞಾನ ಅಗತ್ಯ

ಪ್ರಾದೇಶಿಕ ಕಚೇರಿಗಳಲ್ಲಿ ನಡೆಸುವ ಅಭಿಯಾನದ ವೇಳೆ ಚಾಲಕರಿಗೆ ಮರಾಠಿ ಓದಲು, ಬರೆಯಲು ಬರುತ್ತದೆಯೇ ಎಂದು ಪರಿಶೀಲಿಸಲಿದ್ದಾರೆ. ಪರವಾನಗಿ ನೀಡಲು ಸ್ಥಳೀಯ ಭಾಷೆ ಜ್ಞಾನ ಅಗತ್ಯ ಎಂಬ ನಿಯಮವಿದ್ದರೂ ಅದನ್ನು ವ್ಯಾಪಕವಾಗಿ ಉಲ್ಲಂಘಿಸಲಾಗುತ್ತಿದೆ’ ಎಂದು ಪ್ರತಾಪ್‌ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರಾಚ್ಯ ಯುದ್ಧದಿಂದ 25 ಲಕ್ಷ ಭಾರತೀಯರಿಗೆ ಬಡತನ; ಆಹಾರ ಅಭದ್ರತೆ, ಮಾನವ ಅಭಿವೃದ್ಧಿ ಕುಂಠಿತ

‘ಮಾತೃಭಾಷೆಗೆ ಮಹತ್ವ ನೀಡುವ ಜತೆಗೆ ಕೆಲಸ ಮಾಡುವ ರಾಜ್ಯದ ಭಾಷೆ ಕಲಿತು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಮರಾಠಿ ಕಡ್ಡಾಯ ಕೇವಲ ಚಾಲಕರಿಗೆ ಮಾತ್ರ ಸೀಮಿತವಲ್ಲ’ ಎಂದಿದ್ದಾರೆ.

ಇದನ್ನೂ ಓದಿ: ₹7.50 ಲಕ್ಷ ಮೌಲ್ಯದ ₹2000 ಖೋಟಾ ನೋಟು ಬದಲಿಸಿಕೊಳ್ಳಲು ಬೆಂಗಳೂರಿನ RBIಗೆ ಬಂದ; ಮುಂದೇನಾಯ್ತು?

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್ಪೊರೇಟ್ ಜಿಹಾದ್ ಗುಟ್ಟು ರಟ್ಟಾಗಿದ್ದೇಗೆ? ಪೊಲೀಸರ ಮಾರುವೇಷದ ಕಾರ್ಯಾಚರಣೆ ಹೇಗಿತ್ತು?
180ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: 350 ಅಶ್ಲೀಲ ವೀಡಿಯೋ ಇಟ್ಕೊಂಡು ಬ್ಲಾಕ್‌ಮೇಲ್ ಮಾಡ್ತಿದ್ದ ಅಯಾಜ್ ಅರೆಸ್ಟ್