ಆಯೋಧ್ಯೆ ರಾಮ ಮಂದಿರ ಜನವರಿ 22ರಂದು ಉದ್ಘಾಟನೆಯಾಗುತ್ತಿದೆ. ಇದೀಗ ಮಹಾರಾಷ್ಟ್ರೀಯ ಸಿಎಂ ಎಕನಾಥ್ ಶಿಂದೆ ನೇತೃತ್ವದ ಶಿವಸೇನೆ, ಆಯೋಧ್ಯೆ ರಾಮ ಮಂದಿರಕ್ಕೆ 11 ಕೋಟಿ ರೂಪಾಯಿ ದೇಣಿಗೆ ನೀಡಿದೆ.
ಆಯೋಧ್ಯೆ(ಜ.07) ಭವ್ಯ ರಾಮ ಮಂದಿರ ಉದ್ಘಾಟನೆಗೆ ಕೆಲವೇ ದಿನ ಬಾಕಿ. ಬರೋಬ್ಬರಿ 500ಕ್ಕೂ ಹೆಚ್ಚು ವರ್ಷಗಳ ಸಂಘರ್ಷದ ಬಳಿಕ ಶ್ರೀರಾಮ ಮತ್ತೆ ಭವ್ಯ ಮಂದಿರದಲ್ಲಿ ವಿರಾಜಮಾನನಾಗುತ್ತಿದ್ದಾನೆ. ಐತಿಹಾಸಿಕ ಕ್ಷಣಕ್ಕೆ ವಿಶ್ವವೇ ಕಾತರಗೊಂಡಿದೆ. ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಆಯೋಧ್ಯೆ ರಾಮ ಮಂದಿರಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಎಕನಾಥ್ ಶಿಂದೆ ನೇತೃತ್ವದ ಶಿವಸೇನೆ ಬಣ 11 ಕೋಟಿ ರೂಪಾಯಿ ದೇಣಿಗೆ ನೀಡಿದೆ. ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ನೆರವಾಗಲು ಶಿಂಧೆ ಶಿವಸೇನೆ ಬಣ 11 ಕೋಟಿ ರೂಪಾಯಿ ದೇಣಿಗೆ ನೀಡಿದೆ.
ಏಕನಾಥ್ ಶಿಂಧೆ ಪುತ್ರ, ಕಲ್ಯಾಣ ಕ್ಷೇತ್ರದ ಸಂಸದ ಶ್ರೀಕಾಂತ್ ಶಿಂದೆ ಹಾಗೂ ನಿಯೋಗ ಇಂದು ಆಯೋಧ್ಯೆಗೆ ಭೇಟಿ ನೀಡಿದೆ. ಈ ವೇಳೆ ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಬೇಟಿಯಾಗಿ 11 ಕೋಟಿ ರೂಪಾಯಿ ಚೆಕ್ ವಿತರಿಸಿದ್ದಾರೆ. ಈ ವೇಳೆ ಮಹಾರಾಷ್ಟ್ರ ಕೈಗಾರಿಕಾ ಸಚಿವ ಉದಯ್ ಸಮಂತ್ ಸೇರಿದಂತೆ ಶಿವಸೇನೆ ನಾಯಕರು ಭಾಗಿಯಾಗಿದ್ದರು.
undefined
212 ಪಿಲ್ಲರ್, 161 ಅಡಿ ಎತ್ತರ; ಕಬ್ಬಿಣ ಬಳಸದೆ ನಾಗರಶೈಲಿಯಲ್ಲಿ ರಾಮ ಮಂದಿರ ನಿರ್ಮಾಣ!
ದಿವಗಂತ ಬಾಳಾಸಾಹೇಬ್ ಠಾಕ್ರೆ ಸವಿನೆನಪಿನಲ್ಲಿ ಶಿಂಧೆ ನೇತೃತ್ವ ಶಿವಸೇನೆ ಬಣ ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದೇವೆ. ರಾಮಜನ್ಮಭೂಮಿ ಹೋರಾಟದಲ್ಲಿ ಬಾಳಸಾಹೇಬ್ ಠಾಕ್ರೆ ಹಾಗೂ ಅಪಾರ ಶಿವಸೇನೆ ಕಾರ್ಯಕರ್ತರು ಮಹತ್ತರ ಕೊಡುಗೆ ಸಲ್ಲಿಸಿದ್ದಾರೆ. ರಾಮ ಮಂದಿರ ಬಾಳಾಸಾಹೇಬ್ ಠಾಕ್ರೆ ಕನಸಾಗಿತ್ತು. ಇದಕ್ಕಾಗಿ ಹಲವು ಭಾರಿ ಪ್ರಯತ್ನಿಸಿದ್ದರು. ಬಾಬ್ರಿ ಮಸೀದಿ ಧ್ವಂಸವನ್ನು ಬಹಿರಂಗವಾಗಿ ಸಮರ್ಥಿಸಿಕೊಂಡ ಏಕೈಕ ನಾಯಕ ಠಾಕ್ರೆ. ಇದೀಗ ಅವರ ಸವಿನೆನಪಿನಲ್ಲಿ 11 ಕೋಟಿ ರೂಪಾಯಿ ದೇಣಿಗೆ ನೀಡಿದ್ದೇವೆ ಎಂದು ಶಿವಸೇನೆ ವಕ್ತಾರ ಹೇಳಿದ್ದಾರೆ.
ಜನವರಿ 22ರಂದು ಆಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣಪ್ರತಿಷ್ಠೆ ಹಾಗೂ ಉದ್ಘಾಟನೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ರಾಮಲಲ್ಲಾ ವಿಗ್ರ ಪ್ರಾಣಪ್ರತಿಷ್ಠೆ ಮಾಡಲಿದ್ದಾರೆ. ಈಗಾಗಲೇ ರಾಮ ಮಂದಿರದಲ್ಲಿ ಪೂಜಾ ಕಂಕೈರ್ಯಗಳು ಆರಂಭಗೊಂಡಿದೆ. ಮತ್ತೊಂದೆಡೆ ಇಡೀ ಆಯೋಧ್ಯೆ ನಗರ ಸಿಂಗಾರಗೊಂಡಿದೆ. ದೇಶ ವಿದೇಶಗಳಲ್ಲೂ ರಾಮ ಮಂದಿರದ ಸಂಭ್ರಮ ಮನೆ ಮಾಡಿದೆ.
ಇಲ್ಲಿದೆ ಸಾಕ್ಷಿ, ದೇಶದ ಅತಿದೊಡ್ಡ ತೀರ್ಥಕ್ಷೇತ್ರ-ಪ್ರವಾಸಿ ಸ್ಥಳವಾಗುವ ಹಾದಿಯಲ್ಲಿ ಅಯೋಧ್ಯೆ!
ರಾಮ ಮಂದಿರ ಟ್ರಸ್ಟ್ ಈಗಾಗಲೇ ಹಲವು ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಕಮ್ಯೂನಿಸ್ಟ್ ಸೇರಿದಂತೆ ಕೆಲ ನಾಯಕರು ಉದ್ಘಾಟನೆಯಿಂದ ದೂರ ಉಳಿದಿದ್ದರೆ ಕಾಂಗ್ರೆಸ್ ಸೇರಿದಂತೆ ಹಲವು ನಾಯಕರು ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಾಧು ಸಂತರು, ಸ್ವಾಮೀಜಿಗಳು, ಗಣ್ಯರು, ಸೆಲೆಬ್ರೆಟಿಗಳು ಸೇರಿದಂತೆ ಹಲವು ಪ್ರಮುಖರು ಜನವರಿ 22ರಂದು ಆಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಸಾಕ್ಷಿಯಾಗಲಿದ್ದಾರೆ.