ಕೊರೋನಾ ಚಿಕಿತ್ಸೆಗೆ ಆಯೂರ್ವೇದ ಔಷದ ಬಳಸಲು ಸರ್ಕಾರ ಅಸ್ತು!

By Suvarna News  |  First Published Jun 13, 2020, 6:04 PM IST

ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಮಿತೀ ಮೀರಿದೆ. ಸರ್ಕಾರದ ನಿಯಂತ್ರಣಕ್ಕೆ ಸಿಗದೆ ಆತಂಕ ಸೃಷ್ಟಿಸಿದೆ. ಗಲ್ಲಿ ಗಲ್ಲಿಗಳಲ್ಲಿ ಕೊರೋನಾ ಕಾಣಿಸಿಕೊಳ್ಳುತ್ತಿದೆ. ಇತ್ತ ಕೊರೋನಾ ಲಸಿಕೆ ಇನ್ನೂ ಸಂಶೋದನೆ, ಪ್ರಯೋಗದ ಹಂತದಲ್ಲಿದೆ. ಹೀಗಾಗಿ ಕೊರೋನಾ ನಿಯಂತ್ರಣಕ್ಕೆ ಇದೀಗ ಮಹಾರಾಷ್ಟ್ರ ಸರ್ಕಾರ ಆಯುರ್ವೇದದ ಮೊರೆ ಹೋಗಿದೆ.


ಮಹಾರಾಷ್ಟ್ರ(ಜೂ.13): ಕೊರೋನಾ ವೈರಸ್ ನಿಯಂತ್ರಣಕ್ಕೆ ಮಹಾರಾಷ್ಟ್ರ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೆ ನಿಯಂತ್ರಣಕ್ಕೆ ಮಾತ್ರ ಸಿಗುತ್ತಿಲ್ಲ. ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ಮಹಾರಾಷ್ಟ್ರ ಸರ್ಕಾರ ಆಯುರ್ವೇದ ಔಷದಿಯಾದ ಅರ್ಸೆನಿಕ್ ಅಲ್ಬಮ್ 30 ಔಷದಿಯನ್ನು ಕೊರೋನಾ ವೈರಸ್ ವಿರುದ್ದ ಪ್ರಯೋಗಿಸಲು ಮುಂದಾಗಿದೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮನೆಗೆ ಕ್ವಾರಂಟೈನ್ ನೋಟಿಸ್..!...

Latest Videos

undefined

ಜನಸಾಮಾನ್ಯರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ ಕೊರೋನಾ ವೈರಸ್‌ ಬಹುಬೇಗನೆ ತಗುಲದಂತೆ ಮಾಡಲು ಅರ್ಸೆನಿಕ್ ಅಲ್ಬಮ್ 30 ಔಷದಿ ಬಳಸಲು ಮಹಾರಾಷ್ಟ್ರ ಮುಂದಾಗಿದೆ. ಈಗಾಗಲೇ 6 ನಗರಗಳಲ್ಲಿ  ಅರ್ಸೆನಿಕ್ ಅಲ್ಬಮ್ 30 ಬಳಕೆ ಮಾಡಲಾಗುತ್ತಿದೆ ಎಂದು ಆಯುಷ್ ಸಚಿವಾಲಯ ಹೇಳಿದೆ. ಕೇಂದ್ರ ಹೋಮಿಯೋಪಥಿ ಸಂಶೋದನಾ ಸಂಸ್ಥೆ ಅರ್ಸೆನಿಕ್ ಅಲ್ಬಮ್ 30 ಔಷದಿಯನ್ನು ದೆಹಲಿ, ಮುಂಬೈ, ಕೋಲ್ಕತಾ, ಸೂರತ್, ಹೈದರಾಬಾದ್ ನಗರಗಳಲ್ಲಿ ಬಳಕೆ ಮಾಡಲು ಅನುಮತಿ ಕೋರಿದೆ.

ಬೆಂಗ್ಳೂರು ಡಾಕ್ಟರ್‌ಗೆ, ಬಿಎಸ್‌ಎಫ್ ಯೋಧನಿಗೆ ಕೊರೋನಾ ಪಾಸಿಟಿವ್ 

ಇಲ್ಲೀವರೆಗೆ ಅರ್ಸೆನಿಕ್ ಅಲ್ಬಮ್ 30 ಆಯುರ್ವೇದ ಔಷದಿಯಿಂದ ಕೊರೋನಾ ವೈರಸ್‌ ಸೋಂಕಿತರು ಗುಣಮುಖರಾಗುತ್ತಾರೆ ಅನ್ನೋ ಯಾವುದೇ ದಾಖಲೆ ಇಲ್ಲ. ಹೀಗಾಗಿ ಕೆಲ ಹೋಮಿಯೋಪಥಿ ತಜ್ಞರು, ಅರ್ಸೆನಿಕ್ ಅಲ್ಬಮ್ 30 ಔಷದಿ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಮುಂಬೈ ನಗರಗಳಲ್ಲಿ ಹೆಚ್ಚು ಜನಸಾಂದ್ರತೆ ಹೊಂದಿರುವ ವಾರ್ಡ್‌ಗಳಲ್ಲಿ ಅರ್ಸೆನಿಕ್ ಅಲ್ಬಮ್ 30 ಔಷದಿ ನೀಡಲಾಗಿದೆ. ಈ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿ ಅವರನ್ನು ಕೊರೋನಾದಿಂದ ಮುಕ್ತವಾಗಿರಿಸಲು ಪ್ರಯತ್ನಗಳು ನಡಯುತ್ತಿದೆ.

click me!