MP Police Gift ಸೈಕಲ್‌ನಲ್ಲಿ ಫುಡ್ ಡೆಲಿವರಿ ಮಾಡುತ್ತಿದ್ದ ಯುವಕನಿಗೆ ಬೈಕ್ ಗಿಫ್ಟ್ ನೀಡಿದ ಪೊಲೀಸ್!

By Suvarna NewsFirst Published May 2, 2022, 8:06 PM IST
Highlights
  • ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಯುವಕನಿಗೆ ಸ್ಪಂದಿಸಿದ ಪೊಲೀಸ್
  • ಸೈಕಲ್ ತುಳಿದು ಫುಡ್ ಡೆಲಿವರಿ ಮಾಡುತ್ತಿದ್ದ ಯುವಕನಿಗೆ ಬೈಕ್
  • ಕುಟುಂಬದ ಜವಾಬ್ದಾರಿ ಹೊತ್ತ ಯುವಕನ ಕಷ್ಟ ಕೇಳಿದ ಪೊಲೀಸ್

ಇಂದೋರ್(ಮೇ.02): ರಾತ್ರಿ ಪಾಳಿಯಲ್ಲಿ ಫುಡ್ ಡೆಲಿವರಿ ಬಾಯ್, ಸೈಕಲ್ ತುಳಿದು ಆಹಾರ ವಿತರಣೆ. ಇದರಿಂದ ಬರುವು ಸಣ್ಣ ಅದಾಯದಲ್ಲಿ ಜೀವನ ನಿರ್ವಹಣೆಯೇ ಕಷ್ಟವಾಗಿತ್ತು. ಕುಟುಂಬ ಜವಾಬ್ದಾರಿಯೂ ಈತನ ಮೇಲಿತ್ತು. ಈತನ ಪಾಡು ಕಂಡ ಪೊಲೀಸರು ಹೊಚ್ಚ ಹೊಸ ಬೈಕ್ ಉಡುಗೊರೆ ನೀಡಿ ಯವಕನ ಕಷ್ಟಕ್ಕೆ ಸ್ಪಂದಿಸಿದ್ದಾರೆ.

ಮಧ್ಯಪ್ರದೇಶದ ಪೊಲೀಸರು ರಾತ್ರಿ ಪಾಳಿಯಲ್ಲಿದ್ದಾಗ 22ರ ಹರೆಯದ ಯುವಕ ಜಯ್ ಹಲ್ದೆ ಸೈಕಲ್ ತುಳಿಯುತ್ತಾ ಸಂಪೂರ್ಣ ಒದ್ದೆಯಾಗಿದ್ದ. ಬೆವರಿನಿಂದ ಒದ್ದೆಯಾದ ಯುವಕನ ನಿಲ್ಲಿಸಿದ ಪೊಲೀಸರು ಆತನ ಬಳಿ ಮಾಹಿತಿ ಕೇಳಿದ್ದಾರೆ. ಈ ವೇಳೆ ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಬೈಕ್ ಖರೀದಿಸುವ ಶಕ್ತಿ ತನಗಿಲ್ಲ. ಹೀಗಾಗಿ ಸೈಕಲ್ ಮೂಲಕ ಫುಡ್ ಡೆಲಿವರಿ ಮಾಡುತ್ತಿರುವುದಾಗಿ ಜಯ್ ಹಲ್ದೆ ಹೇಳಿದ್ದಾನೆ.

Latest Videos

ಬಿರುಬಿಸಿಲಿನಲ್ಲಿ ಸೈಕಲ್‌ನಲ್ಲೇ ಫುಡ್‌ ಡೆಲಿವರಿ ಮಾಡುತ್ತಿದ್ದ ದುರ್ಗಾ, ನೆಟ್ಟಿಗರ ಉದಾರತೆಯಿಂದ ಸಿಕ್ತು ಬೈಕ್!

ಈತನ ಕುಟುಂಬದ ಕತೆ, ಆತನ ಪರಿಸ್ಥಿತಿ ನೋಡಿದ ಮಧ್ಯಪ್ರದೇಶ ಪೊಲೀಸರು ಯುವಕನಿಗೆ ನೆರವು ನೀಡಲು ಮುಂದಾಗಿದ್ದಾರೆ. ಮರುದಿನ ಠಾಣೆಯಲ್ಲಿ ಈ ಕುರಿತು ಇತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಎಲ್ಲರೂ ಹಣ ಒಗ್ಗೂಡಿಸಿದ್ದಾರೆ. ಬಳಿಕ ಡೌನ್‌ಪೇಮೆಂಟ್ ಮಾಡಿ ಬೈಕ್ ಖರೀದಿಸಿ, ಜಯ್ ಹಲ್ಡೆಗೆ ಉಡುಗೊರೆಯಾಗಿ ನೀಡಿದ್ದಾರೆ.

ಬೈಕ್‌ನ ಲೋನ್ ಮೂಲಕ ಖರೀದಿಸಾಗಿದೆ. ಉಳಿದ ಕಂತಿನ ಹಣವನ್ನೂ ಪೋಲೀಸರೆ ಭರಿಸಲಿದ್ದಾರೆ. ಈ ಬೈಕ್ ಸಂಪೂರ್ಣವಾಗಿ ಉಚಿತ. ಸೈಕಲ್ ಮೂಲಕ ಫುಡ್ ಡೆಲಿವರಿ ಅತ್ಯಂತ ಕಷ್ಟ. ಇಷ್ಟೇ ಅಲ್ಲ ಆದಾಯ ಕೂಡ ಕಡಿಮೆ. ಇದರಿಂದ ಬೈಕ್‌ನಲ್ಲಿ ಫುುಡ್ ಡೆಲಿವರಿ ಸೇರಿದಂತೆ ಇತರ ಕೆಲಸಗಳಿಗೆ ಯುವಕನಿಗೆ ನೆರವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರ ಈ ನಡೆಗೆ ಜಯ್ ಹಲ್ಡೆಗೆ ಮಾತೇ ಬರಲಿಲ್ಲ. ಅಧೆಷ್ಟು ಧನ್ಯವಾದ ಹೇಳಿದರೂ ಸಾಲದು. ಸೈಕಲ್ ಮೂಲಕ 6 ರಿಂದ 8 ಪಾರ್ಸೆಲ್ ವಿತರಣೆ ಮಾಡುತ್ತಿದ್ದೆ. ಇದರಿಂದ ಆದಾಯವೂ ಕಡಿಮೆ ಇತ್ತು. ಇದೀಗ ಬೈಕ್ ಮೂಲಕ 15 ರಿಂದ 20 ಡಿಲೆವರಿ ಮಾಡಲು ಸಾಧ್ಯವಿದೆ. ಇಷ್ಟೇ ಅಲ್ಲ ಸಮಯಕ್ಕೆ ಸರಿಯಾಗಿ ಡೆಲಿವರಿ ಮಾಡಲು ಸಾಧ್ಯವಿದೆ ಎಂದು ಜಯ್ ಹಲ್ದೆ ಹೇಳಿದ್ದಾನೆ.

ಪೆಟ್ರೋಲ್‌ ಖಾಲಿಯಾಗಿ ನಡುರಸ್ತೆಯಲ್ಲಿ ನಿಂತಿದ್ದ ಅಣ್ಣತಂಗಿಗೆ ಸ್ವಿಗ್ಗಿ ಬಾಯ್‌ ಸಹಾಯ

1 2ನೇ ಮಹಡಿಯಿಂದ ಬಿದ್ದ ಮಗು ರಕ್ಷಿಸಿದ ಡೆಲಿವರಿ ಬಾಯ್‌!
12ನೇ ಮಹ​ಡಿಯ ಕಟ್ಟ​ಡದ ಬಾಲ್ಕ​ನಿ​ಯಿಂದ ಕೆಳಗೆ ಬೀಳು​ತ್ತಿದ್ದ ಮಗುವೊಂದನ್ನು ಡೆಲಿವರಿ ಬಾಯ್‌ ಒಬ್ಬರು ರಕ್ಷಿಸಿದ ಅಚ್ಚರಿಯ ಘಟನೆ ವಿಯೆಟ್ನಾಂ ರಾಜಧಾನಿ ಹನೋಯ್‌ನಲ್ಲಿ ನಡೆಸಿದೆ. ಸಿಸಿಟೀವಿಯಲ್ಲಿ ಸೆರೆಯಾಗಿರುವ ಈ ದೃಶ್ಯ ಭಾರೀ ವೈರಲ್‌ ಆಗಿದೆ. ಗ್ರಾಹ​ಕ​ರೊ​ಬ್ಬ​ರು ಆರ್ಡರ್‌ ಮಾಡಿದ್ದ ವಸ್ತುವೊಂದನ್ನು ನೀಡಲು ಡೆಲಿವರಿ ಬಾಯ್‌ ಕಾರಿನಲ್ಲಿ ಆಗಮಿಸಿದ್ದರು. ಗ್ರಾಹಕರು ಇನ್ನೂ ಮನೆಯಿಂದ ಹೊರಗೆ ಬಂದಿರದ ಕಾರಣ ಅವರು ಮನೆಯ ಹೊರಗೆ ಕಾರಿನಲ್ಲಿ ಕುಳಿತಿದ್ದರು. ಈ ವೇಳೆ ಮಗುವೊಂದು 12ನೇ ಮಹಡಿಯಿಂದ ಕೆಳಕ್ಕೆ ಜಾರಿದ್ದನ್ನು ನೋಡಿದ ಎಂಜಾಕ್‌ ಮನ್‌್ಹ ಎಂಬ ಡೆಲಿವರಿ ಬಾಯ್‌ ಕೂಡಲೇ ಕಾರಿನಿಂದ ಇಳಿದು ಓಡಿಹೋಗಿ, ಮಗುವನ್ನು ಬಾಲ್‌ ರೀತಿಯಲ್ಲಿ ಕ್ಯಾಚ್‌ ಹಿಡಿದು ರಕ್ಷಿಸಿದ್ದಾರೆ. ಈ ವೇಳೆ ಮಗುವಿನ ಸಣ್ಣಪುಟ್ಟಗಾಯಗಳಾಗಿದೆಯಾದರೂ, ಅದು ಪ್ರಾಣಾಪಾಯದಿಂದ ಪಾರಾಗಿದೆ.

ಆಫ್ಘನ್‌ ಮಾಜಿ ಸಚಿವ ಈಗ ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್‌!
ಈ ಹಿಂದಿನ ಅಷ್ಘಾನಿಸ್ತಾನ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸೈಯದ್‌ ಅಹಮ್ಮದ್‌ ಶಾ ಸಾದತ್‌ ಈಗ ಜರ್ಮನಿಯ ಲೇಪ್‌ಜಿಗ್‌ ನಗರದಲ್ಲಿ ಪಿಜ್ಜಾ ಡೆಲಿವರಿ ಹುಡುಗನಾಗಿ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಪತ್ರಕರ್ತನೊಬ್ಬ ತೆಗೆದಿರುವ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಮಾಸ್ಟರ್‌ ಡಿಗ್ರಿ ಮಾಡಿರುವ ಸಾದತ್‌, ಸೈಯದ್‌ ಅಶ್ರಫ್‌ ಘನಿ ನೇತೃತ್ವದ ಸರ್ಕಾರದಲ್ಲಿ ಸಂವಹನ ಮತ್ತು ತಂತ್ರಜ್ಞಾನ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2018ರಲ್ಲಿ ಸಂಪುಟ ಸೇರಿದವರು 2020ರಲ್ಲಿ ರಾಜೀನಾಮೆ ನೀಡಿ ಜರ್ಮನಿಗೆ ಹೋಗಿ ನೆಲೆಸಿದ್ದರು. ಈಗ ಜರ್ಮನಿಯ ಲೇಪ್‌ಜಿಗ್‌ನಲ್ಲಿ ಪಿಜ್ಜಾ ಡೆಲಿವರಿ ಹುಡುಗನಾಗಿ ಕೆಲಸ ಮಾಡುತ್ತಿದ್ದಾರೆ. ಈ ಪೋಟೋಗಳನ್ನು ಅಲ್‌ ಜಜೀರಾ ಟೀವಿ ಟ್ವೀಟ್‌ ಮಾಡಿದೆ.
 

click me!