
ಮಹಾರಾಷ್ಟ್ರ: ದೇಶದಲ್ಲಿ ಸಾರ್ವಜನಿಕ ಗಣೇಶೋತ್ಸವಗಳು ಜೋರಾಗಿ ನಡೆಯುತ್ತಿವೆ. ಇದೀಗ ಮಹಾರಾಷ್ಟ್ರದ ಲಾಲ್‌ಬಾಗ್‌ಚಾ ರಾಜಾ (Lalbaugcha Raja) ಗಣೇಶೋತ್ಸವದಲ್ಲಿ ನಡೆದ ಒಂದು ಘಟನೆ ಭಾರೀ ಚರ್ಚೆ ಆಗ್ತಿದೆ. ಖ್ಯಾತ ನಟಿಯೊಬ್ಬರು ಗಣೇಶನಿಗೆ ನೀಡಿದ್ದ ಕಾಣೆಕೆಯನ್ನು ವ್ಯಕ್ತಿಯೊಬ್ಬರು ಕದ್ದಿಡುವ ವಿಡಿಯೋ ವೈರಲ್ ಆಗಿದೆ.
ಸೆಪ್ಟೆಂಬರ್ 21ರಂದು ಖ್ಯಾತ ಚಿತ್ರನಟಿ ಮಧು ಶಾ.. ಲಾಲ್‌ಬಾಗ್‌ಚಾ ರಾಜಾ ಗಣಪತಿಯ ದರ್ಶನ ಪಡೆಯಲು ಆಗಮಿಸಿದ್ದರು. ಈ ವೇಳೆ ಅವರು ಗಣೇಶನಿಗೆ ಕಾಣಿಕೆಯಾಗಿ 500 ರೂಪಾಯಿ ನೋಟು ಅರ್ಪಿಸಿದ್ದರು. ನಟಿ ಹಣವಿಟ್ಟು ವಾಪಸ್ ಆಗುತ್ತಿರುವ ಬೆನ್ನಲ್ಲೇ ವ್ಯಕ್ತಿಯೊಬ್ಬರು ಅದನ್ನು ತಕ್ಷಣ ಎತ್ತಿಕೊಂಡು ನೋಟು ಕಾಣದಂತೆ ಮರೆ ಮಾಡಿದ್ದಾನೆ. ಯಾರಿಗೂ ಕಾಣದಂತೆ ಮುಚ್ಚಿಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ದೃಶ್ಯ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗ್ತಿದ್ದು, ಭಾರೀ ಆಕ್ರೋಶ ವ್ಯಕ್ತವಾಗ್ತಿದೆ.
ವಿಡಿಯೋ ವೈರಲ್ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅರವಿಂದ್ ರಾಮಬಚನ್ ಸಿಂಗ್ ಗರಂ ಆಗಿದ್ದಾರೆ. ಮುಂಬೈ ಪೊಲೀಸ್ ಕಮಿಷನರ್‌ಗೆ ದೂರು ದಾಖಲಿಸಿ, ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ವಿಡಿಯೋದಲ್ಲಿರುವ ವ್ಯಕ್ತಿಯು ಅಧಿಕೃತ ಸ್ವಯಂಸೇವಕನೇ, ಭದ್ರತಾ ಸಿಬ್ಬಂದಿಯೇ, ಉದ್ಯೋಗಿಯೇ ಅಥವಾ ಮಂಡಳಿಯ ಪ್ರತಿನಿಧಿಯೇ ಎಂಬುದನ್ನು ಪತ್ತೆಹಚ್ಚಬೇಕು. ನಂತರ ಆತ ಮುಚ್ಚಿಟ್ಟಿದ್ದ ಹಣವು ಹುಂಡಿಗೆ ಜಮೆ ಆಗಿದೆಯೇ? ಅಥವಾ ಸ್ವಂತಕ್ಕೆ ಇಟ್ಟುಕೊಂಡಿದ್ದಾನೆ ಅನ್ನೋದ್ರ ಬಗ್ಗೆ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾನೆ.
ನೋಡಲು ಐದು ನೂರು ರೂಪಾಯಿ ಆಗಿದ್ದರೂ, ಭಕ್ತಿ ಅಂತಾ ಬಂದಾಗ ಅದು ದೊಡ್ಡ ಕಾಣಿಕೆ ಆಗಿದೆ. ಲಾಲ್‌ಬಾಗ್‌ಚಾ ರಾಜಾ ಗಣೇಶೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ ಅಪಾರ ಪ್ರಮಾಣದ ಕಾಣಿಕೆ ಅರ್ಪಿಸುತ್ತಾರೆ. ಪ್ರಸ್ತುತ ಗಣೇಶೋತ್ಸವದ ಮೊದಲ ಮೂರೇ ದಿನಗಳಲ್ಲಿ ಭಕ್ತರಿಂದ ಬರೋಬ್ಬರಿ 1.90 ಕೋಟಿ ರೂ. ನಗದು ಹಾಗೂ ಬಂಗಾರ, ಬೆಳ್ಳಿ ಸೇರಿದಂತೆ ಒಟ್ಟು 3.18 ಕೋಟಿಗೂ ಅಧಿಕ ಮೌಲ್ಯದ ದೇಣಿಗೆ ಹರಿದುಬಂದಿದೆ ಎನ್ನಲಾಗಿದೆ.
ಇಂಥ ಪವಿತ್ರ ಸನ್ನಿಧಿಯಲ್ಲಿ ಭಕ್ತರ ಕಾಣಿಕೆ ದುರುಪಯೋಗ ಮಾಡುವುದು ಕ್ಷಮಿಸಲಾಗದ ಅಪರಾಧ. ಹೀಗಾಗಿ ಕಾಣಿಕೆ ಸಂಗ್ರಹ, ಎಣಿಕೆ ಮತ್ತು ಜಮೆ ಮಾಡುವ ಸಂಪೂರ್ಣ ವ್ಯವಸ್ಥೆಯ ಬಗ್ಗೆ ಪಾರದರ್ಶಕ ತನಿಖೆ ನಡೆಯಬೇಕು ಎಂದು ವಕೀಲರು ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.
Mumbai, Maharashtra: Actress Madhoo Shah visited the Lalbaugcha Raja pandal in Mumbai and offered prayers pic.twitter.com/3M2SxxIiE4
— IANS (@ians_india) September 21, 2026
ವಿಡಿಯೋ ಈಗಾಗಲೇ ವೈರಲ್ ಆಗ್ತಿದೆ. ಹೀಗಾಗಿ ಆ ವಿಡಿಯೋ ಡಿಲೀಟ್ ಆಗುವ ಸಾಧ್ಯತೆ ಇದೆ. ಕೂಡಲೇ ಪೊಲೀಸರು ಮಧ್ಯ ಪ್ರವೇಶ ಮಾಡಿ ಅಲ್ಲಿರುವ ಎಲ್ಲಾ ಸಿಸಿಟಿವಿ ದೃಶ್ಯಗಳನ್ನೂ ವಶಕ್ಕೆ ಪಡೆಯಬೇಕು. ನಂತರ ಕೂಲಂಕುಶವಾಗಿ ತನಿಖೆ ನಡೆಸಿ ಅಸಲಿ ಕಾರಣವನ್ನು ಪತ್ತೆಹಚ್ಚಬೇಕು. ತನಿಖೆ ವೇಳೆ ದುರುದ್ದೇಶದಿಂದ ಆ ಹಣವನ್ನು ಮರೆಮಾಚಿದ್ದು ಎಂದು ಗೊತ್ತಾದರೆ ಆತನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹ ಜೋರಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ