ದೀಪಾವಳಿಗೆ ಪ್ರಧಾನಿ ಮೋದಿಯಿಂದ ದೇಶದ ರೈತರಿಗೆ ಭರ್ಜರಿ ಗಿಫ್ಟ್

Published : Sep 24, 2026, 08:59 PM IST
Karnataka Farmers Good News

ಸಾರಾಂಶ

ದೀಪಾವಳಿ ಹಬ್ಬದ ಮುನ್ನ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯ 24ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮೆ ಮಾಡಲಿದೆ. ಈ ಆರ್ಥಿಕ ನೆರವು ಪಡೆಯಲು ರೈತರು ಇ-ಕೆವೈಸಿ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ.

ನವದೆಹಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶದ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಕಡೆಯಿಂದ ಉಡುಗೊರೆ ಸಿಗಲಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ (PM Kisan Yojana) 24ನೇ ಕಂತನ್ನು ದೀಪಾವಳಿಗೂ ಮುನ್ನ ರೈತರಿ ಖಾತೆಗೆ ಜಮೆ ಆಗಲಿದೆ. ಈಗಾಗಲೇ ಕೇಂದ್ರ 23 ಕಂತುಗಳನ್ನ ರೈತರಿಗೆ ನೀಡಲಾಗಿದೆ. ಕಳೆದ ಜೂನ್‌ನಲ್ಲಿ 23ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ಜಮೆ ಮಾಡಿತ್ತು.

ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆ ಯೋಜನೆ ಇದಾಗಿದೆ. ದೇಶದ ಅರ್ಹ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ವಾರ್ಷಿಕವಾಗಿ 6000 ಸಾವಿರ ಹಣವನ್ನು ನೇರವಾಗಿ ರೈತರ ಅಕೌಂಟ್‌ಗೆ ನೀಡಲಾಗುತ್ತದೆ. ಈ ಮೊತ್ತವನ್ನು ಒಟ್ಟಿಗೆ ನೀಡದೇ ಮೂರು ಕಂತುಗಳಲ್ಲಿ ರೈತರ ಅಕೌಂಟ್‌ಗೆ ಜಮೆ ಮಾಡಲಾಗುತ್ತಿದೆ.

ಯಾವಾಗ ಹಣ ಬರುತ್ತೆ?

ಪಿಎಂ ಕಿಸಾನ್ ನಿಯಮಾವಳಿಗಳ ಪ್ರಕಾರ.. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರಿಗೆ 2,000 ರೂಪಾಯಿಗಳ ಕಂತು ಬಿಡುಗಡೆ ಮಾಡಲಿದೆ. ಜೂನ್ ತಿಂಗಳಲ್ಲಿ 23ನೇ ಕಂತು ಬಿಡುಗಡೆಯಾಗಿರುವ ಕಾರಣ ಮುಂದಿನ ನಾಲ್ಕು ತಿಂಗಳ ಅವಧಿ ಅಕ್ಟೋಬರ್ ತಿಂಗಳಿಗೆ ಪೂರ್ಣಗೊಳ್ಳುತ್ತದೆ. ಹೀಗಾಗಿ ಕೇಂದ್ರ ಸರ್ಕಾರವು ಮುಂಬರುವ ಅಕ್ಟೋಬರ್ ತಿಂಗಳಲ್ಲಿ 24ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದೆ. ಶೀಘ್ರದಲ್ಲೇ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡುವ ನಿರೀಕ್ಷೆ ಇದೆ.

ಆದರೆ ಇನ್ನೂ ಸರ್ಕಾರದಿಂದ ಅಧಿಕೃತ ದಿನಾಂಕ ಘೋಷಣೆ ಆಗಿಲ್ಲ. ಶೀಘ್ರದಲ್ಲೇ ಕೃಷಿ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಲಿದೆ. ದೇಶದ ಕೋಟ್ಯಾಂತರ ರೈತ ಕುಟುಂಬಗಳಿಗೆ ಕೃಷಿ ವೆಚ್ಚಗಳನ್ನು ನಿಭಾಯಿಸಲು ಈ ಧನ ಸಹಾಯ ಅಗತ್ಯವಾಗಲಿದೆ. ಸರ್ಕಾರದಿಂದ ಹಣವೇನೋ ಬರಲಿದೆ. ಆದರೆ ರೈತರು ತಮ್ಮ ಖಾತೆಗೆ ಹಣ ಸಂಧಾಯ ಆಗಬೇಕು ಅಂದ್ರೆ ಈ ಕೆಳಗಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಿದೆ.

ಏನದು?

  • ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಆಧಾರ್ ಆಧಾರಿತ ಇ-ಕೆವೈಸಿ ಮಾಡಿಸಿಕೊಳ್ಳಿ.
  • ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಮತ್ತು ಡಿಬಿಟಿ ಸಕ್ರಿಯವಾಗಿರಬೇಕು.
  • ಭೂ ದಾಖಲೆಗಳ ವಿವರಗಳು ಪೋರ್ಟಲ್‌ನಲ್ಲಿ ನವೀಕರಣಗೊಂಡಿರಬೇಕು

ಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಅಕೌಂಟ್‌ ಸ್ಟೇಟಸ್ ತಿಳಿದುಕೊಳ್ಳಲು ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಿ. ಅಲ್ಲಿ ನಿಮ್ಮ ಫಲಾನುಭವಿ ಸ್ಥಿತಿಗತಿ ಬಗ್ಗೆ ಪರಿಶೀಲಿಸಿಕೊಳ್ಳಿ.

ದೇಶದ ರೈತರಿಗೆ ಆರ್ಥಿಕವಾಗಿ ಸಣ್ಣ ನೆರವು ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 24, 2019ರಂದು ಅಧಿಕೃತವಾಗಿ ಜಾರಿಗೆ ತಂದರು. ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಾರಂಭವಾಯಿತು. ಈ ಯೋಜನೆಯು ಡಿಸೆಂಬರ್ 1, 2018 ರಿಂದಲೇ ಜಾರಿಗೆ ಬಂದಿದೆ ಎಂದು ಪರಿಗಣಿಸಲಾಗಿದೆ. ಅಲ್ಲಿಂದ ಪ್ರತಿವರ್ಷ ರೈತರ ಖಾತೆಗೆ 6 ಸಾವಿರ ರೂಪಾಯಿ ಜಮೆ ಆಗುತ್ತಿದೆ. ನಾಲ್ಕು ತಿಂಗಳಿಗೆ ಒಮ್ಮೆ 2 ಸಾವಿರ ರೂಪಾಯಿಯಂತೆ ಹಣ ಹಾಕಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ಯಾಂಗ್‌ಸ್ಟರ್‌ನ ವರಿಸಲು ಕಾಂಬೋಡಿಯಾದಿಂದ ಬಂದ 4 ಮಕ್ಕಳ ತಾಯಿ, ಮದುವೆಗೆ ಸಿಕ್ತು 12 ಗಂಟೆ ಪೆರೋಲ್‌; ಹನಿಮೂನ್‌ಗೆ ಎಷ್ಟು ಟೈಮ್‌ ಕೊಡ್ತೀರಿ ಎಂದ ನೆಟ್ಟಿಗರು!
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟುವ ಪ್ರತಿ ಮಗುವಿಗೂ 1 ಗ್ರಾಂ ಚಿನ್ನದ ಉಂಗುರ ಗಿಫ್ಟ್​: ಭರ್ಜರಿ ಆಫರ್​ ನೀಡಿದ ಸಿಎಂ ವಿಜಯ್​