ಹೊಸ ಸಂಸತ್ ಭವನದ ಮೊದಲ ಅಧಿವೇಶನಕ್ಕೂ ಮೊದಲು ಲೋಕಸಭಾ ಹಿರಿಯ ಸದಸ್ಯೆ ಮೇನಕಾ ಗಾಂಧಿ ಭಾಷಣ!

Published : Sep 19, 2023, 11:27 AM IST
ಹೊಸ ಸಂಸತ್ ಭವನದ ಮೊದಲ ಅಧಿವೇಶನಕ್ಕೂ ಮೊದಲು ಲೋಕಸಭಾ ಹಿರಿಯ ಸದಸ್ಯೆ ಮೇನಕಾ ಗಾಂಧಿ ಭಾಷಣ!

ಸಾರಾಂಶ

ಹಳೇ ಸಂಸತ್ ಭವನದ ಕೊನೆಯ ದಿನವಾದ ಇಂದು ಹಲವು ಪ್ರಮುಖ ಗಣ್ಯರಿಗೆ ಮಾತನಾಡಲು ಅಹ್ವಾನ ನೀಡಲಾಗಿತ್ತು. ಹೊಸ ಸಂಸತ್ ಭವನದಲ್ಲಿನ ವಿಶೇಷ ಅಧಿವೇಶನಕ್ಕೂ ಮೊದಲು ಲೋಕಸಭಾ ಹಿರಿಯ ಸದಸ್ಯೆ ಮೇನಕಾ ಗಾಂಧಿ ಭಾಷಣ ಮಾಡಿದ್ದಾರೆ. 

ನವದೆಹಲಿ(ಸೆ.19) ಕೇಂದ್ರ ಸರ್ಕಾರ ಕರೆದಿರುವ ವಿಶೇಷ ಅಧಿವೇಶನದ 2ನೇ ದಿನ ಹಲವು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಹಳೇ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಹಲವು ಗಣ್ಯರಿಗೆ ಮಾತನಾಡಲು ಆಹ್ವಾನ ನೀಡಲಾಗಿತ್ತು. ಹೊಸ ಸಂಸತ್ ಭವನದ ಮೊದಲ ಅಧಿವೇಶನಕ್ಕೂ ಮುನ್ನ ಲೋಕಸಭೆಯ ಅತ್ಯಂತ ಹಿರಿಯ ಸದಸ್ಯೆಯಾಗಿರುವ ಮೇನಕಾ ಗಾಂಧಿ ಭಾಷಣ ಮಾಡಿದ್ದಾರೆ. ಮೇನಕಾ ಗಾಂಧಿ ಭಾಷಣದ ಹೈಲೈಟ್ಸ್ ಇಲ್ಲಿದೆ.

 ನನಗೆ ಮಾತನಾಡಲು ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ. ನಾವು ಹೊಸ ಸಂಸತ್ ಭವನಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ಈ ಮೂಲಕ ಹೊಸ ಭಾರತದ ನಿರ್ಮಾಣವಾಗುತ್ತಿದೆ. ಪತಿ ನಿಧನದ 9 ವರ್ಷಗಳ ಬಳಿಕ ನಾನು ಸಂಸತ್ ಪ್ರವೇಶ ಮಾಡಿದೆ. ನನಗೆ ಸುಲಭದ ಪಯಣವಾಗಿರಲಿಲ್ಲ. ಹಲವು ಏಳುಬೀಳುಗಳನ್ನು ಕಂಡಿದ್ದೇನೆ. ಆದರೆ ನಾನು ಬಿಜೆಪಿಯ ಸದಸ್ಯ ಅನ್ನೋದೇ ಹೆಮ್ಮೆ ಎಂದು ಮೇನಕಾ ಗಾಂಧಿ ಹೇಳಿದ್ದಾರೆ.

ಇತಿಹಾಸ ಪುಟ ಸೇರಿದ ಹಳೇ ಸಂಸತ್ ಭವನ, ಪ್ರಜಾಪ್ರಭುತ್ವ ದೇಗುಲ ಮುಂದೆ ಫೋಟೋಶೂಟ್!

ಲೋಕಸಭಾ ಸಂಸದೆಯಾಗಿ ಹಲವು ಜಬಾಬ್ದಾರಿ ನಿರ್ವಹಿಸಿದ್ದೇನೆ.  ಸಚಿವೆಯಾಗಿ ಕೆಲಸ ಮಾಡಿದ್ದೇನೆ. ದೇಶದ ಗ್ರಾಮದಲ್ಲಿರುವ ಪ್ರತಿಯೊಬ್ಬನಿಗೆ ಸೌಲಭ್ಯ ತಲುಪಿಸುವಲ್ಲಿ ಪ್ರಾಣಿಕವಾಗಿ ನಿರ್ವಹಿಸಿದ್ದೇನೆ. ಪ್ರಧಾನಿಯ ಭೇಟಿ ಬಚಾವೋ ಭೇಟಿ ಪಡಾವೋ ಆಂದೋಲನ ಮೂಲಕ ದೇಶದಲ್ಲಿ ಜಾಗೃತಿ ಮೂಡಿಸುವಲ್ಲಿ ನಾನು ಅವಿರತ ಕೆಲಸ ಮಾಡಿದ್ದೇನೆ. ಈ ಆಂದೋಲನದ ಮೂಲಕ ದೇಶದಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಪ್ರಮಾಣ ಹೆಚ್ಚು ಮಾಡಲು ಸಾಧ್ಯವಾಗಿತ್ತು. ಭಾರತದಲ್ಲಿ ಯಾವುದೇ ಸಣ್ಣ ಕೆಲಸಕ್ಕೆ ಅದೇ ಗೌರವ ಹಾಗೂ ಮೌಲ್ಯವಿದೆ ಎಂದು ಮೇನಕಾ ಗಾಂಧಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭಾರತೀಯ ಜನರ ಬೇಡಿಕೆ, ಆರ್ಥಿಕತೆ, ಕುಟುಂಬಕ್ಕೆ ಮೂಲಭೂತ ಸೌಕರ್ಯಗಳನ್ನ ನೀಡುವ ಮೂಲಕ ಸಬಲೀಕರಣ ಮಾಡಿದ್ದಾರೆ. ಶುದ್ಧ ನೀರು, ಗ್ಯಾಸ್ ಸಿಲಿಂಡರ್ ಸೇರಿದಂತೆ ಕುಟುಂಬವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕಾವಗಿ ಮೇಲೆತ್ತಲು ಎಲ್ಲಾ ಕೆಲಸ ಮಾಡಿದ್ದಾರೆ.

ಹೊಸ ಸಂಸತ್ತಿನ ಗೇಟ್‌ನಲ್ಲಿ ಗರುಡ, ಆನೆ ಕುದುರೆ: ಇವು ನೀಡುವ ಸಂದೇಶವೇನು?

ನನ್ನ ರಾಜಕೀಯ ಜೀವನದಲ್ಲಿ ಕಲಿತಕೊಂಡ ಪ್ರಮುಖ ಒಂದು ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಬಿಟ್ಟುಕೊಡಬೇಡಿ. ಸಾಧಸುವ ಛಲ ನಿಮ್ಮಲ್ಲಿರಲಿ. ಈ ಪಯಣದಲ್ಲಿ ಹಲವು ಏಳುಬೀಳುಗಳು ಸಹಜ. ಆದರೆ ನಿಮ್ಮನ್ನು ನಂಬಿ ಹಲವು ಜನರಿರುತ್ತಾರೆ. ದೇಶದ ನಿಮ್ಮಿಂದ ಉತ್ತಮ ಕೆಲಸವನ್ನು ಬಯಸುತ್ತದೆ. ಅದಕ್ಕಾಗಿ ಶ್ರಮವಹಿಸಿ ಕೆಲಸ ಮಾಡಿ. ಪ್ರಾಮಾಣಿಕವಾಗಿ ಕೆಲಸ ಮಾಡುವ ಧ್ಯೇಯ ನಿಮ್ಮದಾಗಲಿ ಎಂದು ಮೇನಕಾ ಗಾಂಧಿ ಸಂಸದರಿಗೆ ಕಿವಿ ಮಾತು ಹೇಳಿದ್ದಾರೆ.

ಗಣೇಶ ಚತುರ್ಥಿಯ ಈ ಶುಭದಿನ ದೇಶದ ಎಲ್ಲರಿಗೂ ಗಣೇಶ ಮಂಗಳ ಒದಗಿಸಲಿ ಎಂದು ಮೇನಕಾ ಗಾಂಧಿ ಪ್ರಾರ್ಥಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್