
ಪಾಟ್ನಾ (ನ.20) ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. 10ನೇ ಬಾರಿಗೆ ನಿತೀಶ್ ಕುಮಾರ್ ಬಿಹಾರದ ಸಿಎಂ ಆಗಿದ್ದಾರೆ. ಕಳೆದ 19 ವರ್ಷಗಳಿಂದ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿತೀಶ್ ಕುಮಾರ್ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಭಾರತದಲ್ಲಿ ಸುದೀರ್ಘ ವರ್ಷ ದೇಶವನ್ನಾಳಿದ ಸಿಎಂ ಯಾರು ಅನ್ನೋ ಚರ್ಚೆ ಶುರುವಾಗಿದೆ. ನಿತೀಶ್ ಕುಮಾರ್ 19 ವರ್ಷ ಮುಖ್ಯಮಂತ್ರಿಯಾದರೂ, ಸುದೀರ್ಘ ವರ್ಷ ಸೇವೆ ಸಲ್ಲಿಸಿದ ಟಾಪ್ 5 ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ನಿತೀಶ್ ಕುಮಾರ್‌ಗೆ ಸ್ಥಾನವಿಲ್ಲ. ಈ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿರುವುದು ಪವನ್ ಕುಮಾರ್ ಚಾಮಲಿಂಗ್.
ನಿತೀಶ್ ಕುಮಾರ್ 10ನೇ ಬಾರಿಗೆ ಮುಖ್ಯಮಂತ್ರಿಯಾಗುವ ಮೂಲಕ ದೇಶದ ಅತೀ ಸುದೀರ್ಘ ವರ್ಷ ರಾಜ್ಯ ಆಳಿದ ಮುಖ್ಯಮಂತ್ರಿಗಳ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ನಿತೀಶ್ ಕುಮಾರ್‌ಗೂ ಹೆಚ್ಚು ಕಾಲ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿಗಳ ಪಟ್ಟಿ ಇಲ್ಲಿದೆ.
ಪವನ್ ಕುಮಾರ್ ಚಾಮಲಿಂಗ್: ಬರೋಬ್ಬರಿ 25 ವರ್ಷಗಳ ಕಾಲ ಪವನ್ ಕುಮಾರ್ ಚಾಮಲಿಂಗ್ ಸಿಕ್ಕಿಂ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಡಿಸೆಂಬರ್ 12, 1994ರಿಂದ ಮೇ 26, 2019ರ ವರೆಗೆ ಪವನ್ ಕುಮಾರ್ ಚಾಮಲಿಂಗ್ ಮುಖ್ಯಮಂತ್ರಿಯಾಗಿದ್ದರು.
ನೀವನ್ ಪಟ್ನಾಯಕ್: ಒಡಿಶಾ ಮುಖ್ಯಮಂತ್ರಿಯಾಗಿ ಬರೋಬ್ಬರಿ 24 ವರ್ಷಗಳ ಕಾಲ ನವೀನ್ ಪಟ್ನಾಯತ್ ಸೇವೆ ಸಲ್ಲಿಸಿದ್ದಾರೆ. ಮಾರ್ಚ್ 5, 2000ನೇ ಇಸವಿಯಿಂದ ಜೂನ್ 11, 2024ರ ವರೆಗೆ ಒಡಿಶಾ ಮುಖ್ಯಮಂತ್ರಿಯಾಗಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನವೀನ್ ಪಟ್ನಾಯಕ್ ಬಿಜೆಡಿ ಪಕ್ಷ ಸೋಲು ಕಂಡಿತ್ತು. ಈ ಮೂಲಕ ಸುದೀರ್ಘ ವರ್ಷದ ಮುಖ್ಯಮಂತ್ರಿ ಸೇವೆ ಅಂತ್ಯಗೊಂಡಿತ್ತು.
ಜ್ಯೋತಿ ಬಸು: ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಜ್ಯೋತಿ ಬಸು 23 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.1997 ಜೂನ್ 21ರಿಂದ ನವೆಂಬರ್ 5, 2000 ವೆರೆಗ ಜ್ಯೋತಿ ಬಸು ಬಂಗಾಳದ ಮುಖ್ಯಮಂತ್ರಿಯಾಗಿದ್ದರು.
ಗೇಗೋಂಗ್ ಅಪಂಗ್: ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಗೇಗೋಂಗ್ ಅಪಂಗ್ ಬರೋಬ್ಬರಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಲಾಲ್ ತನ್ಹಾವಾಲ: ಮಿಜೋರಾಮ್ ಮುಖ್ಯಮಂತ್ರಿಯಾಗಿ ಲಾಲ್ ತನ್ಹಾವಾಲ ಮಿಜೋರಾಂ ಮುಖ್ಯಮಂತ್ರಿಯಾಗಿ 22 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ