ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವೇತನ ಎಷ್ಟು, ಸಿಗಲಿದೆ ಈ ಅಧಿಕಾರ!

By Chethan Kumar  |  First Published Jun 27, 2024, 1:18 PM IST

ರಾಹುಲ್ ಗಾಂಧಿ ಲೋಕಸಭಾ ವಿರೋಧ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದು ಅತ್ಯಂತ ಮಹತ್ವದ ಹುದ್ದೆ. ಈ ಬಾರಿ ಮೋದಿ ಸರ್ಕಾರಕ್ಕೆ ರಾಹುಲ್ ಗಾಂಧಿ ಬೆಂಬಲವಿಲ್ಲದೆ ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗಿರುವ ಅಧಿಕಾರ, ವೇತನ , ಸೌಲಭ್ಯವೇನು?


ನವದೆಹಲಿ(ಜೂ.27) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 18ನೇ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ. ಇದು ಅತ್ಯಂತ ಮಹತ್ವದ ಜವಾಬ್ದಾರಿ. ಕಳೆದ 10 ವರ್ಷ ನರೇಂದ್ರ ಮೋದಿ ಸರ್ಕಾರ ಯಾವುದೇ ಅಡೆ ತಡೆ ಇಲ್ಲದೆ, ಏಕಾಂಗಿಯಾಗಿ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಕಾರಣ ಕಳೆದ 10 ವರ್ಷದಲ್ಲಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರೇ ಇರಲಿಲ್ಲ. ಆದರೆ ಈ ಬಾರಿ ಸರ್ಕಾರದ ಪ್ರಮುಖ ನಿರ್ಧಾರಕ್ಕೆ ವಿರೋಧ ಪಕ್ಷದ ನಾಯಕನ ಸಹಕಾರ ಅತೀ ಅಗತ್ಯ. ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಹಲವು ಅಧಿಕಾರಿಗಳನ್ನು ಹೊಂದಿದ್ದಾರೆ.

ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಕ್ಯಾಬಿನೆಟ್ ಸಿಚವರ ರ್ಯಾಂಕ್ ಹೊಂದಿರುತ್ತಾರೆ. ಕ್ಯಾಬಿನೆಟ್ ಸಚಿವರ ದರ್ಜೆಯ  ಎಲ್ಲಾ ಸವಲತ್ತುಗಳು ರಾಹುಲ್ ಗಾಂಧಿಗೆ ಸಿಗಲಿದೆ. ಸರ್ಕಾರಿ ಅಧಿಕೃತ ಬಂಗಲೆ,Z+ ಭದ್ರತೆ ಸೇರಿದಂತೆ ಹಲವು ಸೌಲಭ್ಯಗಳು ರಾಹುಲ್ ಗಾಂಧಿಗೆ ಸಿಗಲಿದೆ. ಪ್ರತಿ ತಿಂಗಳು ವೇತನ ರೂಪದಲ್ಲಿ 3.3 ಲಕ್ಷ ರೂಪಾಯಿ ಪಡೆಯಲಿದ್ದಾರೆ.

Tap to resize

Latest Videos

18ನೇ ಲೋಕಸಭೆ ಮೊದಲ ಅಧಿವೇಶನ: ಸಂವಿಧಾನದ ಪುಸ್ತಕ ಹಿಡಿದು ಬಂದ ಮೈತ್ರಿಕೂಟದ ಸದಸ್ಯರು!

ಸರ್ಕಾರದ ಹಲವು ಸಮಿತಿಗಳಲ್ಲಿ ರಾಹುಲ್ ಗಾಂಧಿ ಸದಸ್ಯರಾಗಿರುತ್ತಾರೆ. ಪ್ರಮುಖವಾಗಿ ಲೋಕಪಾಲ್ ಮುಖ್ಯಸ್ಥರ ನೇಮಕ, ಸಿಬಿಐ ಮುಖ್ಯಸ್ಥರ ನೇಮಕ, ಚುನಾವಣಾ ಆಯೋಗದ ಮುಖ್ಯಸ್ಥರ ನೇಮಕ, ಸೆಂಟ್ರಲ್ ವಿಜಿಲೆನ್ಸ್ ಕಮಿಷನ್, ಕೇಂದ್ರ ಮಾಹಿತಿ ಕಮಿಷನ್, ಎನ್‌ಹೆಚ್‌ಆರ್‌ಸಿ ಮುಖ್ಯಸ್ಥರ ನೇಮಕ ಸಮಿತಿಗಳಲ್ಲಿ ರಾಹುಲ್ ಗಾಂಧಿ ಸದಸ್ಯರಾಗಿರುತ್ತಾರೆ. ಪ್ರಧಾನಿ ಮೋದಿ ಈ ಸಮತಿಯ ಮುಖ್ಯಸ್ಥರಾಗಿರುತ್ತಾರೆ. ಇಲ್ಲಿ ರಾಹುಲ್ ಗಾಂಧಿ ಸಲಹೆಯನ್ನು ಸರ್ಕಾರ ಪರಿಗಣಿಸಲೇಬೇಕು. 

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ವಿಪಕ್ಷ ಕನಿಷ್ಠ 55 ಸ್ಥಾನಗಳನ್ನು ಗೆಲ್ಲಬೇಕು. 2014 ಹಾಗೂ 2019ರಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಸ್ಥಾನ ಪಡೆದುಕೊಳ್ಳುವಷ್ಟು ಸ್ಥಾನ ಗೆದ್ದಿಲ್ಲ. 2014ರಲ್ಲಿ ಕಾಂಗ್ರೆಸ್ 44 ಸ್ಥಾನ ಗೆದ್ದಿದ್ದರೆ, 2019ರಲ್ಲಿ 52 ಸ್ಥಾನ ಗೆದ್ದಿತ್ತು. ಕಳೆದ 10 ವರ್ಷದಲ್ಲಿ ಮೋದಿ ಸರ್ಕಾರ ಸಮರ್ಥ ವಿರೋಧ ಪಕ್ಷದ ನಾಯಕನಿಲ್ಲದೆ ಆಡಳಿತ ನಡೆಸಿದೆ. ಇದು ಬಿಜೆಪಿಗೆ ವರವಾಗಿತ್ತು. ಯಾವುದೇ ನಿರ್ಧಾರವನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳಬಹುದಾದ ಸ್ವಾತಂತ್ರ್ಯವಿತ್ತು. ಆಧರೆ ಈ ಬಾರಿ ಹಾಗಿಲ್ಲ.

ಅಧಿವೇಶನದ ಮೊದಲ ದಿನವೇ ರಾಹುಲ್ ಗಾಂಧಿ ಲೇಟ್; ರಾಷ್ಟ್ರಗೀತೆ ಮುಗಿದ ನಂತ್ರ ಎಂಟ್ರಿ 
 
ಲೋಕಸಭೆಯಲ್ಲಿ ಭಾರತದ ಮೊದಲ ವಿರೋಧ ಪಕ್ಷದ ನಾಯಕ ಅನ್ನೋ ಹೆಗ್ಗಳಿಕೆಗೆ ಡಾ. ರಾಮ್ ಶುಭಾಂಗ್ ಸಿಂಗ್ ಪಾತ್ರರಾಗಿದ್ದರೆ. ಶುಭಾಂಗ್ ಸಿಂಗ್ 1969 ರಿಂದ 1971ರ ವರೆಗೆ ಲೋಕಸಭೆಯ ವಿರೋಧ ಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಿದ್ದರು.
 

click me!