ಅಧಿವೇಶನದ ಮೊದಲ ದಿನವೇ ರಾಹುಲ್ ಗಾಂಧಿ ಲೇಟ್; ರಾಷ್ಟ್ರಗೀತೆ ಮುಗಿದ ನಂತ್ರ ಎಂಟ್ರಿ 

ರಾಷ್ಟ್ರಗೀತೆ ಮುಗಿಯುವ ವೇಳೆ ಅಂದ್ರೆ ಕೊನೆ ಕ್ಷಣದಲ್ಲಿ ರಾಹುಲ್ ಗಾಂಧಿ ಸದನದೊಳಗೆ ಬರುತ್ತಿರುವ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

rahul gandhi skip national anthem in parliament session  video viral mrq

ನವದೆಹಲಿ: ಲೋಕಸಭೆಯ 18ನೇ ಅಧಿವೇಶನದ (Parliament Session) ಮೊದಲ ದಿನವೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress MP Rahul Gandhi) ತಡವಾಗಿ ಆಗಮಿಸಿದ್ದಾರೆ. ಅಧಿವೇಶನ ಆರಂಭಕ್ಕೂ ಮುನ್ನ ಲೋಕಸಭೆಯಲ್ಲಿ ರಾಷ್ಟ್ರಗೀತೆ (National Anthem) ಹಾಡಲಾಯ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ಬಹುತೇಕ ಎಲ್ಲಾ ಸಂಸದರು ಹಾಜರಿದ್ದರು. ಆದ್ರೆ ರಾಷ್ಟ್ರಗೀತೆ ಮುಗಿಯುವ ವೇಳೆ ಅಂದ್ರೆ ಕೊನೆ ಕ್ಷಣದಲ್ಲಿ ರಾಹುಲ್ ಗಾಂಧಿ ಸದನದೊಳಗೆ ಬರುತ್ತಿರುವ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೀಗ ರಾಹುಲ್ ಗಾಂಧಿ ತಡವಾಗಿ ಬಂದಿರೋದರ ಬಗ್ಗೆ ಚರ್ಚೆಗಳು ಶುರುವಾಗಿವೆ. 

ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಡವಾಗಿ ಬಂದಿರೋ ರಾಹುಲ್ ಗಾಂಧಿಯವರನ್ನು ನೆಟ್ಟಿಗರು ಟೀಕಿಸುತ್ತಿದ್ದಾರೆ. ತಡವಾಗಿ ಆಗಮಿಸುವ ಮೂಲಕ ರಾಹುಲ್ ಗಾಂಧಿ ರಾಷ್ಟ್ರಗೀತೆಗೆ ಅಗೌರವಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ರಾಹುಲ್ ಗಾಂಧಿಯವರ ಬದ್ದತೆಯನ್ನು ಸಹ ಕೆಲವರು ಪ್ರಶ್ನೆ ಮಾಡಿದ್ದಾರೆ. ಇತ್ತ ಮತ್ತೊಂದೆಡೆ ತಡವಾಗಿ ಆಗಮಿಸಿರೋದರಲ್ಲಿ ತಪ್ಪೇನಿದೆ ಎಂದು ರಾಹುಲ್ ಗಾಂಧಿಯವರನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ. 

ಮತ್ತೆ ಅಳಿಯ ಆಕಾಶ್‌ ಆನಂದ್‌ ನನ್ನ ಉತ್ತರಾಧಿಕಾರಿ ಎಂದು ಘೋಷಿಸಿದ ಮಾಯಾವತಿ

ಈ ಕುರಿತು ಪ್ರತಿಕ್ರಿಯಿಸಿರುವ ಆಂಧ್ರಪ್ರದೇಶದ ಬಿಜೆಪಿ ನಾಯಕ ವಿಷ್ಣು ವರ್ಧನ್ ರೆಡ್ಡಿ, ಯುವರಾಜ ರಾಹುಲ್ ಗಾಂಧಿ ತಮ್ಮನ್ನು ರಾಷ್ಟ್ರಗೀತೆಗಿಂತ ದೊಡ್ಡವರು ಎಂದು ತಿಳಿದುಕೊಂಡಿದ್ದಾರೆ. ಹಾಗಾಗಿಯೇ ರಾಷ್ಟ್ರಗೀತೆ ಮುಗಿದ ನಂತರ ಸದನದೊಳಗೆ ಬಂದಿದ್ದಾರೆ ಎಂದು ಟೀಕಿಸಿದ್ದಾರೆ.

ರಾಹುಲ್ ಗಾಂಧಿಗೆ ನೆಟ್ಟಿಗರ ಪ್ರಶ್ನೆ

ಓರ್ವ ಬಳಕೆದಾರ ಸಂಸತ್ತಿನ ಪ್ರತಿ ಅಧಿವೇಶನ ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾಗುತ್ತದೆ. ಪ್ರಧಾನಮಂತ್ರಿ, ಸಂಪುಟ ಸಚಿವರು ಹಾಗೂ ಸಂಸದರು ಸೇರಿದಂತೆ ಎಲ್ಲಾ ಸಂಸದರು ಈ ಸಮಯದಲ್ಲಿ ಹಾಜರಿರುತ್ತಾರೆ. ಆದ್ರೆ ರಾಷ್ಟ್ರಗೀತೆ ಮುಗಿಯುತ್ತಿದ್ದಂತೆ ರಾಹುಲ್ ಗಾಂಧಿ ಸದನದೊಳಗೆ ಬರುತ್ತಾರೆ. ಈ ರೀತಿ ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿ ಮಾಡಿದ್ದಾರೆಯೇ? ಇದು ಭಾರತಕ್ಕೆ ತೋರಿದ ಅಗೌರವ ಅಲ್ಲವೇ? ಇಂತಹವರು ಭಾರತದ ಜನತೆಗೆ ನಿಷ್ಠರಾಗಿರುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಕೇರಳ ಹೆಸರು ಇನ್ಮುಂದೆ ಕೇರಳಂ, ವಿಧಾನಸಭೆಯಲ್ಲಿ 2ನೇ ಬಾರಿಗೆ ನಿರ್ಣಯ ಅಂಗೀಕಾರ!

ಪ್ರತಿ ಸಂಸತ್ ಅಧಿವೇಶನವು ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾಗುತ್ತದೆ. ಭಾರತದ ಪ್ರಧಾನಿ, ಅವರ ಸಂಪುಟ ಮತ್ತು ಎಲ್ಲಾ ಬಿಜೆಪಿ ಸಚಿವರು ಹಾಜರಿದ್ದರು . ಎಲ್ಲರೂ ಎದ್ದುನಿಂತು ರಾಷ್ಟ್ರಗೀತೆ ಹಾಡುತ್ತಿದ್ದರು. ಆದ್ರೆ 56 ವರ್ಷದ ಯುವ ನಾಯಕ ರಾಹುಲ್ ಗಾಂಧಿ ಮಾತ್ರ ಹಾಜರಿಲ್ಲ ಯಾಕೆ? ಉದ್ದೇಶಪೂರ್ವಕವಾಗಿಯೇ ರಾಷ್ಟ್ರಗೀತೆಗೆ ರಾಹುಲ್ ಗಾಂಧಿ ಗೈರಾದ್ರೆ? ಇವರ ಮೇಲೆ ಹೇಗೆ ನಂಬಿಕೆ ಬರುತ್ತೆ ಎಂದು ಮತ್ತೋರ್ವ ಬಳಕೆದಾರ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Latest Videos
Follow Us:
Download App:
  • android
  • ios