'ಮನೆ ಖಾಲಿ ಮಾಡಿ..' ರಾಹುಲ್‌ ಗಾಂಧಿಗೆ ನೋಟಿಸ್‌ ನೀಡಿದ ವಸತಿ ಸಮಿತಿ!

Published : Mar 27, 2023, 06:08 PM ISTUpdated : Mar 27, 2023, 06:31 PM IST
'ಮನೆ ಖಾಲಿ ಮಾಡಿ..' ರಾಹುಲ್‌ ಗಾಂಧಿಗೆ ನೋಟಿಸ್‌ ನೀಡಿದ ವಸತಿ ಸಮಿತಿ!

ಸಾರಾಂಶ

ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್‌ ಗಾಂಧಿಗೆ, ಸರ್ಕಾರಿ ವಸತಿಯನ್ನು ಖಾಲಿ ಮಾಡುವಂತೆ ಲೋಕಸಭಾ ವಸತಿ ಸಮಿತಿ ನೋಟಿಸ್‌ ಜಾರಿ ಮಾಡಿದೆ  

ನವದೆಹಲಿ (ಮಾ.27): ಒಬಿಸಿ ಜಾತಿ ನಿಂದನೆ ಮಾಡುವ ಮೂಲಕ, ಸೂರತ್‌ ಕೋರ್ಟ್‌ನಿಂದ ದೋಷಿ ಎಂದು ತೀರ್ಮಾನವಾಗಿ 2 ವರ್ಷಗಳ ಶಿಕ್ಷೆ ಎದುರಿಸಿರುವ ರಾಹುಲ್‌ ಗಾಂಧಿಯನ್ನು ಲೋಕಸಭೆ ತನ್ನ ಸದಸ್ಯ ಸ್ಥಾನದಿಂದ ಅನರ್ಹ ಮಾಡಿತ್ತು. ಇದರ ಬೆನ್ನಲ್ಲಿಯೇ ವಯನಾಡ್‌ ಕ್ಷೇತ್ರದ ಮಾಜಿ ಸಂಸದ ರಾಹುಲ್‌ ಗಾಂಧಿಗೆ ಮತ್ತೊಂದು ಆಘಾತ ಎದುರಾಗಿದೆ. ಲೋಕಸಭಾ ಸದಸ್ಯರಗೆ ನೀಡಲಾಗುವ ಸರ್ಕಾರಿ ವಸತಿಯನ್ನು ಖಾಲಿ ಮಾಡುವಂತೆ ಲೋಕಸಭೆ ವಸತಿ ಸಮಿತಿ ರಾಹುಲ್‌ ಗಾಂಧಿಗೆ ನೋಟಿಸ್‌ ಜಾರಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. 2004ರಲ್ಲಿ ರಾಹುಲ್‌ ಗಾಂಧಿ ಮೊದಲ ಬಾರಿಗೆ ಲೋಕಸಭೆ ಸದಸ್ಯರಾಗು ಆಯ್ಕೆಯಾಗಿದ್ದಾಗ ಕಾಂಗ್ರೆಸ್‌ ನಾಯಕನಿಗೆ ದೆಹಲಿಯ ಲುಟೇನ್ಸ್‌ನ ತುಘಲಕ್‌ ಲೇನ್‌ನ ನಂ.12 ವಸತಿಯನ್ನು ನೀಡಲಾಗಿತ್ತು. ಉತ್ತರ ಪ್ರದೇಶದ ಅಮೇಥಿಯಿಂದ ಅವರು ಸಂಸದರಾಗಿ ಆಯ್ಕೆಯಾಗಿದ್ದರು. 2019ರ ಚುನಾವಣೆಯಲ್ಲಿ ಅಮೇಥಿ ಸೀಟ್‌ನಲ್ಲಿ ರಾಹುಲ್‌ ಗಾಂಧಿ ಸೋಲು ಕಂಡರೆ, ಅದೇ ವರ್ಷ ಚುನಾವಣೆ ಪ್ರಚಾರದಲ್ಲಿ ಮಾಡಿದ್ದ ಒಂದು ಕಾಮೆಂಟ್‌, ಪ್ರತಿಷ್ಠಿತ ಸ್ಥಳದಲ್ಲಿದ್ದ ಇವರ ವಿಳಾಸವನ್ನೂ ಬದಲಿಸಲಿದೆ. ರಾಹುಲ್‌ ಗಾಂಧಿ ತಮ್ಮ ಮನೆಯನ್ನು ಏಪ್ರಿಲ್‌ 22ರ ಒಳಗಾಗಿ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ.

ಮೋದಿ ಎನ್ನುವ ಸರ್‌ನೇಮ್ ಹೊಂದಿರುವವರೆಲ್ಲಾ ಕಳ್ಳರು ಎನ್ನುವ ಅವರ ಹೇಳಿಕೆಗೆ ಮಾನನಷ್ಟಕ್ಕಾಗಿ ಶಿಕ್ಷೆಗೊಳಗಾದ ರಾಹುಲ್ ಗಾಂಧಿ ಅವರನ್ನು ಶುಕ್ರವಾರ ಲೋಕಸಭೆಯಿಂದ ಅನರ್ಹಗೊಳಿಸಲಾಗಿದೆ. ಆದರೆ, ಅವರು ತಮ್ಮ ಅಧಿಕೃತ 12, ತುಘಲಕ್ ಲೇನ್ ನಿವಾಸವನ್ನು ಖಾಲಿ ಮಾಡಲು ಅಂದಾಜು ಒಂದು ತಿಂಗಳ ಸಮಯವಿದೆ. ಗಾಂಧಿ ಅವರನ್ನು ಅನರ್ಹಗೊಳಿಸುವ ಆದೇಶವನ್ನು ಸಂಪರ್ಕ ಅಧಿಕಾರಿ, ಎಸ್ಟೇಟ್ ನಿರ್ದೇಶನಾಲಯ, ಸಂಸತ್ತಿನ ಅನೆಕ್ಸ್‌ಗೆ ಗುರುತಿಸಲಾಗಿದೆ, ಆದರೆ ರಾಹುಲ್ ಗಾಂಧಿಯವರ ಉಚ್ಚಾಟನೆಯ ಬಗ್ಗೆ ಹರ್‌ದೀಪ್ ಸಿಂಗ್ ಪುರಿ ನೇತೃತ್ವದ ನಗರಾಭಿವೃದ್ಧಿ ಸಚಿವಾಲಯದಿಂದ ಇನ್ನೂ ಯಾವುದೇ ಮಾತುಗಳು ಬಂದಿರಲಿಲ್ಲ. ಆದರೆ, ಸೋಮವಾರ ಈ ಮಾಹಿತಿಯನ್ನು ನೀಡಲಾಗಿದೆ.

2019ರಲ್ಲಿ ಅಮೇಥಿಯಲ್ಲಿ ಸೋಲು ಕಂಡರೂ, ಟೈಪ್‌-8 ಎನ್ನುವ ಉನ್ನತ ವಿಭಾಗದಲ್ಲಿ ಬರುವ ಈ ವಸತಿಯನ್ನು ರಾಹುಲ್‌ ಗಾಂಧಿ ಉಳಿಸಿಕೊಂಡಿದ್ದರು. ಕೇರಳ ವಯನಾಡ್‌ನಲ್ಲಿ ಗೆದ್ದ ಕಾರಣಕ್ಕೆ ಬಂಗಲೆ ಉಳಿಸಿಕೊಳ್ಳಲು ರಾಹುಲ್‌ ಯಶ ಕಂಡಿದ್ದರು.

'ಡಾರ್ಲಿಂಗ್‌ ಮಾಡ್ಕೊಂಡು ಬೆಡ್‌ರೂಮ್‌ಗೆ ತಂದಿದ್ದಾರೆ..' ಸ್ಮೃತಿ ಇರಾನಿ ವಿರುದ್ಧ ಬಿವಿ ಶ್ರೀನಿವಾಸ್‌ 'ಸೆಕ್ಸಿಸ್ಟ್‌' ಹೇಳಿಕೆ!

ಅನರ್ಹರಾಗಿರುವ ರಾಹುಲ್‌ ಗಾಂಧಿಗೆ ಇನ್ನೊಂದು ಅಪಾಯ ಕೂಡ ಇದೆ. ಹಾಗೇನಾದರೂ ಮೇಲಿನ ಕೋರ್ಟ್‌ ರಾಹುಲ್‌ ಗಾಂಧಿ ವಿರುದ್ಧ ಸೂರತ್‌ ಕೋರ್ಟ್‌ ನೀಡಿರುವ ತೀರ್ಪಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿದಲ್ಲಿ, 2024ರ ಚುನಾವಣೆಗೆ ಅವರು ಸ್ಪರ್ಧೆ ಮಾಡೋದು ಕೂಡ ಸಾಧ್ಯವಾಗೋದಿಲ್ಲ. ಅಲ್ಲದೆ, 8 ವರ್ಷಗಳ ಕಾಲ ಚುನಾವಣೆಯಿಂದ ಹೊರಗುಳಿಯಬೇಕಾದ ಶಿಕ್ಷೆ ಎದುರಿಸಬೇಕಾಗುತ್ತದೆ.

ಸಾವರ್ಕರ್‌ ನಮ್ಮ ದೇವರು; ಅವಮಾನಿಸಿದರೆ ಸಹಿಸಲ್ಲ: ಕೈ ಜತೆ ಮೈತ್ರಿ ಕಡಿದುಕೊಳ್ಳುವ ಎಚ್ಚರಿಕೆ ನೀಡಿದ ಉದ್ಧವ್‌ ಠಾಕ್ರೆ

ಈ ವರ್ಷದ ಫೆಬ್ರವರಿಯಲ್ಲಿ ತಮ್ಮ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ತಮ್ಮ ಅಧಿಕೃತ ಮನೆಯ ಬಗ್ಗೆ ಉಲ್ಲೇಖಿಸಿದ್ದರು. ಕಾಂಗ್ರೆಸ್ ನಾಯಕ ತಾನು ಎಂದಿಗೂ ಸ್ವಂತ ಮನೆಯನ್ನು ಹೊಂದಿಲ್ಲ ಎಂದು ಹೇಳಿದ್ದರು ಮತ್ತು 1977 ರಲ್ಲಿ ತಮ್ಮ ಸರ್ಕಾರಿ ವಸತಿಗಳನ್ನು ತೊರೆದ ನಂತರದ ಅನುಭವವನ್ನು ನೆನಪಿಸಿಕೊಂಡಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..